ಪೇರಲೆ ಹಣ್ಣು ಮಾತ್ರವಲ್ಲ ಎಲೆಯಲ್ಲೂ ಇದೆ ಹಲವಾರು ರೋಗಗಳಿಗೆ ಮದ್ದು…!

0
1444

ಪೇರಲೆ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ, ತಿನ್ನಲು ರುಚಿಕರವಾಗಿರುವ ಹಣ್ಣು ಆರೋಗ್ಯಕ್ಕೂ ಒಳ್ಳೆಯದು, ಪೇರಲೆ ಹಣ್ಣು ಬಹಳ ಆರೋಗ್ಯಕಾರಿ ಅಂಶಗಳನ್ನ ಒಳಗೊಂಡಿದೆ, ಪೇರಲೆ ಹಣ್ಣು ಮಾತ್ರವಲ್ಲ ಪೇರಲೆ ಹಣ್ಣಿನ ಗಿಡದ ಎಲೆ ಕೂಡ ಬಹಳಷ್ಟು ಆರೋಗ್ಯಕಾರಿ ಪ್ರಯೋಜನಗಳನ್ನ ಒಳಗೊಂಡಿದೆ, ಪೇರಲೆ ಎಳೆಯ ವಿಶೇಷ ಗುಣಗಳು ಇಲ್ಲಿವೆ ನೋಡಿ.

ಪೇರಲೆ ಎಲೆ ದೇಹದ ತೂಕ ಕಡಿಮೆ ಮಾಡಲು ನೆರವಾಗುತ್ತದೆ, ಪೇರಳೆ ಎಳೆಗಳು ಮಧುಮೇಹ ರೋಗಿಗಳಿಗೆ ಸಹಕಾರಿ, ಪೇರಳೆ ಎಳೆಗಳು ರಕ್ತದೊತ್ತಡ ನಿಯಂತ್ರಣ ಮಾಡುವ ಗುಣವನ್ನ ಹೊಂದಿದೆ.

ಪೇರಳೆ ಎಳೆಗಳು ಅತಿಸಾರ ನಿವಾರಣೆಗೆ ಹೆಚ್ಚು ಲಾಭದಾಯಕ, ಪೇರಳೆ ಎಳೆಗಳು ಜೀರ್ಣಕ್ರಿಯೆಯನ್ನು ಸುಗಮಗೊಳಿಸಲು ನೆರವಾಗುತ್ತವೆ, ಪೇರಲೆ ಎಲೆ ಬ್ಯಾಕ್ಟಿರಿಯಾ ವಿರೋಧಿ ಗುಣವನ್ನು ಹೊಂದಿದೆ.

ಉರಿಯೂತ ನಿರೋಧಕ ಶಕ್ತಿ ಪೇರಳೆ ಎಲೆಗಳಿಗಿದೆ, ಚರ್ಮ, ಕೂದಲು ಹಾಗೂ ಆರೋಗ್ಯ ವೃದ್ಧಿಗೆ ಇದು ಬಹಳಷ್ಟು ಪ್ರಯೋಜನಕಾರಿ.

ಜೊತೆಯಲ್ಲಿ ಇದನ್ನು ಓದಿ ನಿದ್ರಾಹೀನತೆ ಸಮಸ್ಯೆಗೆ ಇಲ್ಲಿದೆ ಸೂಕ್ತ ಪರಿಹಾರ.

ಹೌದು ಪ್ರಸ್ತುತ ದಿನಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ, ಇದಕ್ಕೆ ಚಿತ್ಸೆಯನ್ನು ಪಡೆಯಲು ಹಲವು ಮಾತ್ರೆಗಳನ್ನು ನುಂಗುತ್ತಾರೆ, ಅವುಗಳನ್ನು ಬಿಟ್ಟು ನೈಸರ್ಗಿಕವಾಗಿ ಪರಿಹಾರವನ್ನು ಕಂಡು ಕೊಳ್ಳಿ.

ಕುಳಿತ ಜಾಗದಲ್ಲೇ ಕೆಲಸ ಮಾಡುವವರು ಹಾಗು ಮನೆಯಲ್ಲೇ ಇರುವವರು ಸಾಯಂಕಾಲ ಸ್ವಲ್ಪ ತಿರುಗಾಡಿ, ಅಂದರೆ ವಾಕ್ ಮಾಡಿ, ಇದರಿಂದ ನಿಮ್ಮ ದೇಹಕ್ಕೆ ಉತ್ತಮ ಆರೋಗ್ಯ ಲಭಿಸುತ್ತದೆ.

ರಾತ್ರಿ ಮಲಗುವ ಮುಂಚೆ ಒಂದು ಕಪ್ ಬೆಚ್ಚಗಿನ ಹಾಲು ಕುಡೀರಿ.

ನಿದ್ರಾಹೀನತೆಯ ತೊಂದರೆಯಿರುವವರು ರಾತ್ರಿ ಸಮಯ ಸೂರ್ಯಕಾಂತಿ ಸೊಪ್ಪಿನ ಸಾರನ್ನು ಸೇವಿಸಿದರೆ ಒಳ್ಳೆ ನಿದ್ರೆ ಬರುತ್ತದೆ.

ಮಲ್ಲಿಗೆ ಎಣ್ಣೆಯನ್ನು ಮಸಾಜ್ ಮಾಡಿ, ಸ್ವಲ್ಪ ಮಲ್ಲಿಗೆಯನ್ನು ತಲೆಯ ಹತ್ತಿರ ಇಟ್ಟು ಮಲಗಿದರೆ ಅದರ ಸುವಾಸನೆಯಿಂದ ಬೇಗನೆ ನಿದ್ದೆ ಬರುತ್ತದೆ.

ಲ್ಯಾವಂಡರ್ ಎಣ್ಣೆ ಇದರ ಸುವಾಸನೆ ತೆಗೆದುಕೊಂಡರೆ ಅಧಿಕ ರಕ್ತದೊತ್ತಡ ಕಡಿಮೆಯಾಗುವುದು, ಇದರ ಎಣ್ಣೆಯಿಂದ ಪಾದಕ್ಕೆ ಮಸಾಜ್ ಮಾಡಿ ಎಣ್ಣೆಯನ್ನು ಒಂದು ಬಟ್ಟಲಿಗೆ ಹಾಕಿ ಮಲಗುವ ರೂಮಿನಲ್ಲಿಡಿ, ಇದರ ಸುವಾಸನೆ ಬೇಗನೆ ನಿದ್ದೆ ಮಾಡಿ, ಬೆಳಗ್ಗೆ ಫ್ರೆಶ್ ಆಗಿ ಏಳಲು ಸಹಯಾ ಮಾಡುತ್ತದೆ.

ಆರ್ಯುವೇದದಲ್ಲಿ ಹೆಚ್ಚಾಗಿ ಬಳಸುವ ಗಾರ್ಡಾನಿಯ ಈ ಹೂ ಕೂಡ ಬೇಗನೆ ನಿದ್ದೆ ಬರುವಂತೆ ಮಾಡುವಲ್ಲಿ ತುಂಬಾ ಸಹಕಾರಿ, ಇವುಗಳನ್ನು ಪಾಲಿಸುವುದರಿಂದ ನಿಮ್ಮ ದೇಹಕ್ಕೆ ಉತ್ತಮ ಆರೋಗ್ಯದ ಜೊತೆಗೆ ಸುಖವಾದ ನಿದ್ರೆ ದೊರೆಯಲಿದೆ.

LEAVE A REPLY

Please enter your comment!
Please enter your name here