ಬಾಯಿಯ ದುರ್ವಾಸನೆ ನಮ್ಮನ್ನು ಅನೇಕ ಬಾರಿ ಮುಜುಗರಕ್ಕೆ ಒಳಗಾಗಿ ಒಳಗಾಗಿ ಸುವುದು. ಹಲ್ಲು ಮತ್ತು ಬಾಯಿಯ ಆ ಸ್ವಚ್ಛತೆಯೇ ಬಾಯಿಯ ದುರ್ವಾಸನೆಗೆ ಕಾರಣವಾಗುತ್ತದೆ. ಸುಮಾರು ದಿನಗಳ ಕಾಲ ಹಲ್ಲಿನ ಸ್ವಚ್ಛತೆಯನ್ನು ಹಾಗೆ ಬಿಡುವುದರಿಂದ ಕೊನೆಗೆ ದುರ್ವಾಸನೆ ಪ್ರಾರಂಭವಾಗಿ ನಮ್ಮನ್ನು ಸಂಕಟಕ್ಕೆ ಗುರಿಮಾಡುವುದು.
ಬಾಯಿಯ ದುರ್ವಾಸನೆಯನ್ನು ತಡೆಗಟ್ಟಲು ಜಾಕಾಯಿ, ಏಲಕ್ಕಿಯ ಕಾಳುಗಳನ್ನು ಬಾಯಿಗೆ ಹಾಕಿಕೊಂಡು ಅಗೆಯುವುದರಿಂದ ಕಾಯಿಲೆಯಿಂದ ಕ್ರಮೇಣ ದೂರವಾಗುವುದು.
ಮತ್ತು ದಂತವೈದ್ಯರ ಸಲಹೆಯ ಮೇರೆಗೆ ಔಷಧಗಳನ್ನು ತೆಗೆದುಕೊಳ್ಳಬೇಕು, ಪುದೀನಾ ಎಲೆಗಳನ್ನು ಅಗಿಯುವುದರಿಂದ ಬಾಯಿಯ ದುರ್ಗಂದ ದೂರವಾಗುತ್ತದೆ.
ಕೊತ್ತಂಬರಿ ಸೊಪ್ಪನ್ನು ಶುಭ್ರಗೊಳಿಸಿ ಅಗೆಯುವುದರಿಂದ ಬಾಯಿಯಲ್ಲಿ ದುರ್ವಾಸನೆ ನಿವಾರಣೆಯಾಗುತ್ತದೆ.
ಹಸಿಶುಂಠಿ, ಉಪ್ಪು, ಲವಂಗವನ್ನು ಪೇಸ್ಟ್ ಮಾಡಿಕೊಂಡು ಬಾಯಿಗೆ ಹಾಕಿ ಅಗೆಯುವುದರಿಂದ ಬಾಯಿಯ ದುರ್ವಾಸನೆ ದೂರವಾಗುವುದಿಲ್ಲ ದೆ ನಾಲಿಗೆಯ ರುಚಿ ಕೂಡ ಹೆಚ್ಚುತ್ತದೆ.
ಶ್ರೀಗಂಧವನ್ನು ಚೆನ್ನಾಗಿ ಗಂಧ ತೆಗೆದು ಉಗುರುಬೆಚ್ಚಗಿನ ನೀರಿನಲ್ಲಿ ಬೆರೆಸಿ ಚೆನ್ನಾಗಿ ಗೋಟಾಯಿಸಬೇಕು. ಹೀಗೆ ಗೋಟಾಯಿಸಿದ ನೀರನ್ನು ಬಾಯಿಗೆ ಹಾಕಿಕೊಂಡು ಮುಕ್ಕಳಿಸುವುದರಿಂದ ದುರ್ಗಂಧ ದೂರವಾಗುತ್ತದೆ.
ಹಾಗಲ್ಲದೆ ರಾತ್ರಿ ಊಟವಾದ ನಂತರ ಸ್ವಲ್ಪ ಪ್ರಮಾಣದ ಸೋಂಪಿನ ಕಾಳುಗಳನ್ನು ಬಾಯಿಗೆ ಹಾಕಿಕೊಂಡು ನಡೆಯುವುದು ಒಳ್ಳೆಯದು.
ಗಮನಿಸಿ: ಬಾಯಿಯ ದುರ್ಗಂಧವನ್ನು ನಿವಾರಿಸಲು ಏಲಕ್ಕಿ, ಸೋಂಪು, ಜಾಕಾಯಿ ಮುಂತಾದ ಪದಾರ್ಥಗಳಲ್ಲಿ ಔಷಧೀಯ ಗುಣಗಳು ಇರುವುದರಿಂದ ಬಾಯಿಯ ದುರ್ಗಂಧ ಬರುವುದಿಲ್ಲ.