ಸ್ತ್ರೀ ರೂಪದಲ್ಲಿರುವ ಗಣೇಶನನ್ನು ಇಲ್ಲಿ ನೀವು ನೋಡಬಹುದು, ಹಿಂದೆ ಉದ್ದನೆಯ ಜಡೆ ಹೊಂದಿರುವ ಈ ಗಣಪತಿಗೆ ಜಡೆ ಗಣಪತಿ ಎಂದು ನಾಮಕರಣ ವಾಗಿ ಪ್ರಸಿದ್ಧ ತೆಯನ್ನು ಪಡೆಯುತ್ತಿದೆ, ಸ್ತ್ರೀರೂಪ ಎಂದರೆ ಗಣಪತಿಯ ತಾಯಿ ಸಾಕ್ಷಾತ್ ಪಾರ್ವತಿಯ ರೂಪ ಇದು, ಅಷ್ಟೇ ಅಲ್ಲದೆ ಈ ಜಡೆ ಗಣಪತಿಯ ಕೈಯಲ್ಲಿ ಉಗ್ರ ನರಸಿಂಹ ಸ್ವಾಮಿಯು ಆಸೀನನಾಗಿದ್ದಾನೆ ಎನ್ನಲಾಗಿದೆ, ಈ ವಿಶಿಷ್ಟ ಕಾರಣಗಳಿಂದಲೇ ಜಡೆ ಗಣಪತಿಯನ್ನು ಅಪೂರ್ವ ಗಣೇಶ ಎಂದು ಭಕ್ತರು ಕರೆಯುತ್ತಾರೆ.
ಜಡೆ ಗಣಪತಿ ದೇವಾಲಯವು ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿರುವುದು ಮತ್ತು ಕೇತು ದೋಷ ನಿವಾರಣೆಯಾಗಿ, ಈ ದೇವಾಲಯದಲ್ಲಿರುವ ಏಕಶಿಲಾ ಮೂರ್ತಿ ಯಾದ ಜಡೆ ಗಣಪತಿ ಬಲು ಆಕರ್ಷಕ, ಈ ಮೂರ್ತಿಯನ್ನು ನೋಡಲು ಎರಡು ಕಣ್ಣುಗಳು ಸಾಲದು, ಇಲ್ಲಿನ ಏಕಶಿಲಾ ಮೂರ್ತಿ ಯು ತನ್ನದೇ ಆದ ವೈಶಿಷ್ಟವನ್ನು ಹೊಂದಿದ್ದು ಶಿಲ್ಪ ಆಗಮಶಾಸ್ತ್ರ ದ ಪ್ರಕಾರ ಒಟ್ಟು 21 ಗಣಪತಿ ಪ್ರಭೇದಗಳಿವೆ, ಅದರಲ್ಲಿ ಒಂದು ಪ್ರಸನ್ನ ಗಣಪತಿ ಈ ಮೂರ್ತಿಗೆ ನಾಲ್ಕು ಕೈಗಳು ಇರುತ್ತವೆ, ಮೇಲಿರಲು ಕ್ಕೈಗಳಲ್ಲಿ ಪಾಶಾ ಮತ್ತು ಅಂಕುಶ ಗಳಿದ್ದರೆ ಕೆಳಗೆ ಇರುವ ಇನ್ನೆರಡು ಕೈಗಳು ಅಭಯ ವರದ ಮುದ್ರೆ ಪ್ರದರ್ಶನ ಮಾಡುತ್ತವೆ, ಪ್ರಸನ್ನ ಮುಖಮುದ್ರೆ ಇರುವುದರಿಂದ ಈ ಗಣಪತಿಗೆ ಪ್ರಸನ್ನ ಗಣಪತಿ ಎಂದು ಹೆಸರು ಬಂದಿದೆ, ಪ್ರಸನ್ನ ಗಣಪತಿ ಆಭರಣ ಪ್ರಿಯ, ನರಸಿಂಹಸ್ವಾಮಿ ಹಾಗೂ ಸುಬ್ರಹ್ಮಣ್ಯಸ್ವಾಮಿಯ ಅಂಶವನ್ನು ಹೊಂದಿರುವ ದೇವತೆ, ಗಣಪತಿ ಮೂಲಾಧಾರ ಕ್ಷೆತ್ರಸ್ತಿತನಾಗಿ ಕುಂಡಲಿ ಶಕ್ತಿ ಪ್ರಚೋದಕರಾಗಿ ಉಗ್ರ ಸ್ವಾಮಿಯೊಂದಿಗೆ ನೆಲೆಸಿದ್ದಾನೆ, ತಮ್ಮ ತಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ಅನೇಕ ಭಕ್ತರು ಇಲ್ಲಿ ಬಂದು ಬೇಡಿಕೆಯನ್ನು ಇಡುತ್ತಾರೆ ಇವರ ಎಲ್ಲಾ ಬೇಡಿಕೆಗಳನ್ನು ನೆರವೇರಿಸುತ್ತಾ ಅಪಾರ ನಂಬಿಕೆಯನ್ನು ಸಂಪಾದಿಸಿದ್ದಾನೆ ಈಗ ಗಣಪ.
ಶ್ರೀ ಕೋಲ್ಕತ್ತಾ ಬ್ರಹ್ಮ ವಿದ್ಯ ಜ್ಯೋತಿಷ್ಯ ಶಾಸ್ತ್ರಂ. ಶ್ರೀ ಕೋಲ್ಕತ್ತಾ ಕಾಳಿ ಮತ್ತು ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ – 944 888 6845
ಈ ದೇವಸ್ಥಾನದ ಎರಡನೇ ವಿಶೇಷ ಏನೆಂದರೆ ಮದುವೆ, ಸಂಪತ್ತು, ಐಶ್ವರ್ಯ, ಸಂತಾನ ಭಾಗ್ಯ ಈ ರೀತಿಯ ಹಲವು ಸಂಸಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಹುಬೇಗ ಪರಿಹರಿಸುವ ಶಕ್ತಿಶಾಲಿ ಗಣಪ ಎಂದು ಪ್ರಸಿದ್ಧಿಯನ್ನು ಪಡೆದಿದೆ, ನಿಮಗೆ ಗೊತ್ತಿರಲಿ ಪ್ರಪಂಚದ ಯಾವುದೇ ಮೂಲೆಯಲ್ಲೂ ನೋಡಲು ಸಿಗದ ಗಣಪ ಇದಾಗಿದ್ದು ಈ ಗಣಪನಿಗೆ ಒಂದೇ ಸಮಯದಲ್ಲಿ ಪುರುಷರು ಮತ್ತು ಮಹಿಳೆಯರು ಪೂಜೆ ಮಾಡುತ್ತಾರೆ ಹಾಗೂ ಗಣಪನ ಹಿಂಬದಿಯಲ್ಲಿ ಕೇವಲ ಮಹಿಳೆಯರು ಮಾತ್ರ ಪೂಜೆ ಮಾಡುತ್ತಾರೆ, ಈ ಗಣಪನಿಗೆ ಉದ್ದನೆಯ ಜಡೆ ಇಂದು ಮಹಿಳೆಯರು ಜೆಡಿಕೆ ಬೆಣ್ಣೆ ಹಚ್ಚಿ ಹಿಂದೆ ಇಂದ ಪೂಜೆ ಮಾಡುತ್ತಾರೆ, ಕಾರಣ ಗಣಪನ ಜಡೆಯಂತೆ ತಮಗೂ ಕೂಡ ಉದ್ದನೆಯ ಕೇಶರಾಶಿ ಬರುತ್ತದೆ ಎಂಬ ನಂಬಿಕೆ ಮಹಿಳೆಯರದ್ದು, 16.5 ಅಡಿ ಎತ್ತರ ಮತ್ತು 12.5 ಅಡಿ ಅಗಲವಿರುವ ಗಣಪತಿಗೆ ಬೆಣ್ಣೆ ಪೂಜೆ ಮಾಡಲು 85 ಕೆಜಿ ಬೆಣ್ಣೆ ಬೇಕಾಗುತ್ತದೆ, ಇಷ್ಟು ಬೆಣ್ಣೆಯನ್ನು ತಂದು ಗಣಪತಿ ಯಾರು ಅರ್ಪಿಸಿ ಪೂಜೆ ಮಾಡುತ್ತಾರೋ ಅವರ ಮನಸ್ಸಲ್ಲಿರುವ ಸರ್ಕಲ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂಬುವುದು ಇಲ್ಲಿನ ಭಕ್ತರ ನಂಬಿಕೆ.
ಇಲ್ಲಿ ನಡೆಯುವ ಪೂಜಾ ( ಸೇವಾ )ವಿವರಗಳು : ಕಡುಬಿನ ಹಾರ, ಕುಂಕುಮ ಪೂಜೆ, ಅಭಿಷೇಕ, ಕ್ಷೀರಾಭಿಷೇಕ, ರುದ್ರಾಭಿಷೇಕ, ತೈಲಾಭಿಷೇಕ, ಹೂವಿನ ಪೂಜೆ, ಜನ್ಮ ದಿನಾಚರಣೆ ಶಾಂತಿ, ವಿವಾಹ ಸಮಾರಂಭಗಳು ಹಾಗೂ ಪ್ರಭಾವಳಿ ಅಲಂಕಾರ ಪೂಜೆ.
ದೇವಸ್ಥಾನದ ಸಮಯ : ಬೆಳಗ್ಗೆ 6.30 ರಿಂದ ರಾತ್ರಿ 9.30 ರವರೆಗೆ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ವಿಳಾಸ : ಹೊಳಲ್ಕೆರೆಯು ಶಿವಮೊಗ್ಗದಿಂದ 80 ಕಿ.ಮೀ, ಚಿತ್ರದುರ್ಗದಿಂದ 60ಕಿ.ಮೀ, ದಾವಣಗೆರೆಯಿಂದ 60 ಕಿ.ಮೀ ದೂರದಲ್ಲಿದೆ. ಮಾಹಿತಿಗೆ: 99867 22167.