ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ಅವರ ಕಾಂಬಿನೇಷನ್ ನಲ್ಲಿ ಬಂದಿರುವ ಕೆಜಿಎಫ್ ಭಾರತದಲ್ಲಿ ಬಹಳಷ್ಟು ಹೆಸರು ಮಾಡಿದೆ, ಕೆಜಿಎಫ್ ಮೊದಲ ಭಾಗದ ಮುಖಾಂತರ ಅಭಿಮಾನಿಗಳನ್ನು ಮೋಡಿ ಮಾಡಿದ್ದ ಈ ಜೋಡಿ ಕೆಜಿಎಫ್ ಎರಡನೇ ಭಾಗದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ, ಅದ್ಭುತ ಕಲಾವಿದ ಹಾಗೂ ಅದ್ಭುತ ನಿರ್ದೇಶಕರ ಈ ಕಾಂಬಿನೇಷನ್ ನಲ್ಲಿ ಬರುತ್ತಿರುವ ಕೆಜಿಎಫ್ ಗಾಗಿ ಇಡೀ ದೇಶವೇ ಕಾಯುತ್ತಿದೆ ಎಂದರೆ ತಪ್ಪಾಗಲಾರದು.
ಇನ್ನು ಚಿತ್ರತಂಡದಿಂದ ಹೊರ ಬಂದಿರುವ ಅಂಶವೆಂದರೆ ಕೊನೆಯ ಹಂತದ ಚಿತ್ರೀಕರಣವನ್ನು ಮಾಡುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ, ಇನ್ನು ನಾಯಕ ನಟ ಯಶ್ ಅವರು ಹೇಳಿರುವಂತೆ ಸಂಜಯ್ ದತ್ ಅವರ ವಿರುದ್ಧ ಸಿಕ್ಸ್ ಪ್ಯಾಕ್ ನಲ್ಲಿ ಫೈಟ್ ಮಾಡಲಿದ್ದಾರೆ ಹಾಗೂ ಚಿತ್ರದಲ್ಲಿ ಭಾರತೀಯ ಯೋಧರು ಅಭಿನಯಿಸಿದ್ದಾರೆ ಹೀಗೆ ಹತ್ತು ಹಲವು ಸುದ್ದಿಗಳು ಹರಿದಾಡುತ್ತಿದೆ ಹಾಗೂ ಪ್ರತಿಯೊಂದು ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ನಲ್ಲಿದೆ, ಇನ್ನು ಚಿತ್ರತಂಡದಿಂದ ಹೊರಬಿದ್ದಿರುವ ಮತ್ತೊಂದು ವಿಚಾರವೆಂದರೆ ನಾಯಕ ನಟ ಯಶ್ ತಮ್ಮ ನೆಚ್ಚಿನ ನಿರ್ದೇಶಕರಾದ ಪ್ರಶಾಂತ್ ನೀಲ್ ಅವರಿಗೆ ದುಬಾರಿ ಉಡುಗೊರೆ ನೀಡಿದ್ದಾರಂತೆ.
ಹೌದು ನಾಯಕ ನಟ ಯಶ್ ಪ್ರಶಾಂತ್ ನೀಲ್ ಅವರಿಗೆ ಇತ್ತೀಚೆಗೆ ಬಿಡುಗಡೆಯಾದ ಸಾಮ್ಸಂಗ್ ಕಂಪನಿ ಅತಿ ದುಬಾರಿಯ ಮೊಬೈಲ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರಂತೆ, ಈ ವಿಚಾರವನ್ನು ಖುದ್ದು ನಿರ್ದೇಶಕರಾದ ಪ್ರಶಾಂತ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ, ಯಶ್ ಅವರಿಗೆ ಮರೆಯಲಾಗದ ದೊಡ್ಡ ಉಡುಗೊರೆಯಾಗಿ ಕೆಜಿಎಫ್ ಚಿತ್ರವನ್ನು ನೀಡಿದ ನಿರ್ದೇಶಕರಿಗೆ ತಮ್ಮ ಪುಟ್ಟ ಕಾಣಿಕೆಯಂತೆ ಈ ದುಬಾರಿ samsung folding ಮೊಬೈಲನ್ನು ನೀಡಿದ್ದಾರೆ ಎಂದರೆ ತಪ್ಪಾಗಲಾರದು, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.