ಬೇಸಿಗೆ ಚರ್ಮಕ್ಕೆ ಸಂಬಂಧಪಟ್ಟ ಹಲವು ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿ ಬಿಡುತ್ತದೆ ಅದರಲ್ಲೂ ಬೇಸಿಗೆಯಲ್ಲಿ ಗಂಡಸರಿಗೆ ಗುಪ್ತಾಂಗಗಳಲ್ಲಿ ನ ತುರಿಕೆ ಸಮಸ್ಯೆಯು ಬಹಳಷ್ಟು ಹಾನಿಯನ್ನು ಸಹ ಉಂಟು ಮಾಡುತ್ತವೆ, ಸುಡು ಬಿಸಿಲಿಗೆ ದೇಹದ ಚರ್ಮ ಬೆವರಿನಿಂದ ನೆಂದು ಹೋಗಿರುತ್ತದೆ ಇದರಿಂದ ಹೆಂಗಸರಿಗೆ ಒಂದು ರೀತಿಯ ಸಮಸ್ಯೆ ಆದರೆ ಗಂಡಸರಿಗೆ ಮತ್ತೊಂದು ರೀತಿಯ ಸಮಸ್ಯೆ, ಸಾರ್ವಜನಿಕ ಸ್ಥಳಗಳಲ್ಲಿ ತುರಿಕೆ ಶುರುವಾದರೆ ಎಲ್ಲಿಲ್ಲದ ಮುಜುಗರ ಮತ್ತು ಸಂಕಟವೂ ಶುರುವಾಗುತ್ತದೆ ಅಂತಹ ಗುಪ್ತಾಂಗ ತುರಿಕೆ ಸಮಸ್ಯೆಗಳಿಗೆ ಇಂದು ಅತ್ಯುತ್ತಮ ಮಾಹಿತಿಯನ್ನು ನೀಡುತ್ತಿದ್ದೇವೆ.
ತುರಿಕೆಗೆ ಮುಖ್ಯ ಕಾರಣ : ತುರಿಕೆಗೆ ಮುಖ್ಯ ಕಾರಣ ಚರ್ಮದ ಮೇಲೆ ಉಂಟಾಗುವ ಫಂಗಸ್, ಇನ್ನು ನಿಮ್ಮ ಗುಪ್ತಾಂಗಗಳ ನಡುವಲ್ಲಿ ಬೆಳೆಯಲು ಉತ್ತಮ ಸ್ಥಳವೆಂದರೆ ತಪ್ಪಾಗುವುದಿಲ್ಲ, ವ್ಯಾಯಾಮ ಮಾಡಿದಾಗ ಅಥವಾ ಕಷ್ಟಪಟ್ಟು ನೀವು ಕೆಲಸ ಮಾಡಿದಾಗ ನಿಮ್ಮ ಚರ್ಮದ ಗ್ರಂಥಗಳ ಮೂಲಕ ಹೊರ ಹಾಕುವ ಬೆವರು ಮತ್ತು ಕೀಟಾಣುಗಳಿಗೆ ಹೊರಹೋಗುವ ಜಾಗವೇ ಇರುವುದಿಲ್ಲ ಅಷ್ಟರ ಪ್ರಮಾಣದಲ್ಲಿ ಈ ಫಂಗಸ್ ಗಳು ಇರುತ್ತವೆ.
ನಿಮಗೇನಾದರೂ ಸಕ್ಕರೆ ಕಾಯಿಲೆ ಇದ್ದರೆ ಇನ್ನು ಕಷ್ಟವಾಗಿಬಿಡುತ್ತದೆ ಕಾರಣ ಸಕ್ಕರೆ ಕಾಯಿಲೆ ಇದ್ದವರಿಗೆ ಬೆವರಿನಲ್ಲಿ ಸಹ ಸಕ್ಕರೆ ಅಂಶ ಹೊರ ಬರುವುದರಿಂದ ಫಂಗಸ್ ಬೆಳಿಗ್ಗೆ ಉತ್ತಮ ಆಹಾರ ವಾಗಿ ಬಿಡುತ್ತದೆ.
ತುರಿಕೆಯನ್ನು ನಿಭಾಯಿಸುವುದು ಹೇಗೆ : ಪುಣ್ಯವೆಂದು ಕೊಳ್ಳಬಹುದು ಕಾರಣ ಈ ಸಮಸ್ಯೆಗಳಿಗೆ ನೇರವಾದ ಪರಿಹಾರಗಳು ಇದೆ, ಮೆಡಿಕಲ್ ಸ್ಟೋರ್ನಲ್ಲಿ ಸಿಗುವ ಉತ್ಪನ್ನಗಳನ್ನು ಬಳಸಬಹುದು ಒಂದು ವೇಳೆ ನಿಮಗೆ ಆ ಜಾಗದಲ್ಲಿ ತುರಿಕೆ ಮತ್ತು ಕೆಂಪಾಗುವಿಕೆ ಕಂಡುಬಂದರೆ ಸೇರಿಕೊಳ್ಳುವ ಜಿಂಕ್ ಆಕ್ಸಿದೆ ಪೌಡರ್ ಅನ್ನು ಬಳಸಿ.
ಪೌಡರ್ ಗಳು ನಿಮಗೆ ಅಷ್ಟು ಕೆಲಸ ಮಾಡುತ್ತಿಲ್ಲ ಅಂತ ಅನಿಸಿದರೆ ನೀವು ಆಂಟಿ ಫಂಗಲ್ ಕ್ರೀಂ ಅನ್ನು ಬಳಸಬಹುದು ನಿಮ್ಮ ಹತ್ತಿರದ ಮೆಡಿಕಲ್ ಸ್ಟೋರ್ ಗಳಲ್ಲಿ ಇವು ದೊರೆಯುತ್ತವೆ ಅದರ ಮೇಲೆ ಪೌಡರ್ ಹಚ್ಚುವುದು ಒಳ್ಳೆಯದು, ಏನೇ ಮಾಡಿದರೂ ತುರಿಕೆ ಹಾಗೂ ಕೆಂಪಾಗುವಿಕೆ ಕಡಿಮೆಯಾಗುತ್ತಿಲ್ಲ ವೆಂದರೆ ತಕ್ಷಣ ನೀವು ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.