ಮೊಬೈಲ್ ನೋಡ್ತಾ ನೋಡ್ತಾ ರೈಲ್ವೆ ಟ್ರಾಕಿನ ಕೆಳಗೆ ಬಿದ್ದ ಘಟನೆ ನಡೆದಿದೆ. ಅರ್ಜೆಂಟೀನಾದ ಬ್ಯೂನಸ್ ಐರಿಸ್’ನಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು ಸಿಸಿಟಿವಿಯಲ್ಲಿ ಈ ವೀಡಿಯೋ ಸೆರೆಯಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟಕ್ಕೂ ಆಗಿದ್ದು ಏನೆಂದು ನೋಡೋಣ ಬನ್ನಿ.
ಅರ್ಜಂಟೀನಾದ ಬ್ಯೂನಸ್ ಐರಿಸ್ ಎಂಬ ರೈಲು ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಮೊಬೈಲ್ ನೋಡುತ್ತಾ ಇದ್ದಾನೆ. ಅದೇನು ನೋಡುತ್ತಿದ್ದನೋ ಏನೋ. ನೋಡುವುದು ನೋಡಲಿ ಸುಮ್ಮನೆ ಒಂದು ಕಡೆ ನಿಂತು ನೋಡಬೇಕು ಅದು ಬಿಟ್ಟು ಅವನು ಅತ್ತ ಇತ್ತ ಓಡಾಡುತ್ತಾ ಮೊಬೈಲ್ ನೋಡುತ್ತಾ ಹೋಗುತ್ತಾನೆ. ಕಡೆಗೆ ಒಂದೆ ಸಲ ಎಡಗಡೆ ರೈಲ್ವೆ ಟ್ರಾಕಿನ ಕಡೆ ಬೀಳುತ್ತಾನೆ. ತಕ್ಷಣ ಅಲ್ಲಿದ್ದ ಇಬ್ಬರು ವ್ಯಕ್ತಿಗಳು ಅವನನ್ನು ಕೈ ಹಿಡಿದು ಎಳೆಯುತ್ತಾರೆ. ಅವನ ಬ್ಯಾಗ್, ಮೊಬೈಲ್ ಮೇಲೆ ಹಾಕಿ ಅವನು ಮೇಲೆ ಬರುತ್ತಾನೆ.
ಅವನ ಅದೃಷ್ಟವೋ ಏನೋ ಅವನು ಮೇಲೆ ಬಂದ ಒಂದೆರಡು ಸೆಕೆಂಡಿಗೆ ರೈಲು ಬರುತ್ತದೆ. ಅವನಿಗೆ ಓ ಸ್ಥಿತಿ ನೆನೆದು ಹೇಗಾಗಿರಬೇಡ !? ಇನ್ನು ಮುಂದೆ ಕನಸಲ್ಲೂ ಮೊಬೈಲ್ ಮುಟ್ಟುತ್ತಾನೋ ಇಲ್ಲವೋ! ಅದು ಅನುಭವಿಸಿದವರಿಗೇ ಗೊತ್ತಾಗುವುದು.
ಕಡೆಗೆ ಇವನನ್ನು ಮೇಲೆಳೆದುಕೊಂಡ ನಂತರ ಆ ವ್ಯಕ್ತಿಗಳು ಪೋಲಿಸರಿಗೆ ಕರೆ ಮಾಡುತ್ತಾರೆ. ಪೋಲಿಸರು ಬಂದವರು ಅವನನ್ನು ಉಪಚರಿಸಿ ಆಸ್ಪತ್ರೆಗೆ ದಾಖಲಿಸುತ್ತಾರೆ. ಸಿಸಿಟಿವಿಯಲ್ಲಿ ವೀಡಿಯೋವನ್ನು ಪೋಲಿಸ್ ಇಲಾಖೆಯೇ ಟ್ವಿಟರ್’ನಲ್ಲಿ ಅಪ್ಲೋಡ್ ಮಾಡಿದ್ದು ರೈಲು ಬರುವಾಗ ಅಥವಾ ರಸ್ತೆ ಬದಿಯಲ್ಲಿ ಮೊಬೈಲ್ ನೋಡುತ್ತಾ ಹೋಗಬೇಡಿ ಎಂದು ವಾರ್ನಿಂಗ್ ಮಾಡಿದ್ದಾರೆ. ಈ ವೀಡಿಯೋ ಗೆ ಸಾವಿರಾರು ಲೈಕ್ಸ್ ಬಂದಿದ್ದು ಜನರು ಬಗೆಬಗೆಯ ಕಾಮೆಂಟ್ ಹಾಕುತ್ತಿದ್ದಾರೆ. ಅವನ ಅದೃಷ್ಟ ಚೆನ್ನಾಗಿತ್ತು ಎಂದು ಕೆಲವರು ಅಂದರೆ, ಅವನು ಇನ್ನೂ ಮುಂದೆ ಕನಸಲ್ಲೂ ಮೊಬೈಲ್ ನೋಡುವುದಿಲ್ಲ ಎಂದು ಹೇಳಿದ್ದಾರೆ. ಅವನಿಗೆ ರೈಲು ಡ್ಯಾಷ್ ಹೊಡೆಯಬೇಕಿತ್ತು, ಇದರಿಂದ ಅವನಿಗೆ ಬುದ್ದಿ ಬರುತ್ತಿತ್ತು ಎಂದು ಕೆಲವರು ಆಕ್ರೋಶದ ಕಾಮೆಂಟ್ ಹಾಕಿದ್ದಾರೆ.
ಏನಾದರೂ ಹೇಗಾದರೂ ಅವನು ಬಚಾವಾದನಲ್ಲ. ಅಷ್ಟು ಸಾಕು. ಒಬ್ಬರ ಜೀವ ಹೋಗಲು ಅದು ಆಯಸ್ಸು ಮುಗಿಯಲೇಬೇಕೆಂದೇನಿಲ್ಲ. ನಾವು ಮಾಡಿಕೊಂಡ ಎಡವಟ್ಟುಗಳಿಂದ ಅನಾಹುತ ಸಂಭವಿಸಿ ನಮ್ಮ ಜೀವನ ಕೊನೆಗಾಣಬಹುದು. ಏನಂತೀರಿ? ನಿಮ್ಮ ಅಭಿಪ್ರಾಯ ತಿಳಿಸಿ ಕಾಮೆಂಟ್ ಮಾಡಿ.