ಕೆಲವು ವರ್ಷಗಳಿಂದ ಸದ್ಗುರುಗಳು ದೇಶದ ಎಲ್ಲೆಡೆ ಯೂಥ್ ಅಂಡ್ ಟ್ರುಥ್ ಎಂಬ ನೀರ ಸಂವಾದ ಕಾರ್ಯಕ್ರಮ ನೆಡೆಸಿಕೊಂಡು ಬಂದಿದ್ದಾರೆ ಹಾಗು ಬಾಗಶಃ ಯಶಸ್ಸನ್ನು ಸಹ ಪಡೆದಿದೆ, ದೇಶದ ಹಲವು ರಾಜ್ಯಗಳ ಕಾಲೇಜು ವಿದ್ಯಾರ್ಥಿಗಳ ಜೊತೆ ಈ ನೇರ ಸಂವಾದ ನೆಡೆಯಲಿದ್ದು ಸದ್ಗುರು ನೇರವಾಗಿ ವಿದ್ಯಾಥಿಗಳ ಪ್ರೆಶ್ನೆಗೆ ಉತ್ತರ ನೀಡುತ್ತಾರೆ, ಈ ರೀತಿಯ ಕಾರ್ಯಕ್ರಮದಲ್ಲಿ ಒಂದು ದಿನ ಹೆಣ್ಣುಮಗಳೊಬ್ಬಳು ಸದ್ಗುರು ಬಳಿ ಗಂಡಸರು ಅನೇಕ ಮಹಿಳೆಯರ ಜೊತೆ ಸಂಬಂಧ ಇಟ್ಟುಕೊಳ್ಳುವಾಗ ಮಹಿಳೆಯರು ಸಹ ಈ ರೀತಿ ಹಲವು ಪುರುಷರೊಂದಿ ಯಾಕೆ ಸಂಬಂಧ ಇಟ್ಟುಕೊಳ್ಳಬಾರದು ಹಾಗು ಇದನ್ನು ಸಮಾಜದಲ್ಲಿ ಪರಸ್ಪರ ಸಮ್ಮತಿಯೊಂದಿಗೆ ಮಾಡಬಹುದಲ್ವಾ ಎಂಬ ನೇರ ಪ್ರೆಶ್ನೆಯನ್ನು ಕೇಳಿದಳು, ಇದಕ್ಕೆ ಸದ್ಗುರು ಉತ್ತರವನ್ನು ನೀಡಿದ್ದು ಅದರ ವಿಡಿಯೋ ಈ ಕೆಳಗೆ ನೀಡಲಾಗಿದೆ ನೀವು ಸಹ ಒಮ್ಮೆ ಸಂಪೂರ್ಣವಾಗಿ ನೋಡಿ ನಂತರ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಇದರ ಬಗ್ಗೆ ಚರ್ಚೆ ಮಾಡೋಣ.
ಈ ರೀತಿಯ ಹೆಚ್ಚಿನ ಮಾಹಿತಿ ಅಪ್ಡೇಟ್ ಗಾಗಿ ಮರೆಯದೆ ನಮ್ಮ ಪೇಜ್ ಲೈಕ್ ಮಾಡಿ ಹಾಗು ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ.
ಸದ್ಗುರು ಕಿರು ಪರಿಚಯ : ಜಗ್ಗಿ ವಾಸುದೇವ್‌ರವರು (ಸದ್ಗುರು)(ಜನನ ೩ ಸೆಪ್ಟೆಂಬರ್ ೧೯೫೭) ಒಬ್ಬ ಭಾರತೀಯ ಯೋಗಿ ಮತ್ತು ಅನುಭವಿ ಅಲ್ಲದೆ ಲೇಖಕರೂ ಆಗಿದ್ದಾರೆ. ಇವರು ಸ್ಥಾಪಿಸಿರುವ ’ಈಶ ಪ್ರತಿಷ್ಠಾನ’ ಸೇವಾಸಂಸ್ಥೆಯು ಲಾಭರಹಿತ ಹಾಗು ಜಾತ್ಯಾತೀತವಾಗಿದ್ದು, ಇದು ಭಾರತ, ಅಮೆರಿಕ, ಇಂಗ್ಲೆಂಡ್, ಲೆಬನಾನ್, ಸಿಂಗಪೂರ್, ಕೆನಡ, ಮಲೇಶಿಯ, ಉಗಾಂಡಾ, ಆಸ್ಟ್ರೇಲಿಯ ಮುಂತಾದ ದೇಶಗಳಲ್ಲಿ ಯೋಗಾಭ್ಯಾಸದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದೆ. ಈಶ ಪ್ರತಿಷ್ಠಾನವು ಅನೇಕ ಸಮಾಜೋದ್ಧಾರಕ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಂಡಿದೆ. ಇದರಿಂದಾಗಿ, ವಿಶ್ವಸಂಸ್ಥೆಯು ತನ್ನ ’ಎಕನಾಮಿ ಆಂಡ್ ಸೋಶಿಯಲ್ ಕೌನ್ಸಿಲ್’(ಆರ್ಥಿಕ ಮತ್ತು ಸಾಮಾಜಿಕ ಮಂಡಲಿ)ನಲ್ಲಿ ಈಶ ಪ್ರತಿಷ್ಠಾನಕ್ಕೆ ವಿಶೇಷ ಸಲಹೆಗಾರ ಸ್ಥಾನವನ್ನು ನೀಡಿದೆ.ಅವರು ಬರೆದಿರುವ ಪುಸ್ತಕಗಳು “ಆರೋಗ್ಯ”,”ಧರ್ಮ, ಆಧ್ಯಾತ್ಮಿಕತೆ ಮತ್ತು ನಂಬಿಕೆ”, “ಸಲಹೆ” ಮತ್ತು ಇತರೆ ಮುಂತಾದ ಅನೇಕ ವಿಭಾಗಗಳಲ್ಲಿ ದಿ ನ್ಯೂಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.