ಮೊಳಕೆಕಾಳು ತಿನ್ನುವುದರಿಂದ ಎಷ್ಟೆಲ್ಲ ಲಾಭಗಳಿವೆ ಗೊತ್ತಾ..!

0
2053

ಹೌದು ಮೊಳಕೆಕಾಳಿನಲ್ಲಿ ಹಲವು ರೋಗನಿರೋಧಕ ಶಕ್ತಿಗಳಿವೆ, ಮೊಳಕೆಕಾಳಿನಲ್ಲಿ ಹಲವು ಉತ್ತ್ತಮ ಆರೋಗ್ಯಕ್ಕೆ ಸಹಕಾರಿಯಾಗುವ ಅಂಶಗಳು ಇವೆ, ಅದರಲ್ಲೂ ಮನುಷ್ಯನ ದೇಹಕ್ಕೆ ಮೊಳಕೆಕಾಳು ಇನ್ನು ಉತ್ತಮ ಹೇಗೆ ಅಂತೀರಾ ಇಲ್ಲಿದೆ ನೋಡಿ.

ಜೀರ್ಣಕ್ರಿಯೆಗೆ ಹೆಚ್ಚು ಸಹಾಯಕವಾಗಿದೆ : ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಮೊಳಕೆ ಕಾಳು ತಿನ್ನುವುದು ಒಳ್ಳೆಯದು, ಇದರಲ್ಲಿರುವ ಪೋಷಕಾಂಶಗಳು ಆಹಾರವನ್ನು ಸರಿಯಾಗಿ ಜೀರ್ಣವಾಗಲು ಸಹಕರಿಸುತ್ತದೆ.

ರಕ್ತ ಪರಿಚಲನೆಗೆ ಉತ್ತಮವಾದ ಆಹಾರವಾಗಿದೆ : ರಕ್ತ ಪರಿಚಲನೆಗೆ ಮೊಳಕೆ ಕಾಳಿನ ಸೇವನೆ ಉತ್ತಮ, ಇದರಲ್ಲಿ ಕಬ್ಬಿಣ ಮತ್ತು ತವರದ ಅಂಶ ಸಾಕಷ್ಟಿದ್ದು, ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಎಷ್ಟು ಬೇಕೋ ಅಷ್ಟು ಇರುವಂತೆ ನೋಡಿಕೊಳ್ಳುತ್ತದೆ.

ತೂಕ ಇಳಿಸುವರಿಗೆ ಇದು ಇನ್ನು ಉತ್ತಮ : ತೂಕ ಇಳಿಸಲು ಡಯಟ್ ಮಾಡುವವರಮ ಆಹಾರದಲ್ಲಿ ಮೊಳಕೆ ಕಾಳು ಇರಲೇ ಬೇಕು, ಇದರಲ್ಲಿ ಫೈಬರ್ ಅಂಶ ಸಾಕಷ್ಟಿದ್ದು, ಹೊಟ್ಟೆ ತುಂಬಿರುವಂತೆ ಮಾಡುತ್ತದೆ, ಇದರಿಂದಾಗಿ ಆಗಾಗ ತಿನ್ನಬೇಕಾಗುವುದಿಲ್ಲ, ನಾಲಿಗೆ ಮೇಲೂ ಕಡಿವಾಣ ಹಾಕಬಹುದು.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ : ಮೊಳಕೆ ಕಾಳಿನಲ್ಲಿ ವಿಟಮಿನ್ ಸಿ ಅಂಶ ಸಾಕಷ್ಟಿರುವುದರಿಂದ ರೋಗ ನಿರೋಧಕ ಶಕ್ತಿಯಿದೆ, ಅಂತೆಯೇ ಇದರಲ್ಲಿ ವಿಟಮಿನ್ ಎ ಅಂಶವೂ ಇದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here