ಸಕ್ಕರೆ ಮತ್ತು ಜೇನನ್ನು ಈ ರೀತಿ ಬಳಸಿ ನಿಮ್ಮ ತುಟಿಯ ಅಂದವನ್ನು ಹೆಚ್ಚಿಸಿಕೊಳ್ಳಿ..

0
2228

ಸೌಂದರ್ಯದ ವಿಷಯಕ್ಕೆ ಬಂದಾಗ, ನಿಮ್ಮ ತುಟಿಗಳನ್ನು ನೀವು ನಿರ್ಲಕ್ಷಿಸಲು ಸಾಧ್ಯವಿಲ್ಲ. ಮೃದು, ಗುಲಾಬಿ ತುಟಿಗಳು ನಿಮ್ಮ ಮುಖದ ನೋಟವನ್ನು ಹೆಚ್ಚಿಸುತ್ತವೆ, ಬಿರುಕುಗಳು ಮತ್ತು ಗಾಢ ತುಟಿಗಳು ನಿಮ್ಮ ಒಟ್ಟಾರೆ ಸೌಂದರ್ಯವನ್ನು ಹಾಳುಮಾಡುತ್ತವೆ, ಹಾಗಾಗಿ ನಿಮ್ಮ ತುಟಿಯ ಸೌಂದರ್ಯವನ್ನು ಕಾಪಾಡಿಕೊಳ್ಳಲು ಅಥವಾ ಹೆಚ್ಚಿಸಿಕೊಳ್ಳಲು ಇಲ್ಲಿದೆ ಉತ್ತಮ ಸಲಹೆಗಳು.

ಸೀಳು ಬಿಟ್ಟ ಅಥವಾ ಒಣಗುವ ತುಟಿ ಆರೈಕೆಗೆ ಹೊರಗೆ ಖರೀದಿಸಿ ತಂದ ಉತ್ಪನ್ನಗಳನ್ನು ಬಳಸುವುದರ ಬದಲಿಗೆ ಕೆಲವು ಸುಲಭ ಮನೆ ಪರಿಹಾರವನ್ನು ಮಾಡಿಕೊಳ್ಳುವುದು ಒಳ್ಳೆಯದು ಕಾರಣ ಉತ್ಪನ್ನಗಳನ್ನು ನೇರ ಸೂರ್ಯನ ಬೆಳಕನ್ನು ಅತಿಯಾಗಿ ಆಕರ್ಷಿಸಲ್ಪಡುವುದು ಹಾಗು ಇದರ ಜೊತೆಯಲ್ಲಿ ವಿಪರೀತ ಧೂಮಪಾನ, ಅಧಿಕ ಕೆಫೀನ್ ಸೇವನೆ ಮತ್ತು ಹಾರ್ಮೋನುಗಳ ಅಸಮತೋಲನಗಳು ಶುಷ್ಕ ಮತ್ತು ಗಾಢ ತುಟಿಗಳಿಗೆ ಕಾರಣವಾಗಬಹುದು.

ನಿಮ್ಮ ಸುಂದರವಾದ ಮುಗುಳುನಗೆಯನ್ನ ಹೆಚ್ಚಿಸಲು ನಿಮ್ಮ ತುಟಿಗಳ ಮೃದುತ್ವ ಮತ್ತು ನೈಸರ್ಗಿಕ ಗುಲಾಬಿ ಬಣ್ಣವನ್ನು ಪುನಃಸ್ಥಾಪಿಸಲು, ಸಕ್ಕರೆ ಮತ್ತು ಜೇನು ಬಳಸ ಬಹುದು, ಹಾಗು ಅದನ್ನು ಹೇಗೆ ಬಳಸ ಬೇಕು ಎಂಬುದನ್ನು ಮುಂದೆ ಓದಿ.

2 ಟೀ ಚಮಚ ಸಕ್ಕರೆ ಮತ್ತು 1 ಟೀಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ ಮತ್ತು ಒಂದು ವಾರಕ್ಕೊಮ್ಮೆ, ಒಂದೆರಡು ನಿಮಿಷಗಳ ಕಾಲ ನಿಮ್ಮ ತುಟಿಗಳನ್ನು ನಿಧಾನವಾಗಿ ಮಸಾಜ್ ಮಾಡಿ. ಇದು ಸತ್ತ ಚರ್ಮ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಫ್ಲೇಕ್-ಮುಕ್ತ ತುಟಿಗಳಿಂದ ನಿಮಗೆ ಬಿಡುಗಡೆ ನೀಡುತ್ತದೆ.

ನಿಮ್ಮ ತುಟಿಗಳನ್ನು ಮೃದುಗೊಳಿಸಲು ಆಲೀವ್ ಅಥವಾ ತೆಂಗಿನ ಎಣ್ಣೆಯಿಂದ ಕೂಡ ಒಮ್ಮೆ ಅಥವಾ ಎರಡು ಬಾರಿ ಉಪಯೋಗಿಸ ಬಹುದು, ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ, ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳುವುದು ಒಂದು ಒಳ್ಳೆಯ ವಿಚಾರ.

LEAVE A REPLY

Please enter your comment!
Please enter your name here