ಪ್ರತಿದಿನ ಒಂದು ಲೋಟ ಹಾಲು ಕುಡಿಯಲು ಮನೆಯಲ್ಲಿ ಪೋಷಕರು ಒತ್ತಾಯ ಮಾಡುತ್ತಾರೆ ಕಾರಣ ಹಾಲು ನಮ್ಮ ಆರೋಗ್ಯಕ್ಕೆ ಅತ್ಯಂತ ಉತ್ತಮವೆಂದು, ಆದರೆ ಅದೇ ಹಾಲನ್ನು ನಾವು ಈ ಕೆಳಗೆ ತಿಳಿಸಿದ ಆಹಾರದ ಜೊತೆ ಸೇವನೆ ಮಾಡಿದರೆ ನಿಮ್ಮ ಆರೋಗ್ಯ ಕೆಡುವುದು ಮತ್ತು ಆಯುರ್ವೇದದ ಪ್ರಕಾರ ಈ ಆಹಾರಗಳ ಸೇವನೆ ಮಾಡಿದರೆ ತೊಂದರೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ, ಯಾವೆಲ್ಲ ಆಹಾರಗಳನ್ನು ತಿನ್ನಬಾರದು ನೋಡಿ.
ಉಪ್ಪಿನ ಆಹಾರ : ಹಾಲಿನ ಜೊತೆ ಚಿಪ್ಸ್, ಮಿಕ್ಷರ್, ಲೇಸ್ ಮೊದಲಾದ ಆಹಾರ ಸೇವನೆ ಮಾಡುವುದು ಹಾನಿಕಾರಕ, ಇದರಲ್ಲಿ ಉಪ್ಪಿನ ಅಂಶ ಹೆಚ್ಚಾಗಿರುವ ಕಾರಣ ಹಾಲಿನ ಪ್ರೊಟೀನ್ ನಿಮ್ಮ ದೇಹಕ್ಕೆ ಸೇರುವುದಿಲ್ಲ. ಜೊತೆಗೆ ಸ್ಕಿನ್‌ಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಈರುಳ್ಳಿ : ಆಹಾರದಲ್ಲಿ ಈರುಳ್ಳಿ ಇದ್ದರೆ ಅದರ ಜೊತೆಗೆ ಅಥವಾ ನಂತರ ಹಾಲು ಸೇವನೆ ಮಾಡುವುದನ್ನು ಅವಾಯ್ಡ್ ಮಾಡಿ. ಇದನ್ನು ಸೇವನೆ ಮಾಡಿದರೆ ತುರಿಕೆ, ಇನ್‌ಫೆಕ್ಷನ್, ಮೊದಲಾದ ಸ್ಕಿನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಉದ್ದಿನ ಬೇಳೆ : ಉದ್ದಿನ ಬೇಳೆಯಿಂದ ಮಾಡಿದ ಆಹಾರ ಮತ್ತು ಹಾಲು ಎರಡು ಸಹ ಜೀರ್ಣವಾಗಲು ತುಂಬಾ ಸಮಯವಾಗುತ್ತದೆ. ಇದನ್ನು ಜೊತೆಯಾಗಿ ಸೇವನೆ ಮಾಡಿದರೆ ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆ ಉಂಟಾಗುತ್ತದೆ.
ಮೆಣಸು : ಮೆಣಸು ಅಥವಾ ಮಸಾಲೆ ಪದಾರ್ಥದ ಜೊತೆಗೂ ಹಾಲು ಸೇವನೆ ಮಾಡಬೇಡಿ. ಯಾಕೆಂದರೆ ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ನೋವು, ಆಸಿಡಿಟಿ, ಗ್ಯಾಸ್, ವಾಂತಿ ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಮೀನು : ಮೀನು ತುಂಬಾ ಉಷ್ಣವುಳ್ಳ ಆಹಾರವಾಗಿದೆ. ಮೀನಿನ ಜೊತೆ ಹಾಲು ಸೇವನೆ ಮಾಡಿದರೆ ಗ್ಯಾಸ್, ಎಲರ್ಜಿ ಜೊತೆಗೆ ಸ್ಕಿನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಮೊಸರು : ಹಾಲು ಮತ್ತು ಮೊಸರಿನ ಉತ್ಪನ್ನಗಳನ್ನು ಜೊತೆಯಾಗಿ ಸೇವನೆ ಮಾಡಬಾರದು. ಇದನ್ನು ಜೊತೆಯಾಗಿ ತಿಂದರೆ ಆಸಿಡಿಟಿ, ಗ್ಯಾಸ್, ವಾಂತಿ ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಬಾಳೆಹಣ್ಣು : ನಿಮಗೆ ಶೀತ, ಕೆಮ್ಮು, ನೆಗಡಿ ಮೊದಲಾದ ಸಮಸ್ಯೆ ಇದ್ದರೆ ಹಾಲಿನ ಜೊತೆಗೆ ಬಾಳೆಹಣ್ಣು ಸೇವನೆ ಮಾಡಬೇಡಿ. ಇದರಿಂದ ಕಫ ಹೆಚ್ಚಾಗುತ್ತದೆ.