ಇಂದಿನ ದಿನಗಳಲ್ಲಿ ಕೆಲವರು ಕುರ್ಚಿ ಅಥವಾ ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಾರೆ, ಇದು ಕೆಲವರಿಗೆ ಒಂದು ಹಿರಿಮೆಯನ್ನು ತಂದುಕೊಡುತ್ತದೆ ಎಂಬುದು ಅವರ ಭಾವನೆ, ಇನ್ನೂ ಕೆಲವರಂತು ಅದರಲ್ಲಿ ದೊಡ್ಡ ದೊಡ್ಡ ಶ್ರೀ ಮಂತರು ನೆಲದ ಮೇಲೆ ಕುಳಿತು ಊಟ ಮಾಡುವುದೆಂದರೆ ಕೀಳು ಅನ್ನೊ ರೀತಿಯಲ್ಲಿ ಯೋಚಿಸುತ್ತಿರುತ್ತಾರೆ, ಇದಕ್ಕೆಲ್ಲ ಕುರ್ಚಿಯ ಮೇಲಿನ ಮೋಹವು ಪ್ರಮುಖ ಕಾರಣವಾಗಿರುತ್ತದೆ.
ಆದರೆ ನೆಲದ ಮೇಲೆ ಕುಳಿತುಕೊಂಡು ಊಟ ಮಾಡುವುದರಿಂದ ಎನೆಲ್ಲಾ ಉಪಯೋಗಗಳು ಇದೆ ಅನ್ನುವ ಬಗ್ಗೆ ಮುಂದೆ ಹೇಳ್ತಿವಿ ಓದಿ.
ನೀವು ಚಕ್ಕಳಮಕ್ಕಳ ಹಾಕಿಕೊಂಡು ಕುಳಿತುಕೊಳ್ಳವುದು ಸುಖಾಸನ ನಿಜವೇ ಆಗಿರಬಹುದು. ಆದರೆ ಪ್ರತಿಯೊಂದು ತುತ್ತಿಗೂ ಬಾಗಿ ಊಟ ಮಾಡುವುದರಿಂದ ಜೀರ್ಣಕ್ರಿಯೆ ಸಲಿಸಾಗಿ ಆಗುತ್ತದೆ, ನೆಲದ ಮೇಲೆ ಕುಳಿತುಕೊಂಡು ಊಟ ಮಾಡುವಾಗ ಕೆಲವರು ನಿಧಾನವಾಗಿ ಊಟ ಮಾಡುತ್ತಾರೆ, ನಿಧಾನವಾಗಿ ಊಟ ಮಾಡುವುದು ಸಾಮಾನ್ಯವಾಗಿ ದೇಹದ ಆರೋಗ್ಯಕ್ಕೆ ತುಂಬ ಒಳ್ಳೆಯದು, ನೆಲದ ಮೇಲೆ ಕುಳಿತು ಊಟ ಮಾಡುವಾಗ ಸಿಗುವ ನೆಮ್ಮದಿ ಬೇರೆ ಯಾವ ಬಗೆಯಲ್ಲೂ ಸಿಗುವುದಿಲ್ಲ.
ನೆಲದ ಮೇಲೆ ಕುಳಿತು ನೆಮ್ಮದಿಯಿಂದ ಊಟ ಮಾಡಿದ್ರೆ ಉಸಿರಾಟ ಮತ್ತು ಜೀರ್ಣಕ್ರಿಯೆ ಸರಾಗವಾಗುತ್ತದೆ, ಮತ್ತೆ ಸೊಂಟದ ಭಾಗದಲ್ಲಿ ವ್ಯಾಯಾಮ ಮಾಡಿದ ಹಾಗೆಯೂ ಆಗುತ್ತದೆ, ಇದರಿಂದ ಇಳಿಯ ವಯಸ್ಸಿನಲ್ಲಿಯೂ ಆರಮವಾಗಿ ನಡೆಯಬಹುದು ಹೃದಯಕ್ಕೆ ರಕ್ತ ಸಂಚಾರ ಸರಾಗವಾಗಿ ನಡೆಯುತ್ತಿರುವುದರಿಂದ ದೇಹದ ಆರೋಗ್ಯ ನಿಯಂತ್ರಣದಲ್ಲಿ ಇರುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.