ಕಾಲದ ಜೊತೆಯಲ್ಲಿ ಜನರ ಅಭ್ಯಾಸಗಳು ಬದಲಾಗುವುದು ಸಾಮಾನ್ಯ, ಇಂದಿನ ಪೀಳಿಗೆ ಕುಡಿತ, ಸಿಗರೇಟ್ ಎನ್ನುವ ಹಲವು ಚಟಗಳಿಗೆ ಬಲಿಯಾಗಿದ್ದಾರೆ, ಈಗಿನ ಯುವ ಪೀಳಿಗೆಗೆ ಸಿಗರೇಟ್ ಬರಿ ಚಟವಲ್ಲ ಜೊತೆಗೆ ಫ್ಯಾಶನ್, ಸಿಗರೇಟ್ ಸೇದುವುದರಲ್ಲಿ ವಿಧಾನಗಳಿವೆ, ಕೆಲವರಿಗೆ ಬರಿ ಸಿಗರೇಟ್ ಇದ್ದರೆ ಸಾಕು ಆದರೆ ಇನ್ನು ಕೆಲವರಿಗೆ ಸಿಗರೇಟ್ ಸೇದುವುದು ಒಂದು ಕಪ್ಪು ಬೇಕೇ ಬೇಕು, ಆದರೆ ನೂತನ ಸಂಶೋಧನೆಯೊಂದು ಹೇಳುವ ಪ್ರಕಾರ ಟೀ ಜೊತೆಗೆ ಸಿಗರೇಟ್ ಸೇದುವವರಿಗೆ ಅಪಾಯ ಕಟ್ಟಿಟ್ಟ ಬುತ್ತಿ.
ಸಿಗರೇಟ್ ಸೇದುವುದನ್ನು ಸ್ನೇಹಿತರ ಜೊತೆ ತಮಾಷೆಗೆಂದು ಮೊದಲು ಶುರು ಮಾಡಿ, ನಂತರ ಸಿಗರೇಟ್ ಒಂದು ಚಟವಾಗಿ ಪರಿಣಮಿಸಿ ಕ್ಯಾನ್ಸರ್ನಂತಹ ದೊಡ್ಡ ಕಾಯಿಲೆಗೆ ಶರಣಾಗಬೇಕಾಗುತ್ತದೆ, ಅಷ್ಟೇ ಅಲ್ಲದೆ ಉಸಿರಾಟದ ತೊಂದರೆಗಳು ಬರುತ್ತದೆ, ಇನ್ನು ಟೀ ಜೊತೆಗೆ ಸಿಗರೇಟ್ ಸೇದುವ ಅಭ್ಯಾಸವಿದ್ದರೆ ಆರೋಗ್ಯದ ಹಾನಿ ಅಷ್ಟಿಷ್ಟಲ್ಲ.
ಧೂಮಪಾನದಿಂದ ಕ್ಯಾನ್ಸರ್ ಬರುತ್ತದೆ, ಆದರೆ ಟೀ ಒಟ್ಟಿಗೆ ಸಿಗರೇಟ್ ಅಥವಾ ಬೀಡಿ ಸೇದಿದರೆ ಗಂಟಲು ಮತ್ತು ಹೊಟ್ಟೆ ಎರಡಕ್ಕೂ ಸಂಬಂಧಿಸಿದ ರೋಗಗಳು ಬರುತ್ತವೆ, ಕಾರಣ ಸಿಗರೇಟ್ ಜೊತೆಗೆ ಟೀ ಕುಡಿಯುವುದರಿಂದ ಎಸ್ಸೋಫೆಸಲ್ ಎಂಬುವ ಮಾರಣಾಂತಿಕ ಕ್ಯಾನ್ಸರ್ ಬಹುಬೇಗ ನಿಮ್ಮನ್ನು ಆವರಿಸುತ್ತದೆ, ಟೀ ಜೊತೆಗೆ ಸಿಗರೇಟ್ ಸೇದುವವರಿಗೆ ಈ ಕೆನ್ಸರ್ ಐದು ಪಟ್ಟು ಬೇಗ ಬರುತ್ತದೆ.
ಇಷ್ಟಕ್ಕೆ ಮುಗಿಯುವುದಿಲ್ಲ ಜೊತೆಯಲ್ಲಿ ಹೊಟ್ಟೆ ಹಾಗೂ ಗಂಟಲಿನ ಮೇಲೆ ನೇರ ಪರಿಣಾಮ ಬೀರುತ್ತದೆ, ಈ ಕ್ಯಾನ್ಸರ್ ಒಮ್ಮೆ ಬಂದರೆ ಜೀವ ತೆಗೆದು ಬಿಡುತ್ತದೆ, ಬಿಸಿ ಟೀ ಮತ್ತು ಸಿಗರೇಟ್ ಸೇವನೆಯಿಂದ ಟ್ಯೂಮರ್ ನಂತಹ ಸಮಸ್ಯೆಗಳು ಕಾಡುವುದುಂಟು, ಅಷ್ಟೇ ಅಲ್ಲದೆ ತಂಬಾಕಿನಲ್ಲಿ ಸೈನೈಡ್, ಬೆಂಜೈನ್, ಫಾರ್ಮಲ್ ಡೀಹೈಡ್, ಮೆಥಾನಾಲ್, ಆಸಿಟಿಲಿನೆ, ಅಮೋನಿಯಂ ರಾಸಾಯನಿಕಗಳಿರುತ್ತವೆ.
ಅವುಗಳಲ್ಲಿದೆ ಧೂಮಪಾನದಲ್ಲಿ ಥಾರ್, ವಿಷಕಾರಕ ಅನಿಲಗಳು ದೇಹವನ್ನು ಸೇರಿ, ನಮ್ಮ ದೇಹದಲ್ಲಿ ಸಂಗ್ರಹವಾಗುತ್ತಾ ಹೋಗುತ್ತದೆ. ಇದರಿಂದ ದೇಹದಲ್ಲಿ ವಿಷಕಾರಕ ರಾಸಾಯನಿಕಗಳ ಪ್ರಮಾಣ ಹೆಚ್ಚಾಗಿ ಕ್ಯಾನ್ಸರ್, ಹೃದಯದಲ್ಲಿ ತೂತು ಇವುಗಳು ಉಂಟಾಗಿ ತುಂಬಾ ನೋವು ಅನುಭವಿಸಿ ಸಾಯಬೇಕಾದ ಪರಿಸ್ಥಿತಿ ಉಂಟಾಗುವುದು. ಎಂದು ಸಂಶೋಧನೆ ತಿಳಿಸಿದೆ.