ಗೋವಿನ ಬಾಲದ ಕೂದಲನ್ನು ಈ ರೀತಿ ಬಳಸಿದರೆ ಕೋಟ್ಯಧಿಪತಿಗಳಾಗಬಹುದಂತೆ!

0
3497

ಭಾರತದಲ್ಲಿ ಪ್ರಕೃತಿಯನ್ನೇ ದೇವರಿಗೆ ಹೋಲಿಕೆ ಮಾಡಲಾಗಿದೆ, ಪಶು ಪಕ್ಷಿ ಹಾಗೂ ಸಸ್ಯ ಗಳಲ್ಲಿಯೂ ನಾವು ದೇವರನ್ನು ಕಾಣುತ್ತೇವೆ ಹಾಗೂ ಭಕ್ತಿಯಿಂದ ಪೂಜೆ ಮಾಡುತ್ತೇವೆ, ಈ ಎಲ್ಲ ಸಂಪ್ರದಾಯಗಳು ಬಹಳ ಹಿಂದಿನಿಂದ ಬಂದರು ಇಂದಿಗೂ ಆಚರಣೆಯಲ್ಲಿದೆ, ಅದರಲ್ಲಿ ಬಹು ಮುಖ್ಯವಾದದ್ದು ಎಂದರೆ ಗೋವನ್ನು ಅಥವಾ ಕಾಮಧೇನುವನ್ನು ಪೂಜಿಸುವುದು, ಹಾಗೂ ಒಂದು ಗೋವಿನಲ್ಲಿ ಮುಕ್ಕೋಟಿ ದೇವರುಗಳನ್ನೂ ನಾವು ನೋಡುವುದು, ನಮ್ಮ ಪುರಾಣಗಳಲ್ಲಿ ಹಲವು ಬಾರಿ ಗೋವಿನ ದೈವಿಕ ಶಕ್ತಿಯ ಬಗ್ಗೆ ವಿವರಣೆ ನೀಡಿದ್ದಾರೆ.

ನಾವು ಗೋವುಗಳನ್ನು ಎಷ್ಟು ಭಕ್ತಿಯಿಂದ ಕಾಣುತ್ತೇವೆ ಎಂದರೆ ದಾರಿಯಲ್ಲಿ ಯಾವುದಾದರೂ ಒಂದು ಹಸು ಕಂಡರೆ ಸಾಕು ಅದರ ಬಾಲವನ್ನು ಅಥವಾ ತಲೆಯನ್ನು ಮುಟ್ಟಿ ನಮಸ್ಕರಿಸಿ ಮುಂದೆ ಸಾಗುತ್ತೇವೆ, ಗೋವುಗಳನ್ನು ಕಂಡರೆ ನಮಗೆ ಎಲ್ಲಿಲ್ಲದ ಸಂತೋಷ ಗೋವುಗಳು ಇದ್ದಲ್ಲಿ ಯಾವುದೇ ಕಾರಣಕ್ಕೂ ನಕಾರಾತ್ಮಕ ಶಕ್ತಿ ಇರುವುದಿಲ್ಲ, ಗೋವುಗಳು ಶುಭ ಸೂಚಕ ಮತ್ತು ಮಂಗಳದ ಎನ್ನುತ್ತಾರೆ.

ಮೊದಲೆಲ್ಲಾ ಭೂಮಿಗೆ ಆಹಾರವನ್ನು ಕೊಟ್ಟು ಅದನ್ನು ಸಂತೃಪ್ತಿ ಗೊಳಿಸಿ ಅದರ ಕಿವಿಯಲ್ಲಿ ನಮ್ಮ ಇಷ್ಟಾರ್ಥಗಳನ್ನು ಹೇಳುವ ಅಥವಾ ಪ್ರಾರ್ಥನೆ ಮಾಡುವ ರೂಢಿ ಇತ್ತು, ಹೀಗೆ ಮಾಡಿದರೆ ನಮ್ಮ ಇಷ್ಟಾರ್ಥಗಳು ಬಹುಬೇಗ ಫಲಿಸುತ್ತವೆ ಎಂಬ ನಂಬಿಕೆಗಳು ಈಗಲೂ ಕೆಲವರಲ್ಲಿ ಇದೆ.

ಇನ್ನೂ ಕೆಲವರಿಗೆ ಯಾವಾಗಲೂ ಅನಾರೋಗ್ಯದಿಂದ ಬಳಲುವ ಅಂತಹ ಪರಿಸ್ಥಿತಿ ಬಂದಿರುತ್ತದೆ, ಒಂದಲ್ಲಾ ಒಂದು ದೈಹಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ, ಅಂತವರು ಗೋವಿನ ಬಾಲದಲ್ಲಿರುವ ಒಂದು ಕೂದಲನ್ನು ತೆಗೆದುಕೊಂಡು ಅದನ್ನು ನಿಮ್ಮ ಹೆಬ್ಬೆಟ್ಟು ಗೆ ಸುತ್ತಿಕೊಂಡು ನಿಮ್ಮ ಶರೀರದಲ್ಲಿ ಯಾವ ಭಾಗದಲ್ಲಿ ನೋವಿದೆಯೋ ಅಲ್ಲಿ ಕೂದಲು ಸುತ್ತಿದ ಬೆರಳಿಂದ ಅಮುಕಬೇಕು, ಹೀಗೆ ಮಾಡಿದರೆ ನೋವಿನ ಭಾಗ ಸುಧಾರಿಸುತ್ತದೆ, ಒಮ್ಮೆ ಮಾಡುವುದರಿಂದ ನಿಮಗೆ ಅಷ್ಟು ಫಲ ದೊರೆಯದಿದ್ದರೆ ದಿನಕ್ಕೆ ಒಮ್ಮೆಯಂತೆ ಮೂರು ದಿನಗಳು ಹೀಗೆ ಮಾಡತಕ್ಕದ್ದು.

LEAVE A REPLY

Please enter your comment!
Please enter your name here