ಆರೋಗ್ಯವೇ ಭಾಗ್ಯ ಎನ್ನುವ ವಾಖ್ಯೆ ಯಾರಿಗೆ ತಾನೇ ಗೊತ್ತಿಲ್ಲ, ಇನ್ನು ಆರೋಗ್ಯಕ್ಕಾಗಿ ಏನು ಮಾಡಬಹುದು, ಒಳ್ಳೆಯ ಆಹಾರ, ಉತ್ತಮ ವ್ಯಾಯಾಮ ಹಾಗು ಸರಿಯಾದ ಸಮಯದ ನಿದ್ರೆ ಹೀಗೆ ಹಲವು ಸಣ್ಣ ಪುಟ್ಟ ಕೆಲಸಗಳನ್ನು ನಾವು ಖಂಡಿತವಾಗಿಯೂ ನಮ್ಮ ಆರೋಗ್ಯಕ್ಕಾಗಿ ಮಾಡುತ್ತಲೇ ಇರುತ್ತೇವೆ, ಉದಾಹರಣೆಗೆ ಮುಂಜಾನೆ ಪಾರ್ಕಿನಲ್ಲಿ ಸಾರ್ವಜನಿಕರ ವಾಕಿಂಗ್ ಹಾಗು ಇತರ.
ಉಳಿದಂತೆ ನಿಮ್ಮ ಅರೋಗ್ಯ ಕಾಯುವ ಮುಖ್ಯ ಕೆಲಸ ಮಾಡುವುದು ನೀವು ಸೇವಿಸುವ ಆಹಾರ ಅಲ್ಲವೇ, ಟೀ ಕಾಫಿ ಧೂಮಪಾನ ಮದ್ಯಪಾನ ಅತಿಯಾದ ಆಹಾರ ಸೇವನೆ ಕೊಲೆಸ್ಟ್ರಾಲ್ ತುಂಬಿರುವ ಆಹಾರ ಸೇವನೆ ಗುಣಗಳಿಗೆ ಒಳಗಾಗುವುದು, ಜಿಡ್ಡು ಹೆಚ್ಚಾಗಿರುವ ಪದಾರ್ಥಗಳ ಸೇವನೆ, ಕರಿದ ತಿಂಡಿಗಳನ್ನು ಹೆಚ್ಚಾಗಿ ಸೇವಿಸುವುದು ಅನಾರೋಗ್ಯಕ್ಕೆ ಒಳಗಾದಾಗ ನಿರ್ಲಕ್ಷ್ಯ ತೋರುವುದು, ಮನಸ್ಸನ್ನು ಕಳವಳಕ್ಕೆ ಒಳಪಡಿಸಿಕೊಳ್ಳುವುದು ಸ್ವಚ್ಛತೆಗೆ ಪ್ರಾಧ್ಯಾನ್ಯತೆ ಕೊಡದಿರುವುದು, ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಸಂಪರ್ಕ, ಕೋಪ ಆವೇಶ ಆಕ್ರೋಶ ಚಿಂತೆ ವೇದನೆ ದ್ವೇಷ ಮುಂತಾದವುಗಳಿಗೆ ಹೆಚ್ಚಾಗಿ ಒಳಗಾಗುವುದು.
ದೇಹವನ್ನು ಯಥೇಚ್ಛವಾಗಿ ದಂಡಿಸಿ ಅಂದರೆ ವಿಶ್ರಾಂತಿ ಎಂಬುದು ಕೊಡದೆ ಶಕ್ತಿಗೆ ಮೀರಿ ಕೆಲಸ ಕಾರ್ಯಗಳನ್ನು ಮಾಡುವುದು, ಕೆಟ್ಟ ಸ್ನೇಹಿತರ ಸಾವಾಸ ಮಾಡುವುದು, ಅವಶ್ಯಕತೆಗೆ ಮೀರಿದ ಧೈರ್ಯ ಮತ್ತು ಆತ್ಮವಿಶ್ವಾಸ ಹೊಂದಿರುವುದು, ನಕಾರಾತ್ಮಕ ಭಾವನೆಗಳನ್ನು ಹೊಂದಿರುವುದು, ಹೆಚ್ಚಾಗಿ ಭಯಪಡುವುದು, ಹೆಚ್ಚಾಗಿ ಅನುಮಾನ ಪಡುವುದು, ಸೋಮಾರಿತನ ಹೆಚ್ಚಾಗಿರುವುದು, ನಿದ್ರಾಹೀನತೆ ಇವೆಲ್ಲವೂ ನಮ್ಮ ಆರೋಗ್ಯ ನಾಶ ಮಾಡುತ್ತದೆ, ಆದ ಕಾರಣದಿಂದ ಇವುಗಳ ಬಗ್ಗೆ ಆರೋಗ್ಯ ಸಕ್ರಮವಾಗಿರುವಾಗಲೇ ಹೆಚ್ಚು ಜಾಗ್ರತೆ ವಹಿಸಬೇಕು.
ನಮ್ಮ ಆರೋಗ್ಯವು ಕೆಡಲು ಅಂದರೆ ನಾವು ಅನಾರೋಗ್ಯಕ್ಕೆ ಒಳಗಾಗಲು 1 ಪ್ರಮುಖ ಕಾರಣವಿದೆ, ಅಂದರೆ ನಾವು ಸೇವಿಸುವ ಕೆಟ್ಟ ಪದಾರ್ಥಗಳು ಮತ್ತು ಕೆಟ್ಟ ಗುಣಗಳು ಮಾತ್ರವಲ್ಲದೆ ಮತ್ತೊಂದು ಪ್ರಮುಖ ವಿಚಾರವು ಅನಾರೋಗ್ಯಕ್ಕೆ ಪ್ರಧಾನ ಕಾರಣವಾಗಿರುತ್ತದೆ, ಆ ಪ್ರಮುಖ ವಿಚಾರ ಏನು ಅಂದರೆ ನಾವು ಮಾಡುವ ಪಾಪ ಕಾರ್ಯಗಳು, ಆದ್ದರಿಂದ ನಮ್ಮ ಆರೋಗ್ಯವು ಸುರಕ್ಷಿತವಾಗಿರಬೇಕಾದರೆ ನಾವು ಸೇವಿಸುವ ಆಹಾರದ ಬಗ್ಗೆ ಮತ್ತು ನಮ್ಮ ಪ್ರವರ್ತನೆಗಳ ಬಗ್ಗೆ ಹೆಚ್ಚು ಜಾಗ್ರತೆಯನ್ನು ವಹಿಸುವುದರ ಜೊತೆಗೆ ಪಾಪಕಾರ್ಯಗಳನ್ನು ಮಾಡದಂತೆ ನಾವು ಜಾಗ್ರತೆ ವಹಿಸಬೇಕು, ಪಾಪಕಾರ್ಯಗಳನ್ನು ಮಾಡದೇ ನಮ್ಮ ಬುದ್ಧಿ ಮನಸ್ಸು ಇಂದ್ರಿಯಗಳನ್ನು ನಿಗ್ರಹಿಸಿ ಬೇಕು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.