ಸ್ಯಾಂಡಲ್ ವುಡ್ ನಲ್ಲಿ ವಿಚ್ಛೇದನದ ಬಿರುಗಾಳಿ ಬಹಳ ಜೋರಾಗಿಯೇ ಬೀಸುತ್ತಿದೆ. ಕೆಲವು ದಿನಗಳ ಹಿಂದೆ ಕಿರಿಕ್ ಕೀರ್ತಿ ಜೋಡಿ ಕೂಡ ವಿಚ್ಛೇದನ ಪಡೆದುಕೊಂಡು ಅಧಿಕೃತವಾಗಿ ಘೋಷಣೆ ಮಾಡಿತು. ಇದೀಗ ಮೊನ್ನೆ ಅಷ್ಟೇ 2019 ರಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದ ಜೋಡಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಕೂಡ ಕಾರಣಾಂತರಗಳಿಂದ ವಿಚ್ಛೇದನಕ್ಕೆ ಒಳಗಾಗಿದ್ದಾರೆ.
ಇತ್ತೀಚೆಗೆ ಪ್ರೆಸ್ ಮೀಟ್ ಕರೆದಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ನಮ್ಮ ಮನೆಗೆ ಸಾಮರಸ್ಯವಿಲ್ಲ. ನಮ್ಮ ಬಗ್ಗೆ ಹೊಂದಾಣಿಕೆ ಕಡಿಮೆ ಇದೆ. ನಮ್ಮಿಬ್ಬರ ಟೇಸ್ಟ್ ಡಿಫರೆಂಟ್ ಎಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇವೆ ಎಂದು ಇಬ್ಬರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ವಿಚ್ಛೇದನದ ನಂತರ ಕೂಡ ನಾವು ಸ್ನೇಹಿತರಾಗಿರಲಿದ್ದೇವೆ ಎಂದು ಕೋರ್ಟ್ ನಿಂದ ಹೊರ ಬರುವಾಗ ಕೈ ಕೈ ಹಿಡಿದು ಹೊರಬಂದಿದ್ದಾರೆ.
ಈಗ ಸ್ಯಾಂಡಲ್ ವುಡ್ ನ ದೊಡ್ಮನೆಯಲ್ಲಿ ಮತ್ತೊಂದು ಆಘಾತಕರವಾದ ಸುದ್ದಿ ಕೇಳಿ ಬಂದಿದೆ. ಅದೇನೆಂದರೆ ಯುಗ ನಟ ಯುವರಾಜ್ ಕುಮಾರ್ ಮತ್ತು ಶ್ರೀದೇವಿಯವರ ಜೋಡಿಯ ವಿಚ್ಛೇದನದ ಸುದ್ದಿ. ಇವರಿಬ್ಬರೂ ಕೂಡ 2019ರಲ್ಲಿ ಮದುವೆಯಾಗಿದ್ದರು. ದೊಡ್ಮನೆ ಎಂದ ಮೇಲೆ ಅದ್ದೂರಿಯಾಗಿಯೇ ವಿವಾಹವು ಜರುಗಿತ್ತು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅದ್ದೂರಿಯಾಗಿ ಮದುವೆಯನ್ನು ಮಾಡಿಕೊಟ್ಟಿದ್ದು ಶ್ರೀದೇವಿ ಮತ್ತು ಅಣ್ಣಾವ್ರ ಮನೆಯ ಕುಟುಂಬ.
ಆದರೆ ಶ್ರೀದೇವಿಯವರು ಮತ್ತು ಯುವರಾಜಕುಮಾರ್ ಅವರು ವಿಚ್ಛೇದನಕ್ಕೆ ಒಳಗಾಗಿದ್ದಾರೆ ಎಂದು ಇದೀಗ ಸುದ್ದಿ ಹೊರ ಬಿದ್ದಿದೆ. ಸಾಕಷ್ಟು ಆರೋಪಗಳನ್ನು ಕೂಡ ಯುವರಾಜ್‍ಕುಮಾರ್ ಅವರು ಶ್ರೀದೇವಿಯವರ ಮೇಲೆ ಮಾಡಿದ್ದಾರೆ. ಇದಕ್ಕೆ ಪ್ರತಿ ಉತ್ತರ ನೀಡಿರುವ ಶ್ರೀದೇವಿಯವರು ದೂರದ ಅಮೆರಿಕ ದೇಶದಿಂದಲೇ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಉತ್ತರವನ್ನು ಕೊಟ್ಟಿದ್ದಾರೆ.
ಯುವರಾಜ್ ಕುಮಾರ್ ಅವರು ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ. ನನಗೆ ಮಾನಸಿಕವಾಗಿ ದೈ’ಹಿಕವಾಗಿ ಇವರ ಇಡೀ ಕುಟುಂಬ ನನಗೆ ಕಿರುಕುಳವನ್ನು ನೀಡಿದೆ. ನನ್ನ ಮನಸಿಗೆ ಬಹಳ ದೊಡ್ಡ ಅ’ಘಾತವಾಗಿದೆ. ಅಷ್ಟೇ ಅಲ್ಲದೆ ಇವರಿಗೆ ಸಹ ನಟಿಯ ಜೊತೆ ಸಂಬಂಧವಿದೆ. ಜೊತೆಯಲ್ಲಿ ನಟಿಸುತ್ತಿದ್ದ ನಟಿಯ ಜೊತೆಗೆ ಸ್ನೇಹಕ್ಕೂ ಮೀರಿದ ಸಂಬಂಧವಿದೆ. ಆಕೆಯು ಸತತವಾಗಿ ಒಂದು ವರ್ಷದಿಂದ ಮನೆಗೆ ಬಂದು ಹೋಗುವುದು ಮಾಡುತ್ತಾ ಇದ್ದಳು. ಈ ವಿಚಾರ ನನಗೆ ಕೆಲವು ತಿಂಗಳುಗಳ ಹಿಂದೆ ತಿಳಿಯಿತು.
ಇದಾದ ನಂತರ ನನ್ನನ್ನು ಮನೆಯಿಂದ ಹೊರಗಟ್ಟಿದ್ದಾರೆ. ನಾನು ನನ್ನ ಭವಿಷ್ಯಕೋಸ್ಕರ ದೂರದ ಅಮೆರಿಕಾ ದೇಶಕ್ಕೆ ಬಂದು ಉನ್ನತ ವ್ಯಾಸಂಗಕ್ಕಾಗಿ ಇಲ್ಲಿಯೇ ನೆಲೆಸಿದ್ದೇನೆ. ವೃತ್ತಿಪರ ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕಾದ ವ್ಯಕ್ತಿ ಮುಕ್ತವಾಗಿ ಸಾರ್ವಜನಿಕವಾಗಿ ಒಂದು ಹೆಣ್ಣಿನ ಬಗ್ಗೆ ಕೀಳುಮಟ್ಟದ ಆರೋಪಗಳನ್ನು ಮಾಡುತ್ತಿರುವುದು ಬಹಳ ನೋವುಂಟು ಮಾಡುವ ಸಂಗತಿ. ಕಳೆದ ಕೆಲವು ತಿಂಗಳುಗಳಿಂದ ಮನೆಯ ಗೌರವಕ್ಕಾಗಿ ನಾನು ಸುಮ್ಮನೆ ಇದ್ದೆ. ಈಗ ಮಾತನಾಡುವ ಸಂದರ್ಭ ಬಂದಿದೆ ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಒಟ್ಟಾರೆ ಸ್ಯಾಂಡಲ್ವುಡ್ ನಲ್ಲಿ ಬೀಸುತ್ತಿರುವ ಈ ವಿಚ್ಛೇದನದ ಗಾಳಿ ಆದಷ್ಟು ಬೇಗ ನಿಂತು, ಎಲ್ಲ ಜೋಡಿಗಳ ಮಧ್ಯೆ ಇರುವ ಮುನಿಸುಗಳು ದೂರವಾಗಿ, ಮನಸುಗಳು ಹತ್ತಿರವಾಗಿ, ನಡುವೆ ಇರುವ ಅಂತರವು ದೂರವಾಗಿ, ಅಗ್ನಿಸಾಕ್ಷಿಯಾಗಿ ಕೋಟ್ಯಂತರ ಕನ್ನಡಿಗರ ಮುಂದೆ ಕೈ ಹಿಡಿದ ಜೋಡಿಗಳು ಸದಾ ಕಾಲ ಸುಖವಾಗಿರಲಿ ಎಂಬುದೇ ನಮ್ಮ ಆಶಯ.