ನಟಿ ಊರ್ವಶಿ ಇಬ್ಬರು ಗಂಡಂದಿರನ್ನು ನೋಡಿದ್ದೀರಾ? ದೊಡ್ಡ ಸ್ಟಾರ್ ನಟ

    0
    1820

    ಶ್ರಾವಣ ಬಂತು ಚಿತ್ರದಲ್ಲಿ ನಮ್ಮ ಅಣ್ಣಾವ್ರು ಡಾಕ್ಟರ್ ರಾಜಕುಮಾರ್ ಅವರ ಜೊತೆಯಲ್ಲಿ ನಾಯಕ ನಟಿಯಾಗಿ ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ ನಟನೆ ಮಾಡಿದ ನಟಿ ಉರ್ವಶಿ, 1980 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ 1984 ರಲ್ಲಿ ತೆರೆಕಂಡ ಶ್ರಾವಣ ಬಂತು ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಚಿಗುರಿ ಕೊಂಡರು, ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ನಾನು ನನ್ನ ಹೆಂಡತಿ ಚಿತ್ರದಲ್ಲಿ ತುಂಬಾ ಚೂಟಿಯಾದ ಹಾಗೂ ನಟಿಯಾಗಿದ್ದ ನಾಯಕಿಯ ಪಾತ್ರದಲ್ಲಿ ಜೀವತುಂಬಿ ನಟಿಸಿ ಕನ್ನಡ ಪ್ರೇಕ್ಷಕರು ಹಾಗೂ ಕನ್ನಡ ಸಿನಿಮಾ ರಂಗದಿಂದ ಪ್ರಶಂಸೆ ಪಡೆದುಕೊಂಡರು.

    ಮುದ್ದಾಗಿ, ದುಂಡಾಗಿ ಇದ್ದ ಊರ್ವಶಿ ಯವರನ್ನು ಅಂದಿನ ಸಿನಿಮಾ ಪ್ರೇಕ್ಷಕರು ತುಂಬಾ ಇಷ್ಟಪಟ್ಟರು, ಜನವರಿ 25 1967 ರಂದು ಕೇರಳದ ತಿರುವಂತಪುರಂ ನಲ್ಲಿ ಊರ್ವಶಿ ಜನಿಸಿದರು ಕೇವಲ ಹತ್ತನೇ ವಯಸ್ಸಿಗೆ ಮಳೆಯಾಳಿ ಸಿನಿಮಾಗಳಲ್ಲಿ ನಟನೆ ಮಾಡಲು ಶುರು ಮಾಡಿದರು, 1980ರಲ್ಲಿ ಮಲಯಾಳಿ ಚಿತ್ರದ ಮೂಲಕ ಪರಿಪೂರ್ಣ ನಾಯಕ ನಟಿಯಾಗಿ ಅಭಿನಯಿಸಿದರು, ಕನ್ನಡದಲ್ಲಿ ನಾಯಕಿಯಾಗಿ ಮತ್ತು ಪೋಷಕ ನಟಿಯ ಪಾತ್ರದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮಲಯಾಳಂ, ತೆಲುಗು ಕನ್ನಡ ಸೇರಿದಂತೆ ಸುಮಾರು ಮುನ್ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ, ಇನ್ನು ಕನ್ನಡದಲ್ಲಿ ಹಬ್ಬ, ಕೋತಿಗಳು ಸಾರ್ ಕೋತಿಗಳು, ಕತ್ತೆಗಳು ಸಾರ್ ಕತ್ತೆಗಳು, ಯಾರಿಗೆ ಸಾಲುತ್ತೆ ಸಂಬಳ, ರಾಮ ಶಾಮ ಭಾಮ ಚಿತ್ರಗಳಲ್ಲಿನ ಕಾಮಿಡಿ ನಟನೆಗೆ ಎಷ್ಟುಬಾರಿ ಚಪ್ಪಾಳೆ ತಟ್ಟಿದರು ಸಾಲದು.

    ಕಾಮಿಡಿ ನಾಯಕ ನಟಿಯಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಜನರನ್ನು ನಕ್ಕು ನಗಿಸುವ ನಟಿ ಎಂದು ಒಬ್ಬರು ಇದ್ದರೆ ಅದು ನಟಿ ಊರ್ವಶಿ ಮಾತ್ರ, ತಾನು ನಟಿಸಿದ ಹಲವಾರು ಕನ್ನಡ ಚಿತ್ರಗಳಲ್ಲಿ ಕಾಮಿಡಿ ಕಮಾಲ್ ಮಾಡಿದ್ದಾರೆ ನಟಿ ಉರ್ವಶಿ, 2000 ರಲ್ಲಿ ಮನೋಜ್ ಎಂಬುವ ಮಲಯಾಳಿ ನಟರನ್ನು ಮದುವೆಯಾದರು, ಈ ದಂಪತಿಗೆ ಗೀತಲಕ್ಷ್ಮಿ ಎಂಬ ಮಗಳು ಹುಟ್ಟಿದರು, ನಂತರ ಮನೋಜ್ ಅವರಿಗೆ 2008ರಲ್ಲಿ ವಿಚ್ಛೇದನ ನೀಡಿದ್ದರು ನಟಿ ಊರ್ವಶಿ, ಮತ್ತೆ 2016ರಲ್ಲಿ ಚೆನ್ನೈ ಉದ್ಯಮಿ ಶಿವಪ್ರಸಾದ್ ಅವರನ್ನು ಮದುವೆಯಾದರು ತಮ್ಮ ಎರಡನೇ ಪತಿಯಿಂದ ಊರ್ವಶಿ ಅವರಿಗೆ ಗಂಡು ಮಗು ಜನಿಸಿತು, ಊರ್ವಶಿ ಅವರಿಗೆ ಹಲವಾರು ರಾಷ್ಟ್ರಪ್ರಶಸ್ತಿಗಳು ಹಾಗೂ ರಾಜ್ಯ ಪ್ರಶಸ್ತಿಗಳು ದೊರಕಿವೆ ಊರ್ವಶಿ ಅವರ ಅಭಿನಯಿಸಿದ ನಿಮಗೆ ಇಷ್ಟವಾದ ಸಿನಿಮಾ ಯಾವುದು ಎಂದು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

    LEAVE A REPLY

    Please enter your comment!
    Please enter your name here