ಹಣ್ಣುಗಳಲ್ಲೇ ಬಾಳೆಹಣ್ಣು ತುಂಬಾ ಶ್ರೇಷ್ಠ, ಈ ಹಣ್ಣು ತಿನ್ನುವುದಕ್ಕೂ ಕಷ್ಟವಾಗಲ್ಲ ಸಿಪ್ಪೆ ಸುಲಿದು ಬಾಯಿಗೆ ಇಟ್ತರಾಯಿತಷ್ಟೇ, ಇನ್ನು ನೀವು ಪ್ರತಿದಿನ ಬರಿ 2 ಬಾಳೆ ಹಣ್ಣು ತಿಂದರೆ ನಿಮ್ಮ ಆರೋಗ್ಯಕ್ಕೆ ಎಷ್ಟು ಲಾಭ ಇದೆ ಗೊತ್ತಾ ನೀವೇ ನೋಡಿ.
ನಿಮ್ಮ ದೇಹದ ರಕ್ತದೊತ್ತಡ ಹೆಚ್ಚಾಗಿದ್ರೆ, ಬಾಳೇಹಣ್ಣಿನಲ್ಲಿರುವ ಸುಮಾರು ೪೦೦ ಎಂ ಜಿ ಪೊಟಾಷಿಯಮ್ ನಿಮ್ಮ ದೇಹದ ರಕ್ತದೊತ್ತಡವನ್ನ ಸಾಮಾನ್ಯ ಸ್ತಿತಿಗೆ ತಂದುಬಿಡುತ್ತದೆ.
ನಿಮ್ಮ ತೂಕ ಜಾಸ್ತಿ ಇದ್ದರೆ ಪ್ರತಿದಿನ ಬಾಳೇಹಣ್ಣು ತಿಂದರೆ ಸಾಕು ನಿಮ್ಮ ದೇಹಕ್ಕೆ ಸಿಗಬೇಕಾದ ಪೌಷ್ಟಿಕಾಂಶಗಳು ಸಿಗುತ್ತದೆ ಹಾಗೆಯೇ ನೀವು ಸಣ್ಣ ಆಗುವುದಕ್ಕೂ ಸಹಕಾರಿ.
ಗ್ಯಾಸ್ಟ್ರಿಕ್ ಮತ್ತೆ ಎದೆ ಉರಿ ಇರುವವರು ಬಾಳೆಹಣ್ಣು ತಿನ್ನುವುದರಿಂದ ತುಂಬಾ ಲಾಭ ಇದೆ, ಹಾಗೇನೆ ಬೇಧಿ ಮತ್ತೆ ಅತಿಸಾರದಿಂದ ನರಳುತ್ತಿರುವವರಿಗೆ ಬಾಳೇಹಣ್ಣು ತುಂಬಾ ಒಳ್ಳೆಯದು.
ಈ ಹಣ್ಣಿನಲ್ಲಿ ನಾರಿನಂಶ ಜಾಸ್ತಿ ಇರೋದ್ರಿಂದ, ಒಂದೇ ಸಲಕ್ಕೆ ಎರಡು ಹಣ್ಣು ತಿಂದರೆ ಸಾಕು ತುಂಬ ಹೊತ್ತು ಹಸಿವಾಗಲ್ಲ. ಹಾಗೇನೆ ರಕ್ತದಲ್ಲಿ ಸಕ್ಕರೆ ಅಂಶ ಕಮ್ಮಿ ಮಾಡಿ, ದೇಹದಲ್ಲಿ ಇನ್ಸುಲಿನ್ ಸರಿಯಾಗಿ ಕೆಲಸ ಮಾಡೋ ಹಾಗೆ ಮಾಡುತ್ತೆ.
ದೇಹದ ಕಣಗಳು : ಗ್ಲುಕೋಸ್ ಹಿರಿಕೊಳ್ಳಕ್ಕೆ ಆಗಲ್ಲ, ಆಗ ಮೀದೊಜೀರಕ ಗ್ರಂಥಿ ಜಾಸ್ತಿ ಪ್ರಮಾಣದಲ್ಲಿ ಗ್ಲುಕೋಸ್ ಬಿಡುಗಡೆ ಮಾಡುತ್ತದೆ, ನಮ್ಮ ದೇಹದಲ್ಲಿ ಕೊಬ್ಬಿನಾಂಶ ಶೇಖರಣೆ ಆಗುತ್ತಿದೆಯೋ ಇಲ್ಲವೋ ಅನ್ನೋದು ಈ ಇನ್ಸುಲಿನ್ ಸರಿಯಾಗಿ ಕೆಲಸ ಮಾಡೋ ಹಾಗೆ ಬಾಳೇಹಣ್ಣು ಮಾಡುತ್ತೆ.
ಜೀರ್ಣಶಕ್ತಿ ಹೆಚ್ಚಾಗುತ್ತದೆ : ಈ ಬಾಳೆಹಣ್ಣು ತುಂಬಾ ಸುಲಭವಾಗಿ ಜೀರ್ಣವಾಗುತ್ತದೆ, ಜೊತೆಗೆ ಹೊಟ್ಟೆ ಕುರುಳಿಗೆ ಯಾವ ರೀತಿಯ ತೊಂದರೆಯೂ ನೀಡಲ್ಲ, ಇದರಲ್ಲಿರೋ ಪಿಷ್ಟ ಹೊಟ್ಟೆಯಲ್ಲಿ ಜೀರ್ಣ ಆಗಲ್ಲ. ಬದಲಾಗಿ ದೊಡ್ಡ ಕರುಳಿನವರೆಗೂ ಹೋಗಿ ಆರೋಗ್ಯಕರ ಬ್ಯಾಕ್ಟೀರಿಯಾಗೆ ಪೌಷ್ಟಿಕಾಂಶ ಕೊಡುತ್ತದೆ.
ವಿಟಮಿನ್ ಕೊರತೆ ಬರಲ್ಲ : ದಿನ ಒಂದು ಬಾಳೇಹಣ್ಣು ತಿಂದರೆ ನಿಮ್ಮ ದೇಹಕ್ಕೆ ಬೇಕಿರೋ ಸುಮಾರು 20% ನಷ್ಟು ವಿಟಮಿನ್ ಬಿ6 ಸಿಗುತ್ತದೆ ಹಾಗು ಇದು ನಿಮ್ಮ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯಾಗುವುದಕ್ಕೆ ಹಾಗು ಆರೋಗ್ಯ ಕಣಗಳು ಹೊಸದಾಗಿ ಬೆಳೆಯುವುದಕ್ಕೆ ಸಹಾಯ ಮಾಡಲಿದೆ.
ನಾವು ಸಾಮಾನ್ಯವಾಗಿ ಕಿತ್ತಳೆ ಹಣ್ಣು, ನೆಲ್ಲಿಕಾಯಿ ಹಾಗು ಸ್ಟ್ರಾಬೇರಿಯಲ್ಲಿ ವಿಟಮಿನ್ ಸಿ ಜಾಸ್ತಿಯಿದೆ ಅಂದುಕೊಂದ್ದೆವು ಆದರೆ ಬಾಳೇಹಣ್ಣಿನಲ್ಲಿ ದಿನನಿತ್ಯ ನಮಗೆ ಬೇಕಿರೋ ಶೇಕಡ 15% ವಿಟಮಿನ್ ಸಿ ಇದೆ. ನಮ್ಮ ದೇಹಕ್ಕೆ ವಿಟಮಿನ್ ಸಿ ತುಂಬಾ ಮುಖ್ಯ ಇದು ದೇಹದಲ್ಲಿ ರೋಗ ನಿರೋದಕ ಶಕ್ತಿ ಹೆಚ್ಚು ಮಾಡುವುದರ ಜೊತೆಗೆ ಹಾನಿ ಮಾಡೋ ಫ್ರೀ ರಾಡಿಕಲ್ಸ್ ಕಡಿಮೆ ಮಾಡುತ್ತದೆ.
ಅಷ್ಟೇ ಅಲ್ಲ ರಕ್ತನಾಳಗಳು ಆರೋಗ್ಯಕರವಾಗಿರುವುದಕ್ಕೆ ಮತ್ತೆ ಕೊಲ್ಯಾಜನ್ ಉತ್ಪತ್ತಿಯಗಕ್ಕೆ ಸಹಾಯ ಮಾಡುತ್ತದೆ.
ದೇಹದಲ್ಲಿ ಶಕ್ತಿ ಸಾಮರ್ಥ್ಯ ಹೆಚ್ಚಾಗುತ್ತದೆ ಈಗಿನ ಕಾಲದಲ್ಲಿ ನಾವು ತಿನ್ನೋ ಆಹಾರದಲ್ಲಿ ಯಾವ ರೀತಿಯ ಶಕ್ತಿಯೂ ಸಿಗುವುದಿಲ್ಲ, ಸಮಯಕ್ಕೆ ಸರಿಯಾಗಿ ಊಟನೇ ಮಾಡಲ್ಲ ಇನ್ನು ಶಕ್ತಿ ಎಲ್ಲಿಂದ ಬರಬೇಕು ಹೇಳಿ ?? ಆಗ ಸಹಾಯವಾಗೊದೆ ನಮ್ಮ ಸ್ನೇಹಿತ ಬಾಳೆಹಣ್ಣು ಇದರಲ್ಲಿ ಪೊಟಾಷಿಯಮ್ ಇದೆ, ಹಾಗಾಗಿ ಮಾಂಸಖಂಡ ಬಿಗಿಹಿಡಿಯೋದ್ರಿಂದ ಕಾಪಾಡುತ್ತದೆ ಜೊತೆಗೆ ಇದರಲ್ಲಿರೋ ಕಾರ್ಬೋಹೈದ್ರೆಟ್ಸ್ ಎಂತಹ ಕಷ್ಟದ ಕೆಲಸನಾದ್ರೂ ಮಾಡುವ ಶಕ್ತಿ ಸಾಮರ್ಥ್ಯ ಕೊಡುತ್ತದೆ.
ಪ್ರತಿದಿನ ಬಾಳೇಹಣ್ಣು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಎಷ್ಟು ಲಾಭ ನೋಡಿ, ಇಂದಿನಿಂದಲೇ ಪ್ರತಿದಿನ ಎರಡೆರಡು ಬಾಳೇಹಣ್ಣು ತಿನ್ನುವ ಅಭ್ಯಾಸ ಮಾಡಿಕೊಳ್ಳಿ.