ಟಾಟ್ಯೂ ಹಾಕಿಸಿ ಕೊಳ್ಳುವ ಮುಂಚೆ ತಿಳಿಯ ಬೇಕಾದ ಮುಖ್ಯ ವಿಚಾರಗಳು!

0
2432

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಯುವಕರನ್ನು ಅಚ್ಚೆ ಅಂದರೆ ಟ್ಯಾಟು ಆಕರ್ಷಣೆಗೆ ಹೊಳಗಾಗುತ್ತಿರುವುದು ಸುಳ್ಳಲ್ಲ, ಕೆಲವರು ತಮ್ಮ ತಂದೆ ತಾಯಿಯ ಹೆಸರನ್ನು ಟ್ಯಾಟೂ ಮಾಡಿಸಿಕೊಂಡರೆ ಇನ್ನು ಕೆಲವರು ತಮ್ಮ ಪ್ರೀತಿಪಾತ್ರರ ಹೆಸರನ್ನು ಟ್ಯಾಟೂ ಮಾಡಿಸಿಕೊಳ್ಳುತ್ತಾರೆ, ಮತ್ತಷ್ಟು ಜನ ದೇವರ ಆಕಾರಗಳನ್ನು ಟ್ಯಾಟೂ ಹಾಕಿಸಿಕೊಳ್ಳುತ್ತಾರೆ, ಇದನ್ನು ಸಾಮಾನ್ಯವಾಗಿ ನಾವು ಗಮನಿಸಿರುತ್ತೇವೆ, ಇದನ್ನು ಅವರ ಭಾವನೆಗಳಿಗೆ ಬಿಟ್ಟದ್ದು ಆದರೆ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಹಾಗೂ ಹಾಕಿಸಿಕೊಂಡ ನಂತರ ಕೆಲವು ಎಚ್ಚರಗಳನ್ನು ವಹಿಸುವುದು ಅತ್ಯಗತ್ಯ, ಉದಾಹರಣೆಗೆ ಟ್ಯಾಟೂ ಕಲಾವಿದ ತಮ್ಮ ಕೈಗಳಿಗೆ ಗ್ಲೌಸ್ ಧರಿಸಿದ್ದಾನೋ ಇಲ್ಲವೋ, ಹಚ್ಚೆ ಹಾಕುವ ಸೂಜಿ ಶುದ್ಧವಾಗಿದೆಯೇ ಎಂದು ಗಮನಿಸಿ, ಮೊದಲಿಗೆ ಒಂದು ಟ್ಯಾಟೂ ಹಾಕಿಸಿಕೊಂಡರೆ ಒಳಿತು, ಮದ್ಯ ಸೇವನೆ ಮಾಡಿ ಟ್ಯಾಟೂ ಹಾಕಿಸಿಕೊಳ್ಳುವುದು ಹಿತವಲ್ಲ.

ಅನಾರೋಗ್ಯದ ಸಂದರ್ಭದಲ್ಲಿ ಟ್ಯಾಟೂ ಹಾಕಿಸಿಕೊಳ್ಳಬೇಡಿ, ಟ್ಯಾಟೂ ಹಾಕಿಸಿದ 24ಗಂಟೆಯಲ್ಲಿ ಬ್ಯಾಂಡೇಜನ್ನು ತೆಗೆದು ಬ್ಯಾಕ್ಟೀರಿಯಾ ನಾಶಕ ಅಥವಾ ಕ್ರಿಮಿನಾಶಕ ಮುಲಾಮನ್ನು ಹಚ್ಚುವುದು, ಅಚ್ಚೆಯ ಗಾಯ ವಾಸಿಯಾಗುವ ವರೆಗೂ ಬಿಸಿಲಿಗೆ ಹೋಗಬಾರದು, ನೀರಿನಲ್ಲಿ ಈಜುವುದು ಬೇಡ, ಹಚ್ಚೆ ಹಾಕಿಸಿದ ಆರು ತಿಂಗಳವರೆಗೂ ರಕ್ತದಾನ ಮಾಡುವುದು ಒಳಿತಲ್ಲ ಇದನ್ನು ವೈದ್ಯರು ಸಹ ನಿರಾಕರಿಸುತ್ತಾರೆ.

ಅಚ್ಚಗೆ ಬಳಸುವ ಸೂಚಿಯನ್ನು ಶುದ್ದಿಕರಣ ಮಾಡಲಿಲ್ಲ ಎಂದರೆ ಹಲವು ಸೋಂಕುಗಳು ನಿಮ್ಮ ದೇಹವನ್ನು ಸೇರಬಹುದು ಇದರಿಂದ ಹೆಪಟೈಟಿಸ್ ಬಿ ಮತ್ತು ಸಿ, ಟೆಟಾನಸ್ ಮುಂತಾದ ರಕ್ತಸಂಬಂಧಿ ರೋಗಗಳು ಬರಬಹುದು, ಎಚ್.ಐ.ವಿ ಬರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ವೈದ್ಯರು, ಈ ಬಗ್ಗೆ ಎಚ್ಚರ ವಹಿಸಿ.

ಅಚ್ಛೇ ಹಾಕಲು ಬಳಸುವ ಶಾಯಿಯಿಂದ ನಿಮ್ಮ ಚರ್ಮ ಕೆಂಪಾಗಿ ಊದಿಕೊಂಡು ಕಿವಾಗಬಹುದು, ಮಚ್ಚೆಗಳ ಮೇಲೆ ಟ್ಯಾಟೂ ಹಾಕಿಸಬೇಡಿ ಇದರಿಂದ ರೋಗಗಳ ಪರೀಕ್ಷೆಗೆ ಅಡ್ಡಿಯಾಗುತ್ತದೆ, ಶಾಶ್ವತ ಟ್ಯಾಟೂ ಹಾಕಿಸಿದವರು ಮತ್ತೆ ಅದನ್ನು ತೆಗೆಸಲು ಕಷ್ಟಪಡುತ್ತಾರೆ, ಲೇಸರ್ ಚಿಕಿತ್ಸೆ ಮೂಲಕ ತೆಗೆಯಬಹುದಾದರೂ ಅದರಿಂದ ದುಷ್ಪರಿಣಾಮಗಳು ಅಧಿಕವಾಗಿದೆ, ಹಾಗಾಗಿ ನಿಮ್ಮ ಚರ್ಮದ ಮೇಲೆ ಟ್ಯಾಟೂ ಹಾಕಿಸುವ ಮುನ್ನ ಅದರ ಅಗತ್ಯವನ್ನು ಯೋಚನೆ ಮಾಡುವುದು ಉತ್ತಮ.

LEAVE A REPLY

Please enter your comment!
Please enter your name here