ಮೈ ಬಣ್ಣ ಸುಂದರವಾಗಿ ಕಾಣಲು ಕೆಲವು ಟಿಪ್ಸ್ ಗಳು.

0
3141

ಸ್ನಾನಕ್ಕೆ ಕಡಲೆಹಿಟ್ಟನ್ನು ಬಳಸುವಾಗ ಅದರ ಜೊತೆ ಸ್ವಲ್ಪ ಅರಿಶಿನ ಪುಡಿಯನ್ನು ಬೆರೆಸಿ ಸ್ನಾನ ಮಾಡಿದರೆ ಚರ್ಮ ಸುಂದರವಾಗಿ ಕಾಣುತ್ತದೆ, ಅಲ್ಲದೆ ಬೇಡದ ರೋಮಗಳು ಇರುವುದಿಲ್ಲ, ನೋಡಲು ಆಕರ್ಷಕವಾಗಿ ಕಾಣುತ್ತೀರಿ.

ಅರಳೆಣ್ಣೆ, ಹರಿಶಿಣ ಗಳನ್ನು ಬೆರೆಸಿ ಮೈಗೇ ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ, ಇದರಿಂದ ಮೈಬಣ್ಣ ತಿಳಿಯಾಗುವುದು ರೊಂದಿಗೆ ಚರ್ಮವು ಹೊಳಪನ್ನು ಪಡೆಯುತ್ತದೆ.

ಹೊಟ್ಟಿನ ಸಮಸ್ಯೆ ? ನಿಂಬೆ ರಸ ಹಿಂಡಿದ ಸಿಪ್ಪೆಯನ್ನು ಅಥವಾ ಬೀಜವನ್ನು ಎಸೆಯದೆ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ, ತಲೆಗೆ ಸ್ನಾನ ಮಾಡುವಾಗ ಸೀಗೆ ಪುಡಿಯೊಡನೆ ಬೆರೆಸಿ ಸ್ನಾನ ಮಾಡಿದರೆ ಹೊಟ್ಟಿನ ಸಮಸ್ಯೆಯೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.

ಮೆಂತ್ಯ ಪುಡಿಯನ್ನು ಹಲ್ಲಿನಲ್ಲಿ ಇಟ್ಟುಕೊಂಡರೆ ಕ್ರಿಮಿಗಳು ಹೋಗಿ ಹಲ್ಲು ನೋವು ಕಡಿಮೆಯಾಗುತ್ತದೆ.

ಸ್ನಾನ ಮಾಡುವಾಗ ಕೊನೆಯ ನಾಲ್ಕು ಚೊಂಬು ಬಿಸಿನೀರಿಗೆ ಒಂದು ಬಟ್ಟಲು ಹಾಲು ಸೇರಿಸಿ ಸ್ನಾನ ಮಾಡಿದರೆ ಚರ್ಮ ಮೃದುವಾಗುತ್ತದೆ.

ಮೆಂತ್ಯ ಬಾಯಿಗೆ ಕಹಿಯಾದರೂ ಆರೋಗ್ಯಕ್ಕೆ ಸಿಹಿ, ಹಲವು ವಿವಿಧ ಅಡಿಗೆಯಲ್ಲಿ ಮೆಂತ್ಯ ಒಳ್ಳೆಯ ರುಚಿ ಮತ್ತು ಸುವಾಸನೆಯನ್ನು ಕೊಡುತ್ತದೆ, ಮೆಂತ್ಯ ದೇಹದಲ್ಲಿರುವ ಕೆಟ್ಟ ಉಷ್ಣತೆಯನ್ನು ನಿವಾರಿಸಿ ತಂಪು ನೀಡುತ್ತದೆ, ಮೆದುಳಿಗೂ ತಂಪು ನೀಡಿ ಕೂದಲನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ.

ಮೆಂತ್ಯದ ಸಹಜ ಗುಣ ಧರ್ಮದಿಂದ ಕ ಹಿಂದ ಶರೀರದ ವ್ಯಾಧಿ, ಕ್ರಿಮಿಗಳನ್ನು ತಡೆಯುತ್ತದೆ, ಶರೀರ ಸ್ವಸ್ಥ ವಾಗಿರುವಂತೆ ಮಾಡುತ್ತದೆ, ವಿಷ ಜ್ವರಗಳಲ್ಲಿ ತುಳಸಿ ಎಲೆ, ಮೆಣಸು, ಮೆಂತ್ಯವನ್ನು ಅರೆದು ಪ್ರತಿಗಂಟೆಗೆ ಸೇವಿಸಿದರೆ ಉತ್ತಮ ಗುಣ ಕಾರಿಯಾಗಿ ಕೆಲಸ ಮಾಡುತ್ತದೆ.

ಚಿಕ್ಕ ಮಕ್ಕಳಿಗೆ ಚರ್ಮದ ತೊಂದರೆಗಳು ಉಂಟಾಗಿದ್ದರೆ ಪುದೀನಾ ರಸವನ್ನು ಹಚ್ಚಿದರೆ ಮೊಡವೆ ಕಲೆಗಳು ಉಳಿಯುವುದಿಲ್ಲ ಮತ್ತೆ ಮೊಡವೆಗಳು ಬರುವುದಿಲ್ಲ, ಮೈಯಿಗೆ ಸೋಪಿನ ಬದಲು ಕಡಲೆ ಹಿಟ್ಟಿಗೆ ತೊಟ್ಟು ನಿಂಬೆರಸ ಬೆರೆಸಿ ಹಚ್ಚುವುದರಿಂದ ಅನಾವಶ್ಯಕ ರೂಮಾ ನಾಶವಾಗುತ್ತದೆ ಸುಂದರವಾಗುತ್ತದೆ, ಹಾಗೂ ಮಕ್ಕಳಿಗೆ ಮುಖದ ಮೇಲೆ ಕೂದಲು ಜಾಸ್ತಿಯಾಗಿದ್ದರೆ ಒಂದು ಬಟ್ಟಲು ಹಾಲಿನ ಕೆನೆಗೆ 4 ಚಮಚ ಪನ್ನಿರನ್ನು ಬೆರೆಸಿ ಪ್ರತಿದಿನ ಮೈಯಲ್ಲ ಹಚ್ಚಿ ನಂತರ ಸ್ನಾನ ಮಾಡಿಸಿದರೆ ಅನಾವಶ್ಯಕ ಕೂದಲು ನಿವಾರಣೆಯಾಗುವುದು.

LEAVE A REPLY

Please enter your comment!
Please enter your name here