ಭಾರತದಲ್ಲಿ ಕರೋನವೈರಸ್ ನಿಂದಾಗಿ ಲಾಕ್ ಡೌನ್ ಪರಿಸ್ಥಿತಿ ಎದುರಾಗಿದ್ದು ಎಲ್ಲಾ ರೀತಿಯ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ತಮ್ಮ ಕೆಲಸವನ್ನು ಸ್ಥಗಿತ ಮಾಡಬೇಕಾಗಿ ಬಂತು, ನಮ್ಮ ಚಿತ್ರರಂಗ ಮತ್ತು ಕಿರುತೆರೆ ಇದರ ಹೊರಗಿರಲಿಲ್ಲ, ಸರ್ಕಾರದ ಆದೇಶದಂತೆ ಸಿನಿಮಾ ಮತ್ತು ಧಾರವಾಹಿಗಳ ಶೂಟಿಂಗ್ ಮಾರ್ಚ್ 19ನೇ ತಾರೀಕು ನಿಲ್ಲಿಸಲಾಯಿತು, ಇದರಿಂದಾಗಿ ಮೊದಲೇ ಶೂಟಿಂಗ್ ಮಾಡಿ ಇಟ್ಟಿದ್ದ ಕೆಲವು ಎಪಿಸೋಡ್ ಗಳನ್ನು ಮಾತ್ರ ಪ್ರಸಾರ ಮಾಡಿ ಚಾನಲ್ ನವರು ಸುಮ್ಮನೆ ಕೂರಬೇಕಾದ ಪರಿಸ್ಥಿತಿ ಎದುರಾಯಿತು.
ಇದರಿಂದ ಅನೇಕ ಧಾರಾವಾಹಿ ಪ್ರಿಯರು ತಮ್ಮ ದೈನಂದಿನ ಮನೋರಂಜನೆಯನ್ನು ಕಳೆದುಕೊಂಡರು, ಮತ್ತೆ ಯಾವಾಗ ಧಾರವಾಹಿಗಳು ಪ್ರಸಾರವಾಗಲು ಶುರುವಾಗುತ್ತದೆ ಜೀವನ ಎಂದಿನಂತೆ ನಡೆಯಲು ಶುರುವಾಗುತ್ತದೆ ಎಂದು ಕಾಯುತ್ತಾ ಇಂದಿಗೂ ಹಲವರು ಯೋಚನೆ ಮಾಡುತ್ತಿದ್ದಾರೆ ಅಂತವರಿಗೆ ಇಂದು ಶುಭ ಸುದ್ದಿ ಬರಬಹುದು ಎನ್ನಲಾಗಿದೆ.
ನೆನ್ನೆ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷರಾದ ಶಿವಕುಮಾರ್ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ಮತ್ತೆ ಧಾರವಾಯಿ ಚಿತ್ರೀಕರಣವನ್ನು ಪ್ರಾರಂಭಿಸಲು ಅವಕಾಶ ನೀಡಬೇಕು ಎಂದು ಕೋರಿಕೆಯನ್ನು ಸಲ್ಲಿಸಿದ್ದರು, ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಆರ್ ಅಶೋಕ್ ಮತ್ತು ಸಚಿವ ಸಿಟಿ ರವಿ ಅವರ ಜೊತೆ ಈ ವಿಚಾರದ ಬಗ್ಗೆ ಇಂದು ಸಭೆ ನಡೆಸಲಿದ್ದಾರೆ, ಮತ್ತು ಬಳಿಕ ತಮ್ಮ ನಿರ್ಧಾರವನ್ನು ತಿಳಿಸಲಿದ್ದಾರೆ ಎನ್ನಲಾಗಿದೆ.
ಟೆಲಿವಿಷನ್ ಅಸೋಸಿಯೇಷನ್ ತಮಗೆ ಶೂಟಿಂಗ್ ಮಾಡುವ ಅವಕಾಶವನ್ನು ಮುಖ್ಯಮಂತ್ರಿಗಳು ಮಾಡಿಕೊಡುತ್ತಾರೆ ಎಂಬುವ ನಿರೀಕ್ಷೆಯಿಂದ ಕಾಯುತ್ತಿದ್ದಾರೆ, ಕೆಲವು ನಿರ್ಬಂಧನೆಗಳನ್ನು ವಹಿಸಿ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಲ್ಲಿ ಕರ್ನಾಟಕ ಜನತೆ ಇನ್ನು ಕೇವಲ ಕೆಲವೇ ದಿನಗಳಲ್ಲಿ ಎಂದಿನಂತೆ ಮನೆಯಲ್ಲಿ ನಿಮ್ಮ ನೆಚ್ಚಿನ ಧಾರಾವಾಹಿಯ ವೀಕ್ಷಣೆ ಮಾಡಬಹುದಾಗಿದೆ.