ಸುಂದರವಾದ ಉದ್ದನೆಯ ಹಾಗೂ ಕಪ್ಪಾದ ಕೇಶರಾಶಿಯನ್ನು ಪಡೆಯಲು ಯಾರಿಗೆ ತಾನೆ ಇಷ್ಟವಾಗುವುದಿಲ್ಲ, ಅದಕ್ಕಾಗಿ ನಾವು ಏನೆಲ್ಲಾ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತೇವೆ, ಆದರೆ ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಸರ್ವೇಸಾಮಾನ್ಯವಾಗಿದೆ, ಬಹುಶಹ ಪ್ರತಿಯೊಬ್ಬರಲ್ಲೂ ಈ ಸಮಸ್ಯೆ ಕಾಣಿಸುತ್ತಿರ ಬಹುದು ಇದಕ್ಕಾಗಿ ಮಾರುಕಟ್ಟೆಯಲ್ಲಿ ಹಲವಾರು ಪ್ರಾಡಕ್ಟ್ಸ್ ಗಳು ದೊರೆಯುತ್ತವೆ, ಆದರೆ ಇವುಗಳೆಲ್ಲವೂ ಸಾಮಾನ್ಯ ಪ್ರಜೆಗಳ ಕೈಗೆಟುಕುವ ಬೆಲೆಯಲ್ಲಿ ಸಿಗುವುದಿಲ್ಲ, ಆದರೆ ನಮ್ಮ ಮನೆಯಲ್ಲಿ ಇರುವ ಕೆಲವು ವಸ್ತುಗಳನ್ನು ಬಳಸಿಕೊಂಡು ಕೂದಲಿನ ಹಲವಾರು ಸಮಸ್ಯೆ ಗಳನ್ನು ನಿವಾರಿಸಿಕೊಳ್ಳಬಹುದು ಅದು ಯಾವುದು ಅದರ ಬಗ್ಗೆ ಇಂದಿನ ಆರ್ಟಿಕಲ್ ನಲ್ಲಿ ನಿಮಗೆ ಮಾಹಿತಿ ನೀಡುತ್ತೇವೆ.
ಇದನ್ನು ತಯಾರಿಸಲು ಮೊದಲಿಗೆ ಒಂದು ಕಪ್ ಕೊಬ್ಬರಿ ಎಣ್ಣೆ ಎರಡು ಚಮಚ ಮೆಂತ್ಯ ಕಾಳು, ಒಂದು ಚಮಚ ಹಸಿ ನೆಲ್ಲಿಕಾಯಿ ಅಥವಾ ಒಣಗಿದ ನೆಲ್ಲಿಕಾಯಿ, ಮೀಡಿಯಂ ಸೈಜ್ 1 ಈರುಳ್ಳಿ, ಮೊದಲಿಗೆ ಈರುಳ್ಳಿಯನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ ಕೊಂಡು ಇಟ್ಟುಕೊಳ್ಳಿ, ಒಲೆಯ ಮೇಲೆ ಒಂದು ಪಾತ್ರೆ ಇಟ್ಟು ಅದರಲ್ಲಿ ಒಂದು ಕಪ್ ಕೊಬ್ಬರಿ ಎಣ್ಣೆ ಹಾಕಿ ಎಣ್ಣೆ ಕಾದ ಮೇಲೆ ಅದಕ್ಕೆ ತುಂಡರಿಸಿ ಇಟ್ಟುಕೊಂಡಿದ್ದ ಈರುಳ್ಳಿಯನ್ನು ಮಿಶ್ರಮಾಡಿ, ಸ್ವಲ್ಪ ಸಮಯದ ನಂತರ ಅದಕ್ಕೆ ನೆಲ್ಲಿಕಾಯಿಯನ್ನು ಮಿಶ್ರಮಾಡಿ, ಇದಾದ ಎರಡು ನಿಮಿಷಕ್ಕೆ ಮೆಂತ್ಯ ಕಾಳನ್ನು ಮಿಶ್ರಮಾಡಿ, 15 ನಿಮಿಷ ಒಲೆಯ ಮೇಲೆ ಕಾಯಲು ಬಿಡಿ, ನಂತರ ಒಲೆ ನಂದಿಸಿ ಎರಡು ಗಂಟೆಗಳವರೆಗೆ ಹಾಗೆ ತಣ್ಣಗಾಗಲು ಬಿಡಿ, ನಂತರ ಈ ಮಿಶ್ರಣವನ್ನು ಸೋಸಿಕೊಳ್ಳಿ.
ಈ ಎಣ್ಣೆಯನ್ನು ವಾರದಲ್ಲಿ ಮೂರು ನಿಮ್ಮ ಕೂದಲಿಗೆ ಹಚ್ಚುತ್ತಾ ಬಂದರೆ ಕೂದಲಿನ ಎಲ್ಲಾ ಸಮಸ್ಯೆಗಳು ಬಹುಬೇಗನೆ ಕಡಿಮೆಯಾಗುವ ಲಕ್ಷಣಗಳು ನಿಮಗೆ ಕಾಣುತ್ತದೆ, ಎಣ್ಣೆಯನ್ನು ತಯಾರಿಸುವ ವಿಧಾನ ವೀಡಿಯೋ ಮೂಲಕ ಕೂಡ ತಿಳಿಸಲಾಗಿತ್ತು ಅದನ್ನು ಈ ಕೆಳಗೆ ನೀಡಲಾಗಿದೆ ಬೇಕೆನಿಸಿದಲ್ಲಿ ದಯವಿಟ್ಟು ಒಮ್ಮೆ ಇದನ್ನು ಸಹ ನೋಡಿ ಹಾಗೂ ನಿಮ್ಮ ಅನಿಸಿಕೆ ಮತ್ತು ಅಬಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.