ಅಕ್ಕಿ ತೊಳೆದ ನಂತರ ಸಾಮಾನ್ಯವಾಗಿ ಎಲ್ಲರು ನೀರನ್ನು ಚೆಲ್ಲುತ್ತಾರೆ, ಆದರೆ ಜಪಾನ್ ನಂತಹ ದೇಶಗಳಲ್ಲಿ ಯಾವುದೇ ಕಾರಣಕ್ಕೂ ಅಕ್ಕಿ ತೊಳೆದ ನೀರನ್ನ ಚೆಲ್ಲುವುದಿಲ್ಲ, ಬದಲಿಗೆ ಅದನ್ನು ತಮ್ಮ ಸುಂದರ ಕೂದಲಿಗೆ ಹಾಗು ತ್ವಚೆಯ ಸ್ವಚ್ಛತೆಗೆ ಬಳಸುತ್ತಾರೆ, ಅಷ್ಟೇ ಅಲ್ಲದೆ ಅಕ್ಕಿ ತೊಳೆದ ಈ ನೀರಿನಿಂದ ಆರೋಗ್ಯಕ್ಕೆ ತುಂಬಾನೇ ಉಪಯೋಗಗಳಿವೆ ಹಾಗು ಇದು ಅನೇಕರಿಗೆ ತಿಳಿದಿಲ್ಲ, ಈ ಮಾಹಿತಿಯನ್ನ ಒಮ್ಮೆ ಸಂಪೂರ್ಣವಾಗಿ ಒಮ್ಮೆ ಓದಿ.
ಅಕ್ಕಿ ತೊಳೆದ ನೀರಿನಲ್ಲಿ ಅಮೈನೋ ಆಸಿಡ್ ಇರುವುದರಿಂದ ಆ ನೀರಿನಲ್ಲಿ ನಿಮ್ಮ ಕೂದಲನ್ನು ತೊಳೆದರೆ ನಿಮ್ಮ ಕೂದಲಿನ ಬೇರು ಗಟ್ಟಿಗೊಳ್ಳುತ್ತದೆ, ಹಾಗು ಕೂದಲು ದಪ್ಪ ಹಾಗು ಆರೋಗ್ಯವಾಗಿ ಬೆಳೆಯಲು ಸಹಾಯ ಮಾಡುತ್ತದೆ, ಕೂದಲ ಉದುರುವಿಕೆ ಗಣನೀಯವಾಗಿ ಕಡಿಮೆಗೊಳ್ಳುತ್ತದೆ.
ಅಷ್ಟೇ ಅಲ್ಲದೆ ಅಕ್ಕಿ ತೊಳೆದ ನೀರಿನಿಂದ ಚರ್ಮಕ್ಕು ಇದೆ ಅನೇಕ ಲಾಭಗಳು, ಈ ನೀರಿಗೆ ನಿಮ್ಮ ಚರ್ಮವನ್ನು ತಂಪುಗೊಳುಸುವ ಮತ್ತು ಮ್ರುದುವಾಗಿಸುವ ಸಾಮರ್ಥ್ಯವಿದೆ ಇದೆ ಕಾರಣಕ್ಕೆ ಸುಟ್ಟ ಗಾಯಕ್ಕೆ ಬಳಸುವ ಆಯುರ್ವೇದಿಕ್ ಆಯಿಂಟ್ಮೆಂಟ್ ಗಳ ತಯಾರಿಕೆಯಲ್ಲಿ ಅಕ್ಕಿ ತೊಳೆದ ನೀರನ್ನು ಬಳಸುತ್ತಾರೆ.
ಅಕ್ಕಿ ತೊಳೆದ ನೀರು ನಮ್ಮ ದೇಹದ ರಕ್ತ ಸಂಚಾರ ಅಧಿಕ ಗೊಳಿಸುವುದಲ್ಲದೆ ವಯಸ್ಸಾದಂತೆ ಕಾಣಿಸಿಕೊಳ್ಳುವ ಕಪ್ಪು ಕಲೆಗಳನ್ನು ನಿವಾರಿಸಿ ಯಂಗ್ಆಗಿ ಕಾಣುವಂತೆ ಮಾಡುತ್ತದೆ ಹಾಗು ಇದರಿಲ್ಲಿರುವ ಆಂಟಿ ಆಕ್ಸಿಡೆಂಟ್ ಗಾಯ ಗುಣಪಡಿಸುವ ಶಕ್ತಿ ಹೊಂದಿದೆ, ಚರ್ಮದಲ್ಲಿ ಮೂಡುವ ರಂದ್ರಗಳಿಗೆ ಕೂಡ ಇದು ಅತ್ಯದ್ಬುತ ಮೆಡಿಸನ್ ಹಾಗು ಈ ನೀರಿಗೆ ಕಿತ್ತಳೆ ಸಿಪ್ಪೆ, ಲಿಂಬೆಯ ಸಿಪ್ಪೆ, ಗ್ರೀನ್ ಟೀ, ಬೇವಿನ ಎಲೆ ಇವಗಳಲ್ಲಿ ಯಾವುದಾರೊಂದು ಮಿಕ್ಸ್ ಮಾಡಿಕೊಂಡು ಬಳಸಿ ನೋಡಿ ನಿಮ್ಮ ಚರ್ಮ ತಟ್ ಅಂತ ಹೊಳೆಯಲಾರಂಬಿಸುತ್ತದೆ.
ಕೂದಲು ತೊಳೆಯಲು ಹಾಗು ಸ್ಕಿನ್ ಟೋನರ್ ಆಗಿ ಕೂಡ ಅಕ್ಕಿ ತೊಳೆದ ನೀರನ್ನು ಬಳಸಬಹುದು, ಈ ನೀರಿನ ಜೊತೆ ಸ್ವಲ್ಪ ಲಿಂಬೆಯ ರಸ, ಲಾವ್ವೆಂಡರ್ ಮಿಕ್ಸ್ ಮಾಡಿರುವ ಎಸೆನ್ಶಿಯಲ್ ಆಯಿಲ್ ಮಿಕ್ಸ್ ಮಾಡಿ ಮುಖ ಹಾಗು ದೇಹವನ್ನು ಕೂಡ ತೊಳೆದುಕೊಳ್ಳಬಹುದು, ಬಾಡಿ ಕ್ಲೀನರ್ ತರ ಕೂಡ ಉಪಯೋಗಿಸಿಕೊಳ್ಳಬಹುದು.