ಬೆಂಗಳೂರಿನಲ್ಲಿ ನೆಲಸಿರುವ ಈ ತಾಯಿಗೆ ನಿಂಬೆ ಹಣ್ಣಿನ ದೀಪ ಹಚ್ಚಿದರೆ ಸಾಕು ಸಕಲ ಆಸೆ ನೆರವೇರುತ್ತದೆ!

0
1813

ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿರುವ ಬನಶಂಕರಿ ದೇವಾಲಯ, ಕನಕಪುರ ರಸ್ತೆಯಲ್ಲಿದೆ, ಈ ದೇವಸ್ಥಾನ ಬೆಂಗಳೂರಿನ ಶ್ರದ್ಧಾಳುಗಳ ನೆಚ್ಚಿನ ತಾಣ, ಬೆಂಗಳೂರಿನ ಅಕ್ಕಪಕ್ಕದ ಸ್ಥಳಗಳ ಭಕ್ತಾದಿಗಳು ಮತ್ತು ದೂರದೂರದಿಂದ ಶ್ರದ್ಧೆ ಆಸಕ್ತಿಗಳಿಂದ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಮನದ ಕಾಮನೆಗಳನ್ನು ಈಡೇರಿಸಿಕೊಳ್ಳುತ್ತಾರೆ, ಹೀಗಾಗಿ ಇಲ್ಲಿಗೆ ದಿನಪ್ರತಿ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ, ಮೇಲಾಗಿ ಹಳೆಯ ದೇವಸ್ಥಾನದ ಜಾಗದಲ್ಲಿ ಒಂದು ಹೊಸ ಸುಂದರ ದೇವಾಲಯ ಈಗ ಸಿದ್ಧಗೊಂಡಿದೆ.

ದೇವಾಲಯದ ಐತಿಹಾಸ : ಸ್ಥಳ ಪುರಾಣದ ರೀತ್ಯ, ಈ ದೇವಸ್ಥಾನ ಅಸ್ತಿತ್ವಕ್ಕೆ ಬಂದಿದ್ದು, ೧೯೧೫ ರಲ್ಲಿ. ಸೋಮಣ್ಣ ಶೆಟ್ಟಿಯೆಂಬುವರು ಬನಶಂಕರಮ್ಮನವರ ವಿಗ್ರಹವನ್ನು ಬಿಜಾಪುರಜಿಲ್ಲೆಯ ಬದಾಮಿಯಿಂದ ತೆಗೆದುಕೊಂಡು ಬಂದು ಬನಶಂಕರಿ ದೇವಾಲಯದಲ್ಲಿ ಸ್ಥಾಪಿಸಿದರು.

ಬನಶಂಕರಿ ಅಮ್ಮನವರ ವಿಶಿಷ್ಟತೆ : ಅತಿ ಪ್ರಮುಖ ವಿಧಿಯೆಂದರೆ ಅಮ್ಮನವರ ಪೂಜೆಯನ್ನು ರಾಹುಕಾಲದ ಸಮಯದಲ್ಲಿ ನಡೆಸುವ ಪೂಜೆಯ ವಿಧಾನ. ಸಾಮಾನ್ಯವಾಗಿ ಹಿಂದುಗಳಿಗೆ ರಾಹುಕಾಲದಲ್ಲಿ ಯಾವ ವ್ರತ ನಿಯಮಾದಿಗಳು ವರ್ಜಿತವಾಗಿವೆ, ಪಂಚಾಂಗದಲ್ಲೂ ಇದರ ಉಲ್ಲೇಖವಿದೆ. ಈ ವಿಶೇಷ ಪೂಜಾವಿಧಾನದಿಂದಾಗಿ ಈ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಅಪಾರ. ಶುಕ್ರವಾರ, ಮಂಗಳವಾರ ಮತ್ತು ರವಿವಾರದಂದು ಭಕ್ತರ ಗುಂಪೇ ದೇವಾಲಯದಲ್ಲಿ ಕಾಣಬರುತ್ತದೆ, ಬನಶಂಕರಿ ಅಮ್ಮನವರಿಗೆ ಅರ್ಧ ಕತ್ತರಿಸಿದ ನಿಂಬೆಹಣ್ಣನ್ನು ಅದರ ರಸಿಕೆ ತೆಗೆದು ಅದರಲ್ಲಿ ಎಣ್ಣೆದೀಪವನ್ನು ಹಚ್ಚಿಡುವ ವಿಧಿ ಅನನ್ಯವಾದದ್ದು. ಕರ್ನಾಟಕ ಸರಕಾರದ ಧರ್ಮಾರ್ಥ ಸೇವೆಯ ಅಡಿಯಲ್ಲಿ ಈ ದೇವಾಲಯ ಬರುವುದರಿಂದ ಸರಕಾರದ ಕೃಪಾಪೋಷಿತ ದೇವಾಲಯದಲ್ಲಿ ವಿಧಿಗಳು ಚೆನ್ನಾಗಿ ನೆರವೇರುತ್ತವೆ.

ಪ್ರತಿವರ್ಷವೂ ಅಮ್ಮನವರ ಜಾತ್ರೆ, ಡಿಸೆಂಬರ್ ತಿಂಗಳ ಕೊನೆಯ ವಾರ ಇಲ್ಲವೇ ಜನವರಿ ತಿಂಗಳ ಮೊದಲ ವಾರದಲ್ಲಿ ವಿಜೃಂಭಣೆಯಿಂದ ನೆರವೇರುತ್ತದೆ, ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಬರುವ ದಸರಾ ಹಬ್ಬದಲ್ಲೂ ಬನಶಂಕರಿ ದೇವಿಯವರ ಪೂಜಾವಿಧಿಗಳು ಬಹಳ ಸುಂದರವಾಗಿಯೂ ವಿಧಿವತ್ತಾಗಿಯೂ ಜರುಗುತ್ತವೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here