ಸಾಂಸಾರಿಕ ಜೀವನದ ಸುಖಕ್ಕಾಗಿ ಈ ಕೆಲವು ಟಿಪ್ಸ್ ಗಳನ್ನು ಪಾಲಿಸಿ ನೋಡಿ!

0
1686

ಮನುಷ್ಯನಿಗೆ ಸಂಸಾರಿಕ ಜೀವನದ ದೈಹಿಕ ಸುಖ ತುಂಬಾನೇ ಮುಖ್ಯವಾಗಿರುತ್ತದೆ, ಇದು ಜೋಡಿಯ ಮಾನಸಿಕ ಸಂಬಂಧವನ್ನು ದೃಢವಾಗಿಸಲು ತನ್ನದೇ ಆದ ಪ್ರಭಾವವನ್ನು ಬೀರುತ್ತದೆ, ಇಂತಹ ವಿಚಾರಗಳನ್ನು ಕಡೆಗಣಿಸಿದರೆ ಗಂಡ-ಹೆಂಡತಿಯರ ನಡುವೆ ಸಾಮರಸ್ಯ ಕಡಿಮೆಯಾಗುತ್ತದೆ ಆದಕಾರಣ ಮದುವೆಯ ನಂತರ ನಿಮ್ಮ ಜೋಡಿಯ ಜೊತೆ ರಾತ್ರಿ ಹಾಸಿಗೆಯ ಸಮಯದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂಬುವ ಕೆಲವು ಟಿಪ್ಸ್ ಗಳನ್ನು ನೀಡುತ್ತೇವೆ.

ನಿಮ್ಮ ಸಂಗಾತಿಯ ಮೇಲೆ ಗಮನವಿರಲಿ, ನಿಮಗೆ ಇದರಿಂದ ಸಂಪೂರ್ಣವಾದ ತೃಪ್ತಿ ಸಿಗಬೇಕಾದರೆ ನಿಮ್ಮ ಸಂಗಾತಿ ಸಹ ಮೂಡ್ನಲ್ಲಿ ಇರಬೇಕು, ಆದಕಾರಣ ನಿಮ್ಮ ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡಿ ಆತುರ ಮಾಡುವುದು ಬೇಡ, ಇದರಿಂದ ಇಬ್ಬರಿಗೂ ಬೇಸರವಾಗುವುದಿಲ್ಲ.

ಕೆಲವರು ಈ ಕ್ರಿಯೆ ನಡೆಸುವಾಗ ವಿಚಿತ್ರವಾದ ಶಬ್ದಗಳನ್ನು ದೇಹದಿಂದ ಹೊರ ಹಾಕುತ್ತಾರೆ, ಈ ರೀತಿ ಮಾಡಬೇಡಿ ಹೀಗೆ ಮಾಡುವುದರಿಂದ ನಿಮ್ಮ ಜೋಡಿ ಮುಜುಗರಕ್ಕೆ ಇಡಾಗಬಹುದು ಅಥವಾ ಶಬ್ದಗಳಿಂದ ಅಸಯ್ಯ ಪಡಬಹುದು, ಈ ರೀತಿಯಾಗದಂತೆ ಗಮನವಹಿಸಿ.

ಇಂತಹ ಸಮಯದಲ್ಲಿ ನಾಚಿಕೆಯಿಂದ ದಯಮಾಡಿ ದೂರವಿರಿ, ನಿಮ್ಮ ಸಂಗಾತಿ ನಿಮ್ಮ ಬಳಿ ಬಂದಾಗ ಅತಿಯಾದ ನಾಚಿಕೆಯಿಂದ ಅವರನ್ನು ತಡೆಯಬೇಡಿ, ಇದರಿಂದ ಅವರಿಗೆ ಬೇಸರವಾಗಬಹುದು, ಇದೇ ಕಾರಣದಿಂದಾಗಿ ನೀವು ಸಂಪೂರ್ಣವಾದ ತೃಪ್ತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಒಂದೇ ರೀತಿಯ ಕ್ರಿಯೆ ಬೇಸರ ಮೂಡಿಸುತ್ತದೆ, ಆಗಾಗ ಹೊಸ ರೀತಿಯ ಎಕ್ಸ್ಪರಿಮೆಂಟ್ ಇದ್ದರೆ ಲೈಫ್ನಲ್ಲಿ ಎಕ್ಸೈಟ್ಮೆಂಟ್ ತುಂಬಿರುತ್ತದೆ, ಹೊಸ ಬದಲಾವಣೆಗಳು ಅತ್ಯವಶ್ಯಕ ಇದರಿಂದ ಇಬ್ಬರ ಆಸೆಗಳು ಪೂರ್ತಿಯಾಗಬೇಕು, ಹೀಗೆ ಮಾಡುವುದರಿಂದ ನಿಮಗೆ ಬೋರಾಗುವುದಿಲ್ಲ.

ಇಡೀ ದಿನದ ಹಲವು ವಿಚಾರಗಳು ನಿಮ್ಮ ತಲೆಯಲ್ಲಿ ಕೂತಿರಬಹುದು, ಆದರೆ ಈ ಎಲ್ಲಾ ವಿಚಾರಗಳನ್ನು ರಾತ್ರಿ ಹಾಸಿಗೆಯಮೇಲೆ ತರಬೇಡಿ, ಆ ಕ್ಷಣದಲ್ಲಿ ಏನು ಮಾತಾಡಬೇಕು ಅಷ್ಟನ್ನೇ ಮಾತಾಡಿ ಇದರಿಂದ ನಿಮ್ಮ ಸಂಗಾತಿಯ ಗಮನ ಬೇರೆಡೆ ಹೋಗುವುದಿಲ್ಲ, ಸಾಧ್ಯವಾದರೆ ಸ್ಥಳವನ್ನು ಆಗಾಗ ಬದಲಾವಣೆ ಮಾಡಿ ಒಂದೇ ಸ್ಥಳದಲ್ಲಿ ನಿಮ್ಮ ಸಂಗಾತಿಗೂ ಬೋರ್ ಎನಿಸಬಹುದು.

LEAVE A REPLY

Please enter your comment!
Please enter your name here