ಪ್ರಕಾಶಮಾನವಾದ ನಗುವಿಗಾಗಿ ಸುಂದರ, ಮುತ್ತಿನ ಬಿಳಿ ಹಲ್ಲುಗಳನ್ನು ಕಾಯ್ದುಕೊಳ್ಳುವುದು ಮುಖ್ಯ ನಿಮ್ಮ ಹಲ್ಲುಗಳು ಹೊಳೆಯುವ ಬಿಳಿ ಬಣ್ಣವನ್ನು ಇರಿಸಿಕೊಳ್ಳಲು ಉತ್ತಮ ಪ್ರಮುಖ ಪಾತ್ರ ವಹಿಸುತ್ತದೆ.
ಅನುವಂಶಿಕ ಅಂಶಗಳಾದ ಚಹಾ ಅಥವಾ ಕಾಫಿ ವಿಪರೀತ ಬಳಕೆ ಅತಿಯಾದ ಧೂಮಪಾನ ಮತ್ತು ಬೋರ್ ನೀರಿನ ಬಳಕೆ ಹಲ್ಲುಗಳು ಕಲೆ ಮತ್ತು ಹಳದಿ ಬಣ್ಣದ ಕಲೆಗಳು ಕಾಣಿಸಬಹುದು.
ಮಾರುಕಟ್ಟೆಯಲ್ಲಿ ಹಲವು ಹಲ್ಲುಗಳು ಬಿಳಿಮಾಡುವ ಉತ್ಪನ್ನಗಳಿವೆ ಅಥವಾ ನಿಮ್ಮ ದಂತವೈದ್ಯರಿಂದ ನೀವು ಬಿಳಿಮಾಡುವ ಚಿಕಿತ್ಸೆಯನ್ನು ಆರಿಸಿಕೊಳ್ಳಬಹುದು ಆದರೆ ಈ ಆಯ್ಕೆಗಳು ನಿಮಗೆ ದುಬಾರಿ ಭಾರವಾಗಿರುತ್ತದೆ.
ಒಂದು ಸುಂದರವಾದ ಮುಗುಳುನಗೆಗೆ ಕೆಲವು ಸರಳ ಮತ್ತು ಅಗ್ಗದ ನೈಸರ್ಗಿಕ ಹಲ್ಲುಗಳು ಬಿಳಿಮಾಡುವ ಮನೆ ಪರಿಹಾರಗಳು ಇರುವುದರಿಂದ ಚಿಂತಿಸಬೇಕಾಗಿಲ್ಲ.
ಸರಳ ಉಪಾಯವೆಂದರೆ ಮೊದಲು ಸ್ವಲ್ಪ ನಿಮ್ಮ ಟೂತ್ಪೇಸ್ಟ್ ಅನ್ನು ¼ ಟೀಸ್ಪೂನ್ ಅಡುಗೆ ಸೋಡದೊಂದಿಗೆ ಮಿಶ್ರಣ ಮಾಡಿ ಒಂದು ವಾರಕ್ಕೆ ಒಮ್ಮೆಯಾದರು ಅದರಿಂದ ನಿಮ್ಮ ಹಲ್ಲನ್ನು ಉಜ್ಜಿ ಸ್ವಚ್ಛಗೊಳಿಸಿ ಅಡುಗೆ ಸೋಡದಲ್ಲಿ ಅಪಘರ್ಷಕ ಸ್ವಭಾವ ಇರುವುದರಿಂದ ನಿಮ್ಮ ಹಲ್ಲಿನ ಮೇಲಿರುವ ಹಳದಿಯನ್ನು ನೀಗಿಸಿ ಹೊಳಪು ಮೂಡಿಸುತ್ತದೆ.
ಅತಿ ಮುಖ್ಯವಾಗಿ ಈ ರೀತಿ ಮಾಡಿದ ಸ್ವಲ್ಪ ಸಮಯ ಆಹಾರ ಸೇವನೆ ಮಾಡಬೇಡಿ ವಾರದಲ್ಲಿ ಒಮ್ಮೆ ಮಲಗುವ ಮುನ್ನ ರಾತ್ರಿ ನಿಮ್ಮ ಹಲ್ಲುಗಳ ಮೇಲೆ ತಾಜಾ ಕಿತ್ತಳೆ ಸಿಪ್ಪೆ (ಒಳಗೆ ಭಾಗ) ರಬ್ ಮಾಡುವುದು ಇನ್ನೊಂದು ಉತ್ತಮ ಆಯ್ಕೆಯಾಗಿದೆ ನಿಮ್ಮ ಹಲ್ಲಿನ ಮೇಲೆ ಹಳದಿ ಛಾಯೆಯನ್ನು ಕಡಿಮೆ ಮಾಡಲು ಈ ವಿಧಾನವು ಸಹಕಾರಿ.