ಕನ್ನಡ ಭಾಷೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ ಅದೇ ರೀತಿಯಲ್ಲಿ ಕನ್ನಡ ಸಿನಿಮಾ ಕೂಡ ಅದರದೇ ಆದ ಇತಿಹಾಸವು ಸಹ ಇದೆ, ಎಷ್ಟು ಜನರಿಗೆ ಕನ್ನಡ ಭಾಷೆಯಲ್ಲಿ ಮೂಡಿದ ಮೊದಲ 5 ಸಿನಿಮಾಗಳು ಯಾವುದು ಎಂಬ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ ಹಾಗಾಗಿ ಇಂದು ನಾವು ಕನ್ನಡದ ಮೊದಲ ಐದು ಚಿತ್ರಗಳ ಬಗ್ಗೆ ಮಾಹಿತಿಯನ್ನು ನೀಡುತ್ತವೆ.
ಸತಿ ಸುಲೋಚನ (1934) ೧೯೩೪ ಮಾರ್ಚ್ ೩ ನೇ ತಾರೀಕು ಮೊದಲನೆ ಕನ್ನಡ ಚಿತ್ರ ಬಿಡುಗಡೆಯಾಯಿತು, ಇದನ್ನು ನಿರ್ದೇಶಕರು ವೈ ವಿ ರಾವ್, ಹಾಗೂ ನಿರ್ಮಾಪಕರು ಶಃ ಚಮನಲ್ ದುಗಂಜಿ, ತಾರಾಗಣದಲ್ಲಿ ಆರ್ ನಾಗೇಂದ್ರರಾವ್, ಸುಬ್ಬಯ್ಯನಾಯ್ಡು, ಲಕ್ಷ್ಮೀಬಾಯಿ, ತ್ರಿಪುರಾ ಮ್ಬ, ಸಿಟಿ ಶೇಷಾಚಲಂ ಅವರು ನಡೆಸಿದ್ದರು ವಿಶೇಷವೆಂದರೆ ನಟನೆಯ ಜೊತೆಗೆ ಈ ಚಿತ್ರದ ಸಂಗೀತವನ್ನು ಆರ್ ನಾಗೇಂದ್ರರಾವ್ ಅವರು ನೀಡಿದ್ದರು.
ಭಕ್ತ ಧ್ರುವ (1934) ಕನ್ನಡದ ಮೊದಲ ಚಿತ್ರ ಸತಿಸುಲೋಚನ ಬಿಡುಗಡೆಯಾದ ವರ್ಷದಲ್ಲಿ ಭಕ್ತ ದ್ರುವ ಸಿನಿಮಾ ಕೂಡ ಬಿಡುಗಡೆಯಾಯಿತು ಇದರ ನಿರ್ದೇಶಕ ಜವಾಬ್ದಾರಿಯನ್ನು ಪಾರ್ಶ್ವನಾಥ ಅಲ್ಟೆಕರ್ ವಹಿಸಿಕೊಂಡಿದ್ದರೂ ಹಾಗೂ ನಿರ್ಮಾಣದ ಹೊಣೆಯನ್ನು ವೈ.ಎಲ್.ನಾರಾಯಣ ರಾವ್ ಒಪ್ಪಿಕೊಂಡಿದ್ದರು, ಇನ್ನು ತಾರಾಗಣದಲ್ಲಿ ಮಾಸ್ಟರ್ ಮುತ್ತು, ಟಿಡಿ ವಾರಕನಾಥ್, ಎಚ್.ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್, ಜಿ.ನಾಗೇಶ್, ಎಂ.ಜಿ.ಮರಾವ್, ಟಿ.ಕಣಕಲಕ್ಷ್ಮಮಾ ಇದ್ದರು, ಸಂಗೀತ ಹಾರ್ಮೋನಿಯಂ ಶೇಷಗಿರಿರಾವ್ ಅವರು ನೀಡಿದ್ದರು, ಇದು ನಿರ್ಮಾಣ ಹಂತಕ್ಕೆ ಬಂದ ಮೊದಲ ಟಾಕಿ ಚಿತ್ರವಾಗಿದ್ದರೂ, ಅದೇ ವರ್ಷದಲ್ಲಿ ಸತಿ ಸುಲೋಚನಾ ನಂತರ ಇದು ಎರಡನೇ ಚಿತ್ರವಾಗಿ ಬಿಡುಗಡೆಯಾಯಿತು. ಈ ಚಿತ್ರವನ್ನು ಮುಂಬೈನ ಅಜಂತಾ ಸ್ಟುಡಿಯೋದಲ್ಲಿ ನಿರ್ಮಿಸಲಾಯಿತು ಮತ್ತು ಬೆಂಗಳೂರಿನ “ಸೆಲೆಕ್ಟ್ ಸಿನೆಮಾ” ಹಾಲ್‌ನಲ್ಲಿ ಪ್ರದರ್ಶನಗೊಂಡಿತು.
ಸದಾರಮೆ (1935) ಈ ಚಿತ್ರವು ಕನ್ನಡ ಭಾಷೆಯ ಪೌರಾಣಿಕ ನಾಟಕದ ಚಿತ್ರವಾಗಿದ್ದು, ರಾಜೀವ್ ಚಂದ್ರಶೇಖರ್ ಇದನ್ನು ನಿರ್ದೇಶಿಸಿದ್ದರು ಮತ್ತು ಗುಬ್ಬಿ ವೀರಣ್ಣ ಅವರು ಅವರ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತರು ಕನ್ನಡ ಚಿತ್ರರಂಗದ ಮೂರನೇ ಟಾಕಿ ಚಿತ್ರವಾಗಿದೆ, ಈ ಚಿತ್ರ ಬಿಡುಗಡೆಯಾದ ನಂತರ ಅತಿ ಹೆಚ್ಚು ಹಣವನ್ನು ಗಳಿಸಿ ಯಶಸ್ಸನ್ನು ಕಂಡಿತ್ತು, ಆಶ್ಚರ್ಯವೆಂದರೆ ಗುಬ್ಬಿ ವೀರಣ್ಣ ಅವರು ಇದೇ ಚಿತ್ರವನ್ನು ಮತ್ತೊಮ್ಮೆ 1956 ರಲ್ಲಿ ಮತ್ತೊಮ್ಮೆ ನಿರ್ಮಾಣ ಮಾಡಿದರು ಆಗ ಕನ್ನಡ ಸೇರಿದಂತೆ ತಮಿಳು ಅವತರಣಿ ಯಲ್ಲಿ ಬಿಡುಗಡೆ ಮಾಡಲಾಗಿತ್ತು.
ಸಂಸಾರ ನೌಕೆ : 1936 ರಲ್ಲಿ ಕನ್ನಡ ಭಾಷೆಯಲ್ಲಿ ತಯಾರಾದ ಸಾಮಾಜಿಕ ನಾಟಕ ಚಿತ್ರವಿದು, ಈ ಚಿತ್ರವನ್ನು ಎಚ್ ಎಲ್ ಎನ್ ಸಿಂಹ ಅವರು ನಿರ್ದೇಶನ ಮಾಡಿದರು, ಹಾಗೂ ಕೆ ನಂಜಪ್ಪ ಅವರು ಈ ಚಿತ್ರವನ್ನು ನಿರ್ಮಿಸಿದ್ದರು, ಅಂದಿಗೆ ಸಾಮಾಜಿಕ ಕಳಕಳಿಯನ್ನು ಅವಲಂಬಿತವಾದ ಈ ಚಿತ್ರವು ಜನರನ್ನು ಆಕರ್ಷಿಸಿ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಪಡೆಯಿತು. ಈ ಚಿತ್ರದ ಸಂಗೀತ ನಿರ್ದೇಶಕರು ಮಾಧವರಾವ್, ಇನ್ನು ತಾರಾಗಣದಲ್ಲಿ ಬಿ.ಆರ್.ಪಂಥುಲು , ಎಂ.ವಿ.ರಾಜಮ್ಮ , ಎಸ್.ಕೆ.ಪದ್ಮಾ ದೇವಿ, ಎಂ.ಎಸ್.ಮಾಧವ ರಾವ್, ಡಿಕ್ಕಿ ಮಾಧವ ರಾವ್ ಕಾಣಿಸಿಕೊಂಡಿದ್ದರ.
ಪುರಂದರದಾಸ (1937) 1937 ರ ಭಾರತೀಯ ಕನ್ನಡ ಚಿತ್ರವಾಗಿದ್ದು, ಬಿ. ಚವಾಣ್ ನಿರ್ದೇಶಿಸಿದ ಮತ್ತು ನಂಜುಂಡಪ್ಪ ನಿರ್ಮಿಸಿದ ಈ ಚಿತ್ರದಲ್ಲಿ ಜಿ.ಕೃಷ್ಣಸ್ವಾಮಿ ಅಯ್ಯಂಗಾರ್, ತ್ರಿಪುರಂಬ ಮತ್ತು ಜೆ.ಟಿ.ಬಾಲಕೃಷ್ಣರಾವ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಈ ಚಿತ್ರಕ್ಕೆ ಬೆಲ್ಲವೆ ನರಹರಿ ಶಾಸ್ತ್ರಿ ಸಂಗೀತದ ಸ್ಕೋರ್ ನೀಡಿದ್ದಾರೆ.