ಮನೆಯ ಈ ದಿಕ್ಕಿನಲ್ಲಿ ತುಳಿಸಿ ಗಿಡ ಇದ್ದರೆ ಆರ್ಥಿಕ ಸಮಸ್ಯೆ ಖಂಡಿತ!

0
2049

ತಳಸಿ ಗಿಡಕ್ಕೆ ನಮ್ಮ ಪುರಾಣದಲ್ಲಿ ವಿಶೇಷ ಸ್ಥಾನವಿದೆ, ತುಳಸಿ ಎಲ್ಲಾ ದೇವರಿಗೂ ಪ್ರಿಯ, ತುಳಸಿಯಿಂದ ಹಲವು ರೋಗ ನಿವಾರಣೆಯಾಗುತ್ತದೆ, ನಿಮ್ಮ ಮನೆಯ ಕಾವಲಾಗಿ ತುಳಸಿ ಇರುತ್ತದೆ ಅಂದ್ರೆ ತಪ್ಪಾಗಲಾರದು ಅಂತಹ ತುಳಸಿ ನಿಮ್ಮ ಮೇಲೆ ಅಥವ ಮನೆಯ ಮೇಲೆ ಮಾಟದ ಪ್ರಯೋಗ ಮಾಡಿದ್ದಾರೆ ಒಣಗುತ್ತದೆ, ಅಸಹಜವಾಗಿ ಗಿಡದ ಎಳೆಗಳು ಒಣಗಿದರೆ ಅದರ ಅರ್ಥ ನಿಮ್ಮ ಮನೆಗೆ ದುಷ್ಟ ಶಕ್ತಿ ಪ್ರಯೋಗವಾಗಿದೆ ಎಂದು.

ಮಾಟದ ಪ್ರಭಾವ ಎಷ್ಟಿರುತ್ತೆ ಅಂದ್ರೆ ಕೇವಲ ಒಂಬತ್ತು ದಿನದಲ್ಲಿ ಎಳೆಗಳು ಒಣಗಿದರೆ ಇಪ್ಪತ್ತ ಒಂದು ದಿನದಲ್ಲಿ ತುಳಸಿ ಗಿಡದ ಕಾಂಡ ಒಣಗುತ್ತದೆ, ಈ ಘಟನೆ ನಿಮ್ಮ ಮನೆಯಲ್ಲಿ ನಡೆದರೆ ಮೆನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಉತ್ತಮ.

ನೈಋತ್ಯ ಹಾಗು ದಕ್ಷಿಣದಲ್ಲಿ ತುಳಸಿ ಗಿಡವಿದ್ದರೆ ಮನೆಯಲ್ಲಿನ ಎಲ್ಲಾ ಕಾರ್ಯಗಳು ಸಮತೋಲನದಲ್ಲಿ ನಡೆಯುತ್ತದೆ, ಈಶಾನ್ಯ ಭಾಗದಲ್ಲಿ ಇದ್ದರೆ ಆರ್ಥಿಕ ಸಮಸ್ಯೆ ಹಾಗು ಆರೋಗ್ಯ ಸಮಸ್ಯೆ ಕಾಡುತ್ತದೆ, ಆದ್ದರಿಂದ ನೈಋತ್ಯ ಹಾಗು ದಕ್ಷಿಣದಲ್ಲಿ ತುಳಸಿ ಗಿಡವಿದ್ದರೆ ಶ್ರೇಷ್ಠ.

ಶ್ರೀ ತುಳಸಿ ಪೂಜೆಯನ್ನು ಮದುವೆಯಾದ ಸ್ತ್ರೀಯರು, ಸುಮಂಗಲಿಯರು, ಹೆಣ್ಣು ಮಕ್ಕಳು ಎಲ್ಲರೂ ಪ್ರತಿದಿನ ಅರಷಿನಾದಿ ಮಂಗಳದ್ರವ್ಯಗಳಿಂದ ಸ್ನಾನ ಮಾಡಿ ಶುಭ್ರರಾಗಿ ಕುಂಕುಮಾದಿಗಳನ್ನು ಧರಿಸಿ ಪ್ರತಿದಿನ ತಪ್ಪದೇ ಶ್ರೀ ತುಳಸಿ ಪೂಜೆ ಮಾಡಬೇಕು, ಶ್ರೀ ತುಳಸಿ ವೃಂದಾವನದ ಸುತ್ತಲೂ ಚೆನ್ನಾಗಿ ಗೋಮಯದಿಂದ ಸಾರಿಸಿ ರಂಗೋಲಿ ಹಾಕಿ.

ಶ್ರೀಯಃ ಪ್ರಿಯೇ ಶ್ರಿಯಾವಾಸೇ ನಿತ್ಯಂ ಶ್ರೀಧರವಲ್ಲಭೇ, ಭಕ್ತ್ಯಾ ದತ್ತಂ ಮಯಾರ್ಘ್ಯಂ ಹಿ ತುಳಸಿ ಪ್ರತಿಗ್ರಹ್ಯತಾಮ್, ಈ ಮಂತ್ರ ಹೇಳುತ್ತಾ ತುಳಸಿಗೆ ಅಭಿಷೇಕ ಮಾಡಿ.

ನಂತರ ಅರಶಿನ ಕುಂಕುಮ ಹೂವುಗಳಿಂದ ಪೂಜೆ ಮಾಡಿ, ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ ಯದಗ್ರೇ, ಸರ್ವವೇದಾಸ್ಚ ತುಳಸೀ ತ್ವಾಂ ನಮಾಮ್ಯಹಂ, ತುಳಸಿ ಶ್ರೀಸಖಿ ಶುಭೆ ಪಾಪಹಾರಿಣಿ ಪುಣ್ಯದೇ, ನಮಸ್ತೇ ನಾರದನುತೇ ನಾರಾಯಣಮನಃ ಪ್ರಿಯೇ, ಈ ಮಂತ್ರ ಹೇಳಿ ನಮಸ್ಕರಿಸಿ.

LEAVE A REPLY

Please enter your comment!
Please enter your name here