ಯಾವ ಸಮಯದಲ್ಲಿ ಯಾರಿಗೆ ಯಾವ ರೀತಿ ಸಾವು ಸಂಭವಿಸುತ್ತದೆ ಎಂಬುದರ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ, ಆದರೆ ಕೆಲವರು ಮಾತ್ರ ತಮ್ಮ ಸಾವನ್ನು ತಾವೇ ನಿರ್ಧರಿಸಿಕೊಂಡು ಅರ್ಧಕ್ಕೆ ತಮ್ಮ ಅಮೂಲ್ಯವಾದ ಜೀವನವನ್ನು ಕಳೆದುಕೊಂಡುಬಿಡುತ್ತಾರೆ, ಸಾವು ಹೇಗೆ ಬರಲಿ ಸತ್ತನಂತರ ಮನುಷ್ಯನ ದೇಹವನ್ನು ಯಣ ಕರೆಯಲಾಗುತ್ತದೆ, ಹಾಗೂ ದೇಹದ ಸಂಸ್ಕಾರ ಮಾಡಲು ಕೆಲವು ಪದ್ಧತಿಗಳನ್ನು ಅನುಸರಿಸುತ್ತಾರೆ ಹಾಗೂ ಕೊನೆಯಲ್ಲಿ ದೇಹವನ್ನು ಪಂಚಭೂತಗಳಲ್ಲಿ ಆಯ್ಕೆ ಮಾಡುತ್ತಾರೆ.
ಸತ್ತ ನಂತರ ಮನುಷ್ಯನ ದೇಹಕ್ಕೆ ಚಟ್ಟ ಕಟ್ಟಿ, ಊರಿನಲ್ಲಿ ಮೆರವಣಿಗೆ ಮಾಡುವ ರೂಢಿಯಿದೆ, ಅದರ ಜೊತೆಯಲ್ಲಿ ಚಿಲ್ಲರೆ ನಾಣ್ಯಗಳನ್ನು ಎಸೆಯುವ ಅಭ್ಯಾಸ ಇದೆ, ತಮಟೆ ಬಾರಿಸುವುದು, ಪಟಾಕಿ ಹೊಡೆಯುವುದು ಈ ರೀತಿ ಏಕೆ ಮಾಡುತ್ತಾರೆ, ಇದರಿಂದ ಸತ್ತ ಮನುಷ್ಯನಿಗೆ ಏನು ಲಾಭ ಎಂದು ನಿಮ್ಮ ಯೋಚನೆ ಮಾಡಬಹುದು, ಮನುಷ್ಯ ಬದುಕಿದ್ದಾಗ ತನ್ನ ಸ್ವಾರ್ಥಕ್ಕಾಗಿ ಜೀವನ ಮಾಡುತ್ತಾನೆ, ತಾನು ಕಷ್ಟಪಟ್ಟು ದುಡಿದ ಹಣವನ್ನು ಯಾರಿಗೂ ಸಹಾಯಕ್ಕಾಗಿ ಬಳಸುವುದಿಲ್ಲ ಎಲ್ಲವನ್ನು ತನ್ನ ಸ್ವಾರ್ಥಕ್ಕಾಗಿ ಇಟ್ಟುಕೊಳ್ಳುತ್ತಾನೆ, ಆದರೆ ಸತ್ತ ಮೇಲೆ ಅವುಗಳನ್ನು ವ್ಯಕ್ತಿ ಕೊಂಡು ಹೋಗಲು ಸಾಧ್ಯವೇ ಇಲ್ಲ ಇದರ ಅರ್ಥ ಉಳಿದವರಿಗೆ ಗೊತ್ತಾಗಲಿ ಬದುಕಿದ್ದಾಗಲೇ ನಾಲ್ಕು ಜನಕ್ಕೆ ಸಹಾಯ ಮಾಡಲಿ ಎಂಬ ಒಳ ಅರ್ಥವನ್ನು ಸಾರಲು ಸತ್ತ ದೇಹದ ಮೆರವಣಿಗೆ ಸಮಯದಲ್ಲಿ ಚಿಲ್ಲರೆ ನಾಣ್ಯಗಳನ್ನು ಎಸೆಯುತ್ತಾರೆ.