ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ಥಳದ ಬಗ್ಗೆ ನೀವು ತಿಳಿಯಲೇ ಬೇಕಾದ ವಿಷಯ..

0
1807

ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ, ಸರಿ ಸುಮಾರು ಏಳುನೂರು ವರ್ಷಗಳಿಂದ ನೇತ್ರಾವತಿ ದಡದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದೇವಾಲಯವಿದೆ, ಹಾಗೂ ಶ್ರವಣ ಬೆಳಗೊಳ ದಂತೆ ಬಾಹುಬಲಿಯ ಪ್ರತಿಭೆಯು ಕೂಡ ಇದೆ, ಸುಮಾರು ಏಳುನೂರು ವರ್ಷಗಳ ಹಿಂದೆ ಮಂಗಳೂರಿನ ಕದ್ರಿ ಎಂಬಲ್ಲಿಂದ ತಂದು ಉಡುಪಿಯ ಯತಿಗಳಾದ ಶ್ರೀ ವಾದಿರಾಜರು ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ದ್ದಾರೆ ಎಂಬ ಪ್ರತೀತಿ ಇದೆ.

ಇಂತಹ ಇತಿಹಾಸವಿರುವ ದೈವಿಕ ಸ್ಥಳದಲ್ಲಿ ಸಾಮಾಜಿಕ ಸೇವೆಗಳು ಸಹ ನಡೆಯುತ್ತಿದೆ, ಧರ್ಮಸ್ಥಳದ ಆಡಳಿತ ವರ್ಗದ ಉಸ್ತುವಾರಿಯನ್ನು ವಹಿಸಿಕೊಂಡಿರುವ ಹೆಗಡೆಯವರು ಬಹಳ ಸೊಗಸಾಗಿ ನಡೆಸಿಕೊಂಡು ಬರುತ್ತಿದ್ದಾರೆ, ಅದರಂತೆಯೇ ಧರ್ಮಸ್ಥಳಕ್ಕೆ ಭೇಟಿ ನೀಡಿದ ಪ್ರತಿಯೊಬ್ಬರಿಗೂ ಅನ್ನದಾನದ ಬಗ್ಗೆ ತಿಳಿದೇ ಇರುತ್ತದೆ ಆದರೆ ಅದರ ಜೊತೆಗೆ ಧರ್ಮಸ್ಥಳ ಇನ್ನೂ ಅನೇಕ ಸೇವೆಗಳನ್ನು ಮಾಡುತ್ತಿದ್ದು ಅದರ ಬಗ್ಗೆ ತಿಳಿಯೋಣ.

ಸಾಮೂಹಿಕ ವಿವಾಹ : ೧೯೭೨ ರಿಂದ ಇಂದಿನವರೆಗೆ ಸತತವಾಗಿ ಸಮಾಜದಲ್ಲಿ ವರದಕ್ಷಿಣೆ ಪಿಡುಗು ಮತ್ತು ಆಡಂಬರದ ಮದುವೆಯ ಸುಧಾರಣೆಗೋಸ್ಕರ ಸಾಮೂಹಿಕ ವಿವಾಹಗಳನ್ನು ನಡೆಸಲಾಗುತ್ತಿದೆ.

ಅನ್ನದಾನ : ಧರ್ಮಸ್ಥಳಕ್ಕೆ ಆಗಮಿಸುವ ಸರಾಸರಿ ೧೦,೦೦೦ ಭಕ್ತಾದಿಗಳಿಗೆ ಉಚಿತ ಭೋಜನದ ವ್ಯವಸ್ಥ ಮಾಡಲಾಗಿದೆ.ಇದಕ್ಕಾಗಿ ಸುಸಜ್ಜಿತ ವ್ಯವಸ್ಥೆಗಳನ್ನು ಒಳಗೊಂಡ ಅನ್ನಪೂರ್ಣ ಎಂಬ ಹೆಸರಿನ ಅನ್ನದಾನ ಛತ್ರವಿದೆ.

ವಿದ್ಯಾದಾನ : ಧರ್ಮಸ್ಥಳ ದೇವಳದ ವತಿಯಿಂದ ಶ್ರೀ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಪ್ರಾಥಮಿಕ ಶಾಲೆಯಿಂದ ಪ್ರಾರಂಬಿಸಿ ಉನ್ನತ ಶಿಕ್ಷಣವನ್ನು ನೀಡುವ ಸುಮಾರು ೫೦ಕ್ಕಿಂತಲೂ ಹೆಚ್ಚು ಸಂಸ್ಥೆಗಳನ್ನು ನಡೆಸಲಾಗುತ್ತಿದೆ, ಈ ಸಂಸ್ಥೆಗಳು ಸಮೀಪದ ಉಜಿರೆಯಲ್ಲಿ ಅಲ್ಲದೆ ಧಾರವಾಡ, ಮೈಸೂರು, ಮಂಗಳೂರು, ಹಾಸನ, ಉಡುಪಿ ಮುಂತಾದೆಡೆ ಹರಡಿಕೊಂಡಿವೆ.

ಔಷಧದಾನ : ಬಡ ಹಳ್ಳಿಯ ಜನರ ಅನುಕೂಲಕ್ಕೆ ಸಂಚಾರಿ ಆಸ್ಪತ್ರೆ,ಪ್ರಕೃತಿ ಚಿಕಿತ್ಸೆಯನ್ನು ನೀಡುವ ಶಾಂತಿವನ ನ್ಯಾಚುರೋಪತಿ ಆಸ್ಪತ್ರೆ, ಆಯುರ್ವೇದ ಚಿಕಿತ್ಸೆಗಾಗಿ ಉಡುಪಿ ಮತ್ತು ಹಾಸನದಲ್ಲಿ ಸುಸಜ್ಜಿತ ಆಸ್ಪತ್ರೆಗಳು ಮತ್ತು ಅಲೋಪತಿ ಔಷಧ ಪದ್ಧತಿಯಲ್ಲಿ ಚಿಕಿತ್ಸೆಗಾಗಿ ಧಾರವಾಡ ಮತ್ತು ಉಜಿರೆಗಳಲ್ಲಿ ಆಸ್ಪತ್ರೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

LEAVE A REPLY

Please enter your comment!
Please enter your name here