ಸ್ನೇಹಿತರೆ ಅಮೇರಿಕ ಮತ್ತು ಕೆನಡಾ ಗಡಿಭಾಗದಲ್ಲಿರುವ ನಯಾಗರ ಜಲಪಾತ ಇಡೀ ವಿಶ್ವದಾದ್ಯಂತ ಎಲ್ಲರ ಗಮನ ಸೆಳೆದಿದೆ, ಈ ಜಲಪಾತವನ್ನು ನೋಡೋದಿಕ್ಕೆ ವಿಶ್ವದ ನಾನಾ ಭಾಗಗಳಿಂದ ಲಕ್ಷಾಂತರ ಜನರು ಬರುತ್ತಾರೆ ಆದರೆ ಇದೇ ನಯಾಗ್ರ ಫಾಲ್ಸ್ ನಿಂದಾ ಸುಮಾರು 45 ಕಿಲೋಮೀಟರ್ ದೂರದಲ್ಲಿ ಮತ್ತೊಂದು ಫಾಲ್ಸ್ ಇದೆ, ಇದು ಎಂತಹ ವಿಚಿತ್ರ ಜಲಪಾತ ಎಂದರೆ ಈ ಪ್ರಪಂಚದಲ್ಲಿ ಎಲ್ಲೂ ನೋಡಕ್ಕೆ ಸಿಗದೇ ಇರೋ ಅಂತ ವಿಶೇಷವಾದ ಜಲಪಾತ, ಸ್ನೇಹಿತರೆ ನ್ಯೂಯಾರ್ಕ್ ನಲ್ಲಿ ಚೆಸ್ನೆಟ್ ಎಂಬ ಅರಣ್ಯ ಪ್ರದೇಶ ಇದೆ ಇದು ಒಂದು ದಟ್ಟಾರಣ್ಯ ಇಲ್ಲಿಗೆ ಹೋಗಬೇಕಾದರೆ ಒಂದು ದುರ್ಗಮ ಹಾದಿಯಲ್ಲಿ ಸಾಗಬೇಕಾಗುತ್ತದೆ, ಈ ಒಂದು ಕಾಡಿನಲ್ಲಿ Eternal Flame Falls ವಿಶಿಷ್ಟ ಮತ್ತು ವಿಚಿತ್ರವಾದ ಜಲಪಾತವಿದೆ, ಏನಪ್ಪಾ ಈ ವಿಶಿಷ್ಟ ಮತ್ತು ವಿಚಿತ್ರ ಜಲಪಾತ ಎಂದು ಕೇಳಿದರೆ ಪ್ರತ್ಯುತ್ತರ ಹೀಗಿದೆ ನೋಡಿ.
ಬೆಂಕಿ ಮತ್ತು ನೀರಿಗೆ ಇರುವ ವೈರತ್ವ ನಿಮಗೆ ಚೆನ್ನಾಗಿಯೇ ಗೊತ್ತು ಆದರೆ ಈ ಜಲಪಾತದಲ್ಲಿ ಶಾಶ್ವತವಾಗಿ ಬೆಂಕಿ ಕಾಣಿಸಿಕೊಳ್ಳುತ್ತದೆ ಎಂದರೆ ನೀವು ನಂಬಲೇಬೇಕು, ಹೀಗಾಗಿ ಇಂತಹ ಒಂದು ಅದ್ಭುತ ಜಾಗದ ವಿಡಿಯೋ ನಿಮಗಾಗಿ ಈ ಕೆಳಗೆ ನೀಡಲಾಗಿದೆ ತಪ್ಪದೇ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಹಾಗೂ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.