ಚರ್ಮ ನಮ್ಮ ದೇಹದ ಹೊರ ರಕ್ಷಣೆಯನ್ನು ಮಾಡುತ್ತಿದೆ ಯಾವುದೇ ಕ್ರಿಮಿಕೀಟಗಳು ಮತ್ತು ಬ್ಯಾಕ್ಟೀರಿಯಗಳು ದೇಹದ ಒಳಗಡೆ ಹೋಗದಂತೆ ತಡೆಯುತ್ತದೆ ಮತ್ತು ಸುದೀರ್ಘವಾಗಿ ನಮಗೆ ಯಾವುದೇ ಕಾಯಿಲೆ ಬರದಂತೆ ಬೇಲಿ ಅಂತೆ ಹುಟ್ಟಿನಿಂದ ಸಾಯುವವರೆಗೂ ನಮ್ಮ ದೇಹದ ಅಂಗಾಂಶಗಳನ್ನು ಕಾಯುತ್ತಿರುತ್ತದೆ ಚರ್ಮ ನಮ್ಮ ದೇಹದ ಹೊರ ಪದರವನ್ನು ಆವರಿಸಿದೆ ಇಲ್ಲದಿದ್ದರೆ ನಮಗೆ ಕಾಯಿಲೆಗಳು ಬಂದು ಸಾವಿಗೆ ತುತ್ತಾಗುತ್ತಿದ್ದೇವು.
ಇನ್ನು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಚರ್ಮದ ಸಮತೋಲನವನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ ಏಕೆಂದರೆ ಚರ್ಮ ಸರಿಯಾದ ರೀತಿಯಲ್ಲಿ ಕೆಲಸ ಮಾಡದಿದ್ದರೆ ನಾವು ಬೇರೆ ಬೇರೆ ರೀತಿಯ ಕಾಯಿಲೆಗಳಿಗೆ ತುತ್ ಆಗುವುದರಲ್ಲಿ ಎರಡು ಮಾತೇ ಇಲ್ಲ ಚರ್ಮ ಬರೀ ಹೊರ ಪದರದಂತೆ ಕೆಲಸ ಮಾಡುವುದಲ್ಲದೇ ನಾವು ಸುಂದರವಾಗಿ ಕಾಣಲು ಅದರ ಉಪಯೋಗ ಬಹಳ ಅವಶ್ಯಕ ನಮಗೆ ಚರ್ಮವೇ ಇಲ್ಲದಿದ್ದರೆ ಹೇಗೆ ಇರುತ್ತಿದ್ದೆವು ಎಂದು ಉಹೀಸಿಕೊಳ್ಳಲು ಸಾಧ್ಯವಿಲ್ಲ.
ಇನ್ನು ಚರ್ಮವನ್ನು ಆರೋಗ್ಯವಾಗಿ ನೋಡಿಕೊಳ್ಳಲು ಸರಳವಾದ ನಿಯಮಗಳನ್ನು ಅನುಸರಿಸಿದರೆ ಸಾಕು ಇದು ಸರಿಯಾದ ಆಹಾರಕ್ರಮ ಸುದ್ದಿ ಕರಣ ಮತ್ತು ತೇವಾಂಶವನ್ನು ನೋಡಿ ಕೊಳ್ಳುವುದರಿಂದ ಸಾಧ್ಯವಾಗುತ್ತದೆ, ಅಷ್ಟಕ್ಕೂ ಸರಿಯಾದ ಆಹಾರ ಕ್ರಮ ಎಂದರೆ ಏನು ಎಂದು ನೀವು ಕೇಳಬಹುದು ಹೌದು ಸರಿಯಾದ ಆಹಾರ ಕ್ರಮವೆಂದರೆ ಸಮತೋಲನ ಆಹಾರವನ್ನು ಸೇವಿಸುವುದು ಒಣ ಬೀಜಗಳು ಆಂಟಿ ಆಕ್ಸಿಡೆಂಟ್ ನಲ್ಲಿ ಸಮೃದ್ಧವಾಗಿರುತ್ತವೆ ಬೀಜವನ್ನು ತಿನ್ನುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಇನ್ನು ವಿಟಮಿನ್ ಸಿ, ವಿಟಮಿನ್ ಸಿ ಎನ್ನುವುದು ಹೇರಳವಾಗಿ ದ್ರಾಕ್ಷಿ ನಿಂಬೆಹಣ್ಣು ಮೋಸಂಬಿ ಕಿತ್ತಳೆಯನ್ನು ಮತ್ತು ಕಲ್ಲಂಗಡಿ ಹಣ್ಣು ಗಳಲ್ಲಿ ಹೆಚ್ಚಾಗಿರುತ್ತದೆ ಮತ್ತು ಮೀನಿನ ಎಣ್ಣೆ ಸಮುದ್ರದಲ್ಲಿ ಸಿಗುವ ಆಹಾರ ಪದಾರ್ಥಗಳು ಇಂತಹ ಆಹಾರಗಳನ್ನು ತಿನ್ನುವುದರಿಂದ ಚರ್ಮದ ಆರೋಗ್ಯ ಸಮೃದ್ಧವಾಗಿರುತ್ತದೆ ಇದರಿಂದ ಚರ್ಮಕ್ಕೆ ಸಂಬಂಧಪಟ್ಟ ಯಾವುದೇ ಕಾಯಿಲೆಗಳು ಬರುವುದಿಲ್ಲ.
ಇನ್ನು ನೀವು ಬಳಸುವ ಸಾಬೂನಿನಲ್ಲಿ ಸೋಡಿಯಂ ಇರುವುದರಿಂದ ಸಾಬೂನನ್ನು ಮುಖಕ್ಕೆ ಬಳಸುವುದು ಮತ್ತು ದೇಹದ ಯಾವುದೇ ಭಾಗಕ್ಕೆ ಬಳಸುವುದು ಉತ್ತಮ ಅಲ್ಲ ಆದ್ದರಿಂದ ಪೊಟ್ಯಾಶಿಯಂ ಬಳಸಿರುವ ಸಾಬೂನು ಅಥವಾ ಮೃದುವಾದ ಫೇಸ್ ವಾಸ್ ಗಳನ್ನು ಉಪಯೋಗಿಸುವುದು ಬಹಳ ಉತ್ತಮ ಮತ್ತು ಸೂರ್ಯನಿಗೆ ಒಡ್ಡುವುದರಿಂದ ಚರ್ಮ ಕಪ್ಪಾಗುತ್ತದೆ ಆದ್ದರಿಂದ ಹೊರಗೆ ಹೋಗುವ ಮುನ್ನ ಸನ್ ಸ್ಕ್ರೀನನ್ನು ಉಪಯೋಗಿಸುವುದು ಉತ್ತಮ ಅಭ್ಯಾಸ ಸನ್ ಸ್ಕ್ರೀನ್ ಎಸ್ ಪೀ ಎಫ್ 50 ರ ಮೇಲಿದ್ದರೆ ಉತ್ತಮ.
ಪ್ರತಿದಿನ ಎರಡರಿಂದ ಮೂರು ಬಾರಿ ಮುಖ ತೊಳೆದು ಕೊಳ್ಳುವುದು ಮತ್ತು ಪ್ರತಿದಿನ ಸ್ನಾನ ಮಾಡುವುದು ಹೊಸ ಬಟ್ಟೆಯನ್ನು ದರಿಸುವುದು ಮತ್ತು ಸರಿ ಸುಮಾರು ಏಳರಿಂದ 8 ಗ್ಲಾಸ್ ನೀರು ಕುಡಿಯುವುದು ಉತ್ತಮ ಅಭ್ಯಾಸ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.