ಅತಿ ನವೆಯನ್ನು ಉಂಟುಮಾಡುವ ತುರಿಕೆಯು itch-mite ಎಂದು ಕರೆಯಲ್ಪಡುವ ಕಿರು ಜೀವಿಗಳಿಂದ ಉಂಟಾಗುತ್ತದೆ, ಉತ್ತಮ ಆರೋಗ್ಯದಿಂದ ಇದ್ದು, ನೈರ್ಮಲ್ಯ ವಾತಾವರಣದಲ್ಲಿ ವಾಸ ಮಾಡುವವರಲ್ಲಿ ಇದು ಸಾಮಾನ್ಯವಾಗಿ ಕಂಡು ಬರುವುದಿಲ್ಲ, ಹೆಣ್ಣು itch mite ಕೀಟವು ಚರ್ಮದ ಹೊರ ಪದರಗಳಲ್ಲಿ ಕೊರೆದು ದಾರಿ ಮಾಡಿಕೊಂಡು ತನ್ನ ಮೊಟ್ಟೆಗಳನ್ನು ಇಡುತ್ತದೆ, ಕೆಲವೇ ದಿನಗಳಲ್ಲಿ ಈ ಕೀಟಗಳು ಮರೆಯಾಗಿ ಚರ್ಮದ ಕೂದಲಿನ ಮೂಲಗಳಲ್ಲಿ ಕೂಡುತ್ತವೆ.
ಇದರಿಂದ ಕಜ್ಜಿಯು ಸಂಭವಿಸುತ್ತದೆ, ಹಾಗೂ ಸುಲಭವಾಗಿ ಈ ಕಜ್ಜಿಯೂ ಒಬ್ಬರಿಂದೊಬ್ಬರಿಗೆ ಬೇಗನೆ ಅಂಟುತ್ತದೆ, ಇದರಿಂದ ಕುಟುಂಬದ ಒಬ್ಬರಿಗೆ ಈ ಸಮಸ್ಯೆ ಬಂದಾಗ ಕುಟುಂಬದ ಪ್ರತಿಯೊಬ್ಬರೂ ಚಿಕಿತ್ಸೆ ಮಾಡಿಸಿ ಕೊಳ್ಳಬೇಕಾಗುತ್ತದೆ.
ರಾತ್ರಿ ಸಮಯದಲ್ಲಿ ಕೆರೆತ ಹೆಚ್ಚಾಗುತ್ತದೆ, ಜನನೇಂದ್ರಿಯ ಭಾಗಗಳು, ಬೆರಳುಗಳ ನಡುವಿನ ಭಾಗವು, ಮೊಲೆತೊಟ್ಟುಗಳ ಸುತ್ತಲಿನ ಭಾಗ, ಸೊಂಟದ ವರ್ತುಲ ಇವುಗಳಲ್ಲಿ ಮೊದಲು ಕೆರೆತ ಉಂಟಾಗುತ್ತದೆ, itch mite ಗಳು ಮಾಡಿಕೊಂಡ ದಾರಿ ಕೆಲವು ವೇಳೆ ಕಪ್ಪು ಗೆರೆಗಳಂತೆ ಕಂಡುಬರುತ್ತದೆ, ಹಲವು ವೇಳೆ ಊತವು ಕೊರೆತದ ಗುರುತುಗಳು, ಅಲ್ಲದೆ ಕೆರಳಿದ ಭಾಗಗಳಲ್ಲಿ ಸ್ಥಳೀಯವಾದ ಇಸಬು ಕಂಡುಬರುವುದು, ಇವುಗಳು ಕಣ್ಣಿಗೆ ಕಾಣಿಸದ ರೀತಿಯಲ್ಲಿ ಮುಚ್ಚಿ ಬಿಡುತ್ತದೆ.
ಧಾರಾಳವಾಗಿ ಸಾಬೂನನ್ನು ಬಳಸುತ್ತಾ ಬಿಸಿ ನೀರಿನ ಸ್ನಾನದ ತೊಟ್ಟಿಯಲ್ಲಿ ಇಡೀ ದೇಹವನ್ನು ಕನಿಷ್ಠಪಕ್ಷ 20 ನಿಮಿಷಗಳ ಕಾಲ ಮುಳುಗಿಸಿ ಇಡಬೇಕು, ನೆವೆ ಆಗುವ ಭಾಗಗಳಿಗೆ ಹೆಚ್ಚು ಗಮನ ಕೊಟ್ಟು ಚೆನ್ನಾಗಿ ಉಜ್ಜಬೇಕು, ಮೇಲಿನ ಉಡುಪುಗಳನ್ನು ಬಿಸಿ ಪೆಟ್ಟಿಗೆಯಿಂದ ತಿಕ್ಕಬೇಕು, ಶಾಖವು ಬಟ್ಟೆ-ಬರೆ ಗಳಲ್ಲಿರುವ ಪರೋಪಜೀವಿಗಳನ್ನು ನಾಶ ಮಾಡುತ್ತದೆ, ಬಟ್ಟೆಯಲ್ಲಿ ಹೋಲಿಗೆಗೆ ವಿಶೇಷ ಗಮನ ಕೊಡಬೇಕು, ತೀವ್ರವಾದ ಕೆರೆತ ಕಂಡು ಬಂದಲ್ಲಿ ಸಿಯೋಮಾಯಿಸಿನ್ ಮುಲಾಮು ಹಚ್ಚಬೇಕು.