ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೌತೆಕಾಯಿಯನ್ನ ನೀರಲ್ಲಿ ನೆನೆಸಿಟ್ಟು ಕುಡಿದರೆ ಏನಾಗುತ್ತೆ ನೋಡಿ

0
1167

ನಿಮ್ಮ ದಿನದ ಮುಂಜಾನೆಯನ್ನು ಆರೋಗ್ಯಕರವಾಗಿ ಶುರು ಮಾಡಿದರೆ ದೇಹಕ್ಕೆ ಅನೇಕ ಲಾಭಗಳು ಸಿಗುತ್ತದೆ ಹಾಗೆಯೇ ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುವ ಅಭ್ಯಾಸ ಕೆಲವರಿಗೆ ಇದ್ದರೆ ಇನ್ನು ಕೆಲವರಿಗೆ ಗ್ರೀನ್ ಟಿ ಯನ್ನು ಕುಡಿಯುವ ಅಭ್ಯಾಸ ಇರುತ್ತದೆ ಇವಕ್ಕೆಲ್ಲ ಅದರದೇ ಆದ ಮಹತ್ವವು ಇದೆ, ಇನ್ನು ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನ ದೇಹದಿಂದ ಹೊರ ಹಾಕಲು ಹಾಗು ನಿಮ್ಮ ದೇಹವನ್ನು ಶುದ್ದಿ ಮಾಡಿ ತೂಕ ಇಳಿಸಲು ನೆರವಾಗುವ ಸೌತೆ ಕಾಯಿಯ ನೀರಿನ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ.

ಮಾಡುವುದು ಹೇಗೆ : ಸಣ್ಣದಾಗಿ ಕತ್ತರಿಸಿದ ಸೌತೆಕಾಯಿ ತುಂಡುಗಳನ್ನು ನೀರಿನಲ್ಲಿ ಅರ್ಧ ಗಂಟೆ ನೆನೆಸಿದರೆ ಆಯಿತು.

ಉತ್ಕರ್ಷಣ ನಿರೋಧಕವನ್ನು ಬಿಡುಗಡೆ ಮಾಡುತ್ತದೆ (antioxidants): ಉತ್ಕರ್ಷಣ ನಿರೋಧಕಗಳು ಫ್ರೀ ರ್ಯಾಡಿಕಲ್ಸ್​ಗಳಿಂದ ಜೀವಕೋಶಗಳು ಹಾಳಾಗುವುದನ್ನು ತಡೆಯುತ್ತದೆ, ಇದರಲ್ಲಿ ವಿಟಮಿನ್​ ಸಿ, ಮ್ಯಾಂಗನೀಸ್​ನಂತಹ ಫ್ಲಾವನೊಡ್​ ಆ್ಯಂಟಿ ಆಕ್ಸಿಡೆಂಟ್​ಗಳಿವೆ.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ: ರಕ್ತದೊತ್ತಡಕ್ಕೆ ಮುಖ್ಯ ಕಾರಣವೆಂದರೆ ಆಹಾರದಲ್ಲಿ ಹೆಚ್ಚಿಗೆ ಉಪ್ಪಿನಾಂಶ ಸೇರುವುದು. ಸವತೆಕಾಯಿಯಲ್ಲಿರುವ ಪೊಟ್ಯಾಶಿಯಮ್​ ಇಲೆಕ್ಟ್ರೊಲೈಟ್​ ತರಹ ಕೆಲಸ ಮಾಡಿ ಸೋಡಿಯಮ್​ ಪ್ರಮಾಣವನ್ನು ನಿಯಂತ್ರಿಸುತ್ತದೆ.

ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ: ತ್ವಚೆಯ ಆರೋಗ್ಯವನ್ನು ಒಳಗಿನಿಂದಲೂ ಹಾಗೆ ಹೊರಗಿನಿಂದ ಕಾಪಾಡಲು ಇದು ಸಹಕಾರಿ, ಇದು ದೇಹದಲ್ಲಿನ ಟಾಕ್ಸಿನ್​ ಅಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್​ ಬಿ5 ಆರೋಗ್ಯಕಾರಿ ವರ್ಣವನ್ನು ನೀಡುತ್ತದೆ.

ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ: ಸೌತೆಕಾಯಿಯಲ್ಲಿ ವಿಟಮಿನ್​ ಕೆ ಅಂಶವಿದೆ. ಇದು ಪ್ರೋಟಿನ್​ ಉತ್ಪತ್ತಿಗೆ ಸಹಾಯ ಮಾಡಿ ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ, ಜೊತೆಗೆ ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸುತ್ತದೆ.

ತೂಕ ಇಳಿಸಲು ಸಹಾಯ ಮಾಡುತ್ತದೆ: ಸೌತೆಕಾಯಿ ನೀರು ದೇಹದ ಚಯಾಪಚನ ಕ್ರಿಯೆಯನ್ನು ಹೆಚ್ಚಿಸಿ ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ. ಜೊತೆಗೆ ದೇಹಕ್ಕೆ ಎನರ್ಜಿಯನ್ನೂ ನೀಡುತ್ತದೆ, ಇದರಿಂದ ಪದೇ ಪದೇ ಜಂಕ್​ಫುಡ್ಸ್​ ತಿನ್ನುವ ಪ್ರಮೇಯ ಬರುವುದಿಲ್ಲ.

ಮೆದುಳಿನ ಆರೋಗ್ಯಕ್ಕೂ ಉತ್ತಮ: ಸೌತೆಕಾಯಿಯಲ್ಲಿರುವ ಫಿಸ್ಟೆನ್​ ಅಂಶ ಮೆದುಳಿನ ಕಾರ್ಯಕ್ಷಮತೆ ಹೆಚ್ಚಲು ಮತ್ತು ನೆನಪಿನ ಶಕ್ತಿ ಉತ್ತಮಗೊಳ್ಳಲು ಸಹಾಯಮಾಡುತ್ತದೆ, ಇದು ಮೆದುಳು ಆರೋಗ್ಯವಾಗಿರಲು ಹಾಗೆ ಯಂಗ್​ ಆಗಿರಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ: ಸೌತೆಕಾಯಿಯಲ್ಲಿ ಡೈಯೆಟರಿ ಫೈಬರ್​ ಅಂಶ ಸಮೃದ್ಧವಾಗಿರುವುದರಿಂದ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಸವತೆಕಾಯಿ ಸಿಪ್ಪೆಯಲ್ಲಿ ಕರಗದ ಫೈಬರ್​ ಅಂಶವಿದೆ ಇದು ಆಹಾರ ಸುಲಭವಾಗಿ ಅನ್ನನಾಳದಲ್ಲಿ ಇಳಿದು ಹೋಗಲು ಸಹಾಯ ಮಾಡುತ್ತದೆ.

LEAVE A REPLY

Please enter your comment!
Please enter your name here