ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ರಕ್ತದೊತ್ತಡ ನಿರ್ವಹಿಸಲು ಸಹ ಸಹಾಯ ಮಾಡುತ್ತದೆ. ಸಾಧಾರಣ ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದೊತ್ತಡ ನಿಯಂತ್ರಣ ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತವೆ.
ಅಂಗೈ ಮತ್ತು ಅಂಗಾಲು ಬೆವರುತ್ತಿದ್ದರೆ ಬದನೆಯನ್ನು ಸಣ್ಣಗೆ ಹೆಚ್ಚಿ ನೀರಿಗೆ ಹಾಕಿ, ಸ್ವಲ್ಪ ಸಮಯದ ನಂತರ ಬದನೆಯನ್ನು ತೆಗೆದು ಆ ನೀರಿನಲ್ಲಿ ದಿನವೂ ಕೈ-ಕಾಲುಗಳನ್ನು 30 ನಿಮಿಷಗಳು ಮುಳುಗಿಸಿಡಬೇಕು ಬೆವರು ನಿಲ್ಲುತ್ತದೆ.
ಮೈಯೆಲ್ಲ ವಿಪರೀತ ತುರಿಕೆಯಿಂದ ಕೂಡಿದ್ದರೆ ಬದನೆಯ ಎಲೆಗಳನ್ನು ಅರೆದು ಸಕ್ಕರೆ ಸೇರಿಸಿ ತುರಿಕೆ ಇರುವ ಜಾಗಕ್ಕೆ ಹಚ್ಚಿ ಒಂದು ಗಂಟೆಯ ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ.
ಬದನೆ ಎಲೆಗಳನ್ನು ಕೆಂಡದಲ್ಲಿ ಬಿಸಿ ಮಾಡಿ ಏಟುಬಿದ್ದ ಗಾಯದ ಮೇಲೆ ಕಟ್ಟಿದರೆ ನೋವು ಬೇಗ ಗುಣವಾಗುತ್ತದೆ, ಇದು ಸ್ಮರಣ ಶಕ್ತಿಯನ್ನು ಹೆಚ್ಚಿಸುವ ತರಕಾರಿಯೂ ಹೌದು.
ನೇರಳೆ ಬಣ್ಣದ ಬದನೆಯನ್ನು ಬೇಯಿಸಿ, ಸ್ವಲ್ಪ ಬೆಲ್ಲ ಸೇರಿಸಿ ಬೆಳಿಗ್ಗೆ ಸೇವಿಸುತ್ತಾ ಬಂದರೆ ಮೂಲವ್ಯಾಧಿ ಕಡಿಮೆಯಾಗುತ್ತದೆ, ಎಳೆಯ ಬದನೆಯನ್ನು ಹಸುವಿನ ತುಪ್ಪದಲ್ಲಿ ಹುರಿದು ಸೇವಿಸಿದರೆ ಕಣ್ಣಿನ ತೊಂದರೆ ದೂರವಾಗಿ ದೃಷ್ಟಿ ಸಾಮರ್ಥ್ಯ ಹೆಚ್ಚಿಸುತ್ತದೆ.
ಇದರ ನಿಯಮಿತ ಸೇವನೆಯಿಂದ ದೇಹದಲ್ಲಿರುವ ಹೆಚ್ಚುವರಿ ಕಬ್ಬಿಣದ ಅಂಶ ಹೊರಟುಹೋಗುತ್ತದೆ, ಇದು ಪಾಲಿಸಿಥಿಮಿಯಾ ರೋಗಿಗಳಿಗೆ ಹೆಚ್ಚು ಉಪಯುಕ್ತ, ಬದನೆಯಲ್ಲಿರುವ ನಸುಯೈನ್ ಎಂಬ ಒಂದು ಸಂಯುಕ್ತ ಪ್ರಸ್ತುತ ದೇಹದ ಅತಿಯಾದ ಕಬ್ಬಿಣದ ಅಂಶವನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ.
ಬದನೆಯಲ್ಲಿ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ವಿಟಮಿನ್ ಸಿ ಅಂಶ ಅಧಿಕ ಪ್ರಮಾಣದಲ್ಲಿದೆ, ಬದನೆ ರೋಗ ನಿರೋಧಕ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ.
ತ್ವಚೆಯ ಹೊಳಪಿಗೆ ಅತ್ಯಗತ್ಯವಾಗಿರುವ ಖನಿಜಗಳು, ಜೀವಸತ್ವಗಳು ಮತ್ತು ನಾರಿನಾಂಶ ಬದನೆಯಲ್ಲಿದೆ. ಇದರಿಂದ ತ್ವಚೆಯನ್ನು ಬಲವಾಗಿ ಹಾಗೂ ವಯಸ್ಸಿನ ಕಳೆಯನ್ನು ತೆಗೆಯಲು ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸಬಹುದು.
ಬದನೆಯಲ್ಲಿರುವ ಕೆಲವು ಕಿಣ್ವಗಳು ಕೂದಲಿನ ರಕ್ಷಕರಂತೆ ಕೆಲಸ ಮಾಡಿ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಕೂದಲಿನ ಆರೋಗ್ಯಕರ ವಿನ್ಯಾಸ ನಿರ್ವಹಿಸಲು ಸಹಾಯಕವಾಗಿದೆ.
ಬದನೆಯಲ್ಲಿ ನೀರನ ಅಂಶ ಅಧಿಕವಾಗಿದೆ, ಇದು ತ್ವಚೆಯನ್ನು ಅಗತ್ಯದಷ್ಟು ತೇವಾಂಶಯುಕ್ತವಾಗಿಡಲು ಸಹಾಯ ಮಾಡುತ್ತದೆ, ಇದರಿಂದಾಗಿ ಶುಷ್ಕ ತ್ವಚೆಯಿಂದ ಮುಕ್ತಿ ಹೊಂದಬಹುದು ಮತ್ತು ನಿಮ್ಮ ದೇಹದ ಸಹವರ್ತಿಯಂತೆ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.