ನಾವು ಸೇವಿಸುವ ಆಹಾರ ಸಂಪೂರ್ಣವಾಗಿ ಜೀರ್ಣ ವಾಗಬೇಕು, ಆಗ ದೇಹದಲ್ಲಿ ರಕ್ತ ಸಂಚಾರ ಸರಿಯಾದ ಕ್ರಮದಲ್ಲಿ ಆಗಬೇಕು, ಜೀರ್ಣವಾದ ಆಹಾರ ಶಕ್ತಿಯಾಗಿ ಸಂಚಯ ವಾಗುವುದು, ಜೀರ್ಣಕ್ರಿಯೆಯಲ್ಲಿ ತೊಂದರೆಗಳು ಕಂಡು ಬಂದರೆ ಅನಾರೋಗ್ಯ ಉಂಟಾಗುವುದು, ಜನ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಕೆಲವು ಸಲಹೆ ಮತ್ತು ಸೂಚನೆಗಳು.
ಶುಂಠಿ ಮತ್ತು ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು, ಶುಂಠಿಯನ್ನು ತುರಿದು ರಸವನ್ನು ತೆಗೆದುಕೊಳ್ಳಿ, ಅದಕ್ಕೆ ಸಕ್ಕರೆ ಮತ್ತು ಬೇಕಾಗುವಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸಿ, ಶುಂಠಿಯ ಪಾಕವನ್ನು ಬೇಕಾಗುವಷ್ಟು ನೀರಿಗೆ ಸೇರಿಸಿ ಕುಡಿಯುವುದರಿಂದ ಜೀರ್ಣಶಕ್ತಿ ವೃದ್ಧಿಸುವುದು, ಶುಂಠಿ ಹಸಿವನ್ನು ಹೆಚ್ಚಿಸುವುದು, ಹೀಗಾಗಿ ಸಿಂಪಿ ಆರೋಗ್ಯವರ್ಧಕ.
ನಿಂಬೆರಸ ಮತ್ತು ಶುಂಠಿಯ ರಸವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು, ಕರಿಮೆಣಸಿನ ಕಾಳು ಪುಡಿ, ಕರಿ ಉಪ್ಪು ನಂತರ ಸ್ವಲ್ಪ ಅಡುಗೆ ಉಪ್ಪು ಸೇರಿಸಿ ಎಲ್ಲವನ್ನೂ ಶುಭ್ರವಾದ ಒಂದು ಬಟ್ಟಲಿನಲ್ಲಿ ಹಾಕಿಡಿ, ಹೀಗೆ ಒಂದು ವಾರದ ಕಾಲ ಬಾಟಲನ್ನು ಬಿಸಿಲಿನಲ್ಲಿಟ್ಟು ನಂತರ ರಸವನ್ನು ಶೋಧಿಸಿ, ಊಟವಾದ ಮೇಲೆ ಒಂದು ಚಮಚ ರಸವನ್ನು ನೀರಿನ ಜೊತೆ ಬೆರೆಸಿ ಸೇವಿಸಿ, ಆಗ ಜೀರ್ಣ ಶಕ್ತಿ ವೃದ್ಧಿಸುವುದು.
ಜೀರ್ಣಶಕ್ತಿ ಕುಂಠಿತಗೊಳ್ಳಲು ಹೊಟ್ಟೆಯಲ್ಲಿ ಹುಳುಗಳು ಸಹ ಕಾರಣವಾಗಬಹುದು, ಹೊಟ್ಟೆಯಲ್ಲಿ ಹುಳುಗಳು ಇದ್ದರೆ ದಾಳಿಂಬೆ ಗಿಡದ ಕಷಾಯವನ್ನು ಮಾಡಿ ಕುಡಿಯಿರಿ, ಆಗ ಹುಡುಗನ ಕಾಟ ಕಡಿಮೆಯಾಗುತ್ತದೆ.
ಮೂಲಂಗಿ ರಸ ಮತ್ತು ಕ್ಯಾರೆಟ್ ರಸವನ್ನು ಸಮಪ್ರಮಾಣದಲ್ಲಿ ಕುಡಿಯಬೇಕು, ಆಗ ಹೊಟ್ಟೆಯಲ್ಲಿ ಇರುವ ಹುಳುಗಳು ನಾಶವಾಗಿ ಜೀರ್ಣಶಕ್ತಿ ಸಕ್ರಮ ಗೊಳ್ಳುವುದು.
ಸೇಬನ್ನು ಜಜ್ಜಿ ಚೆನ್ನಾಗಿ ಅಗಿದು ತಿಂದರೆ ಹೊಟ್ಟೆಯಲ್ಲಿರುವ ಹುಳುಗಳು ನಾಶವಾಗುತ್ತದೆ.
ಕೆಲವರು ಅತಿಯಾಗಿ ಆಹಾರವನ್ನು ಸೇವಿಸುತ್ತಾರೆ, ಹಾಗೆ ಒಂದೇ ಸಮನೆ ತಿನ್ನುವುದರಿಂದ ಅಜೀರ್ಣ ಉಂಟಾಗುವುದು, ಅಂತಹ ಸಮಯದಲ್ಲಿ ಉಪವಾಸ ಇರುವುದು ತುಂಬಾ ಒಳ್ಳೆಯದು, ಆಗ ನಮ್ಮ ಜೀವನ ಅಂಗಗಳು ಚುರುಕುಗೊಳ್ಳುತ್ತದೆ.
ಬಾಳೆ ಗಿಡದ ಕಾಂಡದ ರಸವನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿ ಹುಳು, ಅಜೀರ್ಣದ ಸಮಸ್ಯೆ ಗಳು ಇದ್ದರೆ ದೂರವಾಗುತ್ತದೆ, ಬಾಳೆ ಗಿಡದ ಕಾಂಡದ ರಸದಲ್ಲಿ ಔಷಧೀಯ ಗುಣಗಳು ಅಧಿಕವಾಗಿದೆ.
ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಆಮ್ಲದಿಂದ ಉಂಟಾಗುವ ರೋಗಗಳನ್ನು ದೂರಮಾಡಲು ಬೂದುಗುಂಬಳಕಾಯಿಯ ರಸ ತುಂಬಾ ಒಳ್ಳೆಯದು, ಬೂದುಕುಂಬಳ ರಸಕ್ಕೆ ಸ್ವಲ್ಪ ನೀರನ್ನು ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಉದರ ರೋಗಗಳು ದೂರವಾಗುತ್ತವೆ.
ಗಮನಿಸಿ : ಹೊಟ್ಟೆಯಲ್ಲಿ ಹುಳುಗಳು ಇದ್ದರೆ ಅಜೀರ್ಣವಾಗುವ ಸಂಭವ ಉಂಟು, ಅಜೀರ್ಣದಿಂದ ದೇಹದಲ್ಲಿ ಆಲಸ್ಯ, ಅಶಕ್ತ ಕತೆ ಉಂಟಾಗುತ್ತದೆ, ಶುಂಠಿ, ಬೆಳ್ಳುಳ್ಳಿ ಮುಂತಾದ ಸಾಂಬಾರು ಪದಾರ್ಥಗಳಲ್ಲಿ ಇರುವ ಔಷಧೀಯ ಗುಣಗಳಿಂದ ಜೀವನ ಶಕ್ತಿಯನ್ನು ಹೆಚ್ಚಿಸಬಹುದು.