ಬಾಳೆ ಹಣ್ಣನ್ನು ಬಳಸಿ ನೀವು ಹೀಗೆ ಮಾಡಿದರೆ ಬ್ಯೂಟಿ ಪಾರ್ಲರ್ ಗೆ ಹೋಗುವ ಅವಶ್ಯಕತೆಯಿಲ್ಲ, ಇದರಿಂದ ಮುಖ ಬೆಳ್ಳಗಾಗುವುದು ಅಲ್ಲದೆ ಚರ್ಮ ಕಾಂತಿಯುತವಾಗಿ ಮಿಂಚುತ್ತದೆ, ಇತ್ತೀಚಿಗೆ ಬಗೆಬಗೆಯ ಕ್ರೀಂಗಳು ಸೊಪುಗಳು, ಒಂದು ಕಡೆಯಾದರೆ ಬಿಸಿಲಿನ ತೀವ್ರತೆ, ವಾತಾವರಣದ ಧೂಳು ನಮ್ಮ ಆಹಾರ ಪದ್ಧತಿ ಜೀವನಶೈಲಿ ಇತ್ಯಾದಿ ಅನೇಕ ಕಾರಣಗಳಿಂದ ಮುಖದಲ್ಲಿ ಮೊಡವೆಗಳ ಆಗುವುದು ಕಲೆಗಳು ಉಳಿದುಕೊಳ್ಳುವುದು ಬಿಸಿಲಿಗೆ ಚರ್ಮ ಡ್ರೈಯಾಗುವುದು ಈ ತರದ ಸಮಸ್ಯೆಗಳಿಂದ ನಿಮ್ಮ ಮುಖ ಕಪ್ಪಾಗುವುದು, ಇದೆಲ್ಲವನ್ನು ಸಾಮಾನ್ಯವಾಗಿ ನೋಡುತ್ತಲೇ ಇರುತ್ತೇವೆ, ಹೀಗೆ ಕಪ್ಪು ಬಣ್ಣಕ್ಕೆ ತಿರುಗಿದ ಚರ್ಮಕ್ಕ್ ಬಾಳೆಹಣ್ಣು ಬಳಸಿ ಹೇಗೆ ಮತ್ತೆ ಕಾಂತಿಯನ್ನು ಕೊಡಬಹುದು ಎನ್ನುವುದರ ಬಗ್ಗೆ ಇಂದು ಈ ಲೇಖನದಲ್ಲಿ ಮಾಹಿತಿ ನೀಡುತ್ತೇವೆ.
ಈ ಫೇಸ್ ಪ್ಯಾಕ್ ತಯಾರುಮಾಡಲು ನನಗೆ ಅರ್ಧ ಏಲಕ್ಕಿ ಬಾಳೆಣ್ಣು ( ತುಂಬಾ ಹೆಣ್ಣಾಗಿರಬೇಕು) ತೆಗೆದುಕೊಂಡು, ಒಂದು ಬಟ್ಟಲಿನಲ್ಲಿ ಚೆನ್ನಾಗಿ ಸ್ಮ್ಯಾಶ್ ಮಾಡಿಕೊಳ್ಳಿ, ನಂತರ ಅದಕ್ಕೆ ಒಂದು ಚಮಚ ಜೇನು ತುಪ್ಪ ಮತ್ತು ಒಂದು ನಿಂಬೆ ಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ, ಚೆನ್ನಾಗಿ ಮಿಶ್ರವಾದ ಮೇಲೆ ಅದನ್ನು ತಣ್ಣೀರಿನಿಂದ ತೊಳೆದ ನಿಮ್ಮ ಮುಖಕ್ಕೆ ಹಚ್ಚಿ ಮೆಲ್ಲಗೆ ಮಸಾಜ್ ಮಾಡಿ, ನಂತರ 20 ನಿಮಿಷದ ವರೆಗೆ ಹಾಗೆಯೇ ಬಿಡಿ ಇದಾದ ಮೇಲೆ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ ಈ ರೀತಿ ಮಾಡುವುದರಿಂದ, ಕೆಲವೇ ವಾರದಲ್ಲಿ ನಿಮ್ಮ ಮುಖದ ಕಾಂತಿ ಹಿಂತಿರುಗಿ ಬರುತ್ತದೆ.
ಬಾಳೆಹಣ್ಣಿನಲ್ಲಿ ಪೌಷ್ಟಿಕಾಂಶದ ಸಾಗರವೇ ಅಡಗಿದೆ, ಇದು ನಮ್ಮ ಚರ್ಮಕ್ಕೆ ಬೇಕಾಗಿರುವ ಎಲ್ಲ ರೀತಿಯ ಪೋಷಕಾಂಶಗಳನ್ನು ನೀಡುತ್ತದೆ, ಇದರಿಂದ ಮುಖದ ಚರ್ಮ ಮೃದುವಾಗಿ ಕಾಂತಿಯುತವಾಗುತ್ತದೆ, ಜೇನಿನಲ್ಲಿರುವ ಆಂಟಿಆಕ್ಸಿಡೆಂಟ್ ಗಳು ಮುಖದ ಮೇಲಿರುವ ಕಪ್ಪು ಕಲೆಗಳು ಮತ್ತು ಟಾನ್ ಅನ್ನು ತೊಲಗಿಸಿ ಚರ್ಮದ ಸುಕ್ಕನ್ನು ಸರಿ ಮಾಡುತ್ತದೆ, ನಿಂಬೆ ಹಣ್ಣಿನಲ್ಲಿರುವ ವಿಟಮಿನ್ ಗಳು ಚರ್ಮವನ್ನು ತಿಳಿಯಾಗಿಸಿ ಸಮರ್ಥವಾಗಿ ಕೆಲಸ ಮಾಡುತ್ತದೆ ಇವುಗಳ ಮಿಶ್ರಣವಾದ ಈ ಫೇಸ್ ಪ್ಯಾಕ್ ತಯಾರು ಮಾಡಲು ಸುಲಭವಾಗಿದ್ದು ತಪ್ಪದೇ ಒಮ್ಮೆ ಪ್ರಯತ್ನ ಮಾಡಿ.