ಮಧುಮೇಹ ಕಾಯಿಲೆಯಿಂದ ನೀವು ಮಾನಸಿಕವಾಗಿ ಕುಗ್ಗುವ ಅವಶ್ಯಕತೆ ಇಲ್ಲ, ಮಧುಮೇಹ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ನೀವು ಆರೋಗ್ಯವಾಗಿ ಇರಲು ಕೆಲವು ಅರ್ಥಪೂರ್ಣ ಸಲಹೆಗಳನ್ನು ಇಂದು ನಿಮಗಾಗಿ ನೀಡುತ್ತಿದ್ದೇವೆ.
ಪ್ರತಿದಿನ ತಪ್ಪದೆ ಕನಿಷ್ಠಪಕ್ಷ 30 ನಿಮಿಷವಾದರೂ ವ್ಯಾಯಾಮವನ್ನು ಮಾಡಬೇಕು, ಇದರಿಂದ ನಿಮ್ಮ ದೇಹದ ತೂಕವು ನಿಯಂತ್ರಣಕ್ಕೆ ಬರುತ್ತದೆ ಹಾಗೂ ಸಕ್ಕರೆ ಕಾಯಿಲೆಯ ಸಮಸ್ಯೆಯನ್ನು ದೂರವಿಡುತ್ತದೆ.
ಪ್ರತಿದಿನ ನಿಮ್ಮ ಆಹಾರದ ಸಮಯವನ್ನು ಗುರುತು ಮಾಡಿಕೊಂಡು ತಪ್ಪದೇ ಅದೇ ಸಮಯಕ್ಕೆ ಆಹಾರವನ್ನು ಸೇವಿಸಬೇಕು, ಪ್ರಮುಖವಾಗಿ ಚಳಿಗಾಲದಲ್ಲಿ ಸೋಂಕುಗಳ ಪ್ರಮಾಣ ಹೆಚ್ಚುತ್ತದೆ ಆದ್ದರಿಂದ ಚಳಿಗಾಲದಲ್ಲಿ ಸ್ವಲ್ಪ ಜಾಗರೂಕತೆ ಅಗತ್ಯ, ಬೇಹಿಸಿದ ಮೊಟ್ಟೆ ತಿನ್ನುವ ಅಭ್ಯಾಸ ಮಾಡಿಕೊಂಡರೆ ತುಂಬಾ ಉಪಯೋಗಕಾರಿ.
ವೈದ್ಯರು ಕೊಟ್ಟ ಔಷಧಿಗಳನ್ನು ನಿರ್ದಿಷ್ಟ ಸಮಯದಲ್ಲಿ ತಪ್ಪದೆ ಸೇವಿಸಬೇಕು, ಜೊತೆಯಲ್ಲಿ ಹೆಚ್ಚು ನೀರು ಹಾಗೂ ಕಡಿಮೆ ಕ್ಯಾಲರಿ ಇರುವ ದ್ರವಗಳನ್ನು ಕುಡಿಯಬೇಕು.
ನಿಮ್ಮ ಕಾಲುಗಳಲ್ಲಿ ಗಾಯವಾಗದಂತೆ ನೋಡಿಕೊಳ್ಳಬೇಕು, ಪ್ರತಿದಿನ ಒಮ್ಮೆ ಪಾದಗಳನ್ನು ಪರೀಕ್ಷಿಸಿಕೊಳ್ಳುವುದು ಉತ್ತಮ, ಕಾಲಿನ ಉಗುರುಗಳನ್ನು ಸಮಯಕ್ಕೆ ತಕ್ಕಂತೆ ಕತ್ತರಿಸಿ ಯಾಕೆಂದರೆ ಇದರಿಂದ ಕಾಲುಗಳಿಗೆ ಗಾಯವಾಗಿದೆ ಸಂಭವ ಹೆಚ್ಚು.
ರಕ್ತದ ಒತ್ತಡ, ಕೊಲೆಸ್ಟ್ರಾಲ್ ಮಟ್ಟ, ಕಣ್ಣು ಮತ್ತು ಮೂತ್ರಪಿಂಡ ಕಾರ್ಯ ನಿರ್ವಹಣೆ ಬಗ್ಗೆ ಆಗಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು.ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಮೂಡಲಿ ಹಾಗೂ ಒಳ್ಳೆಯ ಆಹಾರಗಳನ್ನು ಸೇವಿಸಿ ಖುಷಿಯಿಂದ ಇರು ಮದುವೆ ನಿಮ್ಮನ್ನು ಬಾಧಿಸಲು ಸಾಧ್ಯವಿಲ್ಲ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.