ಇಂದಿನ ದಿನಗಳಲ್ಲಿ ಕೀಲುನೋವು ಎಲ್ಲ ವಯಸ್ಸಿನವರನ್ನು ಕಾಡುತ್ತಿದೆ, ಕಾಲು, ಕೈಗಳು ಕುತ್ತಿಗೆಯ ಕೀಳುಗಳು ತುಂಬಾ ನೋಡುವಾಗ ಕೆಲವು ಸೂಚನೆಗಳನ್ನು ನೀಡಲಾಗಿದೆ, ಅವುಗಳನ್ನು ನೀವು ಪಾಲಿಸಿದರೆ ನೋವಿನಿಂದ ಗುಣಮುಖರಾಗ ಬಹುದು.
ಹರಳೆಣ್ಣೆ ಮತ್ತು ನಿಂಬೆರಸ ಸಮಾನ ಪ್ರಮಾಣದಲ್ಲಿ ಸೇರಿಸಿ ಕೀಳು ನೋವು ಇರುವ ಕಡೆಗೆ ಹಚ್ಚಿ ಚೆನ್ನಾಗಿ ತಿಕ್ಕಿ ನೋವು ಕೂಡಲೇ ಪರಿಹಾರವಾಗುವುದು.
ಸ್ಥೂಲ ಕಾಯಿಲೆಗೆ ಕೀಳು ನೋವು ಅತಿಯಾಗಿ ಕಾಡುವುದು ದೇಹದ ತೂಕವನ್ನು ಕಡಿಮೆ ಮಾಡಿ ಕೊಳ್ಳುವುದರಿಂದ ಕೀಳು ನೋವು ಬರದಂತೆ ತಡೆಯಬಹುದು.
ಮೂಳೆಗಳ ನಿಶಕ್ತಿಯಿಂದ ಕೀಳು ನೋವು ಬರುವುದು ಒಣ ದ್ರಾಕ್ಷಿಯ ಸೇವನೆಯಿಂದ ಮೂಳೆಗಳಿಗೆ ಶಕ್ತಿ ಬರುವುದು.
ಊರಿನ ನುಗ್ಗೆ ಸೊಪ್ಪನ್ನು ಕೀಳು ನೋವು ಇರುವ ಜಾಗಕ್ಕೆ ಕಟ್ಟುವುದರಿಂದ ನೋವು ಶಮನವಾಗುವುದು.
ಹುಣಸೆ ಎಲೆಗಳನ್ನು ಕೀಳು ನೋವು ಇರುವ ಕಡೆ ಕಟ್ಟಿದರೆ ನೋವು ದೂರವಾಗುವುದು.
ಕೀಳು ನೋವು ಮತ್ತು ಸಂಧಿವಾತ ದೂರವಾಗಲು ಒಂದು ಉಪಾಯ ಉಂಟು ಹಸಿ ಶುಂಟಿ ಬೆಳ್ಳುಳ್ಳಿ ಮತ್ತು ಇಂಗು ಜಜ್ಜಿಕೊಂಡು ಎಳ್ಳೆಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ ಉಗುರು ಬೆಚ್ಚಗಿನ ಎಣ್ಣೆಯನ್ನು ಕೀಳು ನೋವು ಇರುವ ಕಡೆಗೆ ಹಚ್ಚಬೇಕು.
ಕೀಳು ನೋವಿನಿಂದ ಕಾಲು ಕೈಗಳು ಊದಿ ಕೊಂಡಿದ್ದರೆ ಕೊಬ್ಬರಿ ಎಣ್ಣೆಗೆ ಇಂಗು ಹಾಕಿ ಕಾಯಿಸಿ ಉಗುರು ಬೆಚ್ಚಗಿನ ಎಣ್ಣೆಯನ್ನು ಕೀಳು ನೋವು ಇರುವ ಕಡೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿದರೆ ನೋವು ದೂರವಾಗುವುದು.
ಕೀಳು ನೋವು ಇರುವ ಕಡೆ ಬಿಸಿ ನೀರಿನ ಶಾಖ ಕೊಡುವುದರಿಂದ ನೋವು ದೂರವಾಗುವುದು.
ಮೂಳೆ ನೋವು ಕೀಲು ನೋವು ಗಳಿಗೆ ಹುರಿದ ಗೋಧಿ ಹಿಟ್ಟಿನಿಂದ ತಯಾರಿಸಿದ ತಂಬಿಟ್ಟು ಮಾಡಿಕೊಂಡು ತಿನ್ನುವುದರಿಂದ ನೋವು ದೂರವಾಗುವುದು.
ಕೀಳು ನೋವು ದೂರವಾಗಲು ಒಂದು ಬಟ್ಟಲು ಮೊಸರಿಗೆ ಒಂದು ಅರಿಶಿನ ಕೊಂಬನ್ನು ಅರೆದು ಸೇರಿಸಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಆಗ ನೋವು ವಾಸಿಯಾಗುವುದು.
ಕೀಳು ನೋವಿರುವ ಕಡೆಗೆ ಕಲ್ಲು ಉಪ್ಪು ಉರಿದು ಶಾಖವನ್ನು ಕೊಡಬೇಕು ಆಗ ನೋವು ಶಮನವಾಗುತ್ತದೆ.
ಓಮಿನಿ ಕಾಳಿಗೆ ನಿಂಬೆರಸ ಬೆರೆಸಿ ಚೆನ್ನಾಗಿ ಹರೆದು ಬಿಸಿ ಮಾಡಿ ಊತ ಇರುವ ಕಡೆಗೆ ಹಚ್ಚಬೇಕು ಆಗ ಕೀಳು ನೋವು ಕಡಿಮೆಯಾಗುತ್ತದೆ.
ಗಮನಿಸಿ : ಕೀಳು ನೋವು ತುಂಬಾ ನೋವನ್ನು ಕೊಡುವ ಕಾಯಿಲೆ, ವಾತ ತುಂಬಿರುವ ಪದಾರ್ಥಗಳನ್ನು ಸೇವಿಸಬಾರದು, ಆಲೂಗೆಡ್ಡೆ ಕುಂಬಳಕಾಯಿ ಅತಿಯಾದ ಪ್ರೀತಿ ತುಂಬಿರುವ ಆಹಾರವನ್ನು ಸೇವಿಸಬಾರದು.