ಎಲ್ಲಾ ಋತುಮಾನದಲ್ಲಿ ಸೌತೆಕಾಯಿ ಸಾಮಾನ್ಯವಾಗಿ ಸಿಗುತ್ತದೆ ಆದರೆ ಬೇಡಿಕೆ ಹೆಚ್ಚಾಗುವುದು ಮಾತ್ರ ಬೇಸಿಗೆ ಕಾಲದಲ್ಲಿ, ಎಷ್ಟೇ ಬೇಡಿಕೆ ಹೆಚ್ಚಾದರೂ ಬೆಲೆ ಹೆಚ್ಚಾಗಿದೆ ಪ್ರತಿ ಜನ ಸಾಮಾನ್ಯರ ಕೈಗೆಟುಕುವ ದರದಲ್ಲಿ ಸೌತೆಕಾಯಿ ಇರುತ್ತದೆ, ಇದರಲ್ಲಿ ನೀರಿನ ಅಂಶ ಹೆಚ್ಚಾಗಿ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಸೌತೆಕಾಯಿಯಲ್ಲಿ ಪ್ರೋಟೀನ್, ಬೀಟಾ, ಕೆರೊಟಿನ್ ಮತ್ತು ಆಂಟಿಆಕ್ಸಿಡೆಂಟ್ ಗಳು ಹೆಚ್ಚಾಗಿ ಇರುವುದರಿಂದ ಸೌತೆಕಾಯಿ ಆರೋಗ್ಯದ ದೃಷ್ಟಿಯಿಂದ ಯೋಚನೆ ಮಾಡಿದರೆ ಬಹಳ ಒಳ್ಳೆಯದು, ಇನ್ನು ಈ ಸೌತೆಕಾಯಿಯ ಸೇವನೆಯಿಂದ ಸಿಗುವ ಅದ್ಭುತ ಆರೋಗ್ಯ ಲಾಭಗಳ ಬಗ್ಗೆ ಇಂದು ತಿಳಿಯೋಣ.
ಸೌತೆಕಾಯಿಯ ಸಿಪ್ಪೆಯನ್ನು ತೆಗೆದು ಉಪ್ಪು ಹಾಗೂ ಮೆಣಸು ಬೆರೆಸಿ ತಿನ್ನುವುದರಿಂದ ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗಿ ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ.
ತುಂಬಾ ಎಳೆ ಸೌತೆ ಕಾಯಿ ಅಂದರೆ ಬೀಜ ವಿರದ ಸೌತೆಕಾಯಿ ಸೇವಿಸುವುದರಿಂದ ಪುರುಷರ ವೀರ್ಯ ವೃದ್ಧಿಯಾಗುತ್ತದೆ ಎಂದು ಹಲವು ಸಂಶೋಧನೆಗಳು ದೃಢಪಡಿಸಿವೆ.
ಹಾಗೂ ಹಸಿ ಸೌತೆಕಾಯಿ ಯನ್ನು ಸೇವನೆ ಮಾಡುವುದರಿಂದ ಮೂತ್ರದ ಹಲವು ಸಮಸ್ಯೆಗಳು ಬಗೆಹರಿಯುತ್ತದೆ.
ಅತಿ ಮುಖ್ಯವಾಗಿ ಸೌತೆಕಾಯಿ ರಸ ತೆಗೆದು ಅದನ್ನು ಅಂಗಾಲು ಗಳಿಗೆ ಸವರಿ ಉಜ್ಜುವುದರಿಂದ ಕಣ್ಣಿನ ಉರಿ ಕಡಿಮೆಯಾಗಿ ಒಳ್ಳೆಯ ನಿದ್ದೆ ಬರುತ್ತದೆ.
ಸೌತೆಕಾಯಿ ರಸವನ್ನು ತೆಗೆದು ಅದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿರುವ ಕಪ್ಪು ಕಲೆಗಳು ನಿವಾರಣೆಯಾಗಿ ಚರ್ಮವು ಹೊಳೆಯುತ್ತವೆ.
ಕಣ್ಣುಗಳ ಕೆಳಗೆ ಕಪ್ಪು ವರ್ತುಲ ಹೆಚ್ಚಾಗಿದ್ದರೆ ಸೌತೆಕಾಯಿಯನ್ನು ಕತ್ತರಿಸಿ ಅರ್ಧ ತಾಸು ಫ್ರಿಡ್ಜ್ ನಲ್ಲಿ ಇಟ್ಟು ನಂತರ ಅದನ್ನು ಕಣ್ಣುಗಳ ಮೇಲೆ ಇಟ್ಟರೆ ಕಪ್ಪು ವರ್ತುಲಗಳು ನಿವಾರಣೆಯಾಗುತ್ತವೆ ಹಾಗೂ ಆಯಾಸ ಗೊಂಡಿರುವ ಕಣ್ಣುಗಳಿಗೆ ವಿಶ್ರಾಂತಿ ಸಿಗುತ್ತದೆ.
ಹಸಿ ಸೌತೆಕಾಯಿ ಸೇವನೆ ಮಾಡುವವರಿಗೆ ಮಧುಮೇಹ, ರಕ್ತದೊತ್ತಡ ಈ ರೀತಿಯ ಸಮಸ್ಯೆಗಳು ಬರಲು ಕಷ್ಟ ಸಾಧ್ಯ.
ಕ್ಯಾನ್ಸರ್ ನಂತಹ ದೊಡ್ಡ ಸಮಸ್ಯೆ ಯನ್ನು ಪ್ರತಿದಿನ ಸೌತೆಕಾಯಿ ತಿನ್ನುವ ರೂಢಿ ಮಾಡಿಕೊಂಡವರು ಸುಲಭವಾಗಿ ಎದುರಿಸಬಹುದು.