ಒಂದು ದಿನಕ್ಕೆ ಮನುಷ್ಯ ಮೂರು ಬಾರಿ ಸಾಮಾನ್ಯವಾಗಿ ಆಹಾರವನ್ನು ಸೇವಿಸುತ್ತಾನೆ, ಕೆಲವರು ಎರಡು ಬಾರಿ ತಿನ್ನುವವರು ಇದ್ದಾರೆ ಹಾಗೂ ಮೂರಕ್ಕಿಂತ ಅತಿ ಹೆಚ್ಚು ಬಾರಿ ಆಹಾರ ಸೇವಿಸುವ ಅಭ್ಯಾಸ ಹೊಂದಿರುವವರು ಇದ್ದಾರೆ, ಅದು ಹೇಗೆ ಇದ್ದರೂ ಪರವಾಗಿಲ್ಲ ಆಹಾರ ಸೇವಿಸುವ ತಕ್ಕಂತೆ ದೇಹ ಶ್ರಮವನ್ನು ಪಟ್ಟರೆ ಸಾಕು ತಿಂದಿದ್ದು ಸುಲಭವಾಗಿ ಜೀರ್ಣವಾಗುತ್ತದೆ, ಆದರೆ ಊಟ ಮಾಡುವ ಸಂದರ್ಭದಲ್ಲಿ ನಿಮಗೆ ಮಾತನಾಡುವ ಅಭ್ಯಾಸವಿದ್ದರೆ ದಯಮಾಡಿ ಮುಂದೆ ಓದಿ.
ಊಟದ ಆವರಣ ಅಥವಾ ಊಟದ ಪದ್ಧತಿ ಈಗ ಬದಲಾಗಿದೆ, ಮೊದಲೆಲ್ಲ ಸಾಲಿನ ಪಂಕ್ತಿಯಲ್ಲಿ ಕುಳಿತು, ಬಾಳೆ ಎಲೆಯ ಊಟವನ್ನು ಸವಿಯುತ್ತಿದ್ದೆವು, ಆದರೆ ಈಗ ಕೆಲವೊಮ್ಮೆ ಡೈನಿಂಗ್ ಟೇಬಲ್, ಕೆಲವೊಮ್ಮೆ ನೆಲ, ಇನ್ನು ಕೆಲವೊಮ್ಮೆ ಎಲ್ಲಿ ಜಾಗ ಸಿಗುತ್ತದೋ ಅಲ್ಲಿ ನಿಂತುಕೊಂಡೇ ತಿಂದು ಬಿಡುತ್ತೇವೆ, ಆಧುನಿಕತೆಯ ಮೋರೆಯಲ್ಲಿ ಈ ರೀತಿ ಅಭ್ಯಾಸಗಳು ರೂಢಿಗೆ ಬಂದಿವೆ.
ನೀವು ಉಸಿರಾಡುವ ಗಾಳಿ ಮೂಗಿನಿಂದ ಶ್ವಾಸಕೋಶಕ್ಕೆ ಸೇರುತ್ತದೆ, ಅದೇ ರೀತಿಯಲ್ಲಿ ಊಟ ಮಾಡುವಾಗ ಆಹಾರ ಅನ್ನನಾಳದ ಮೂಲಕ ಜಠರವನ್ನು ಸೇರುತ್ತದೆ, ಶ್ವಾಶಕೋಶಕ್ಕೆ ಅನ್ನ ಹೋಗಬಾರದು, ಅಥವಾ ಅನ್ನನಾಳದ ಒಳಗೆ ಉಸಿರಾಟದ ಗಾಳಿ ಹೋಗಬಾರದು, ನೀವೇನಾದರೂ ಊಟ ಮಾಡುವಾಗ ಮಾತನಾಡಿದರೆ ಈ ರೀತಿಯ ಎಡವಟ್ಟುಗಳು ದೇಹದಲ್ಲಿ ನಡೆಯುತ್ತವೆ.
ಇದರಿಂದ ಬಿಕ್ಕಳಿಕೆ, ತೇಗು, ಅನ್ನ ಎದೆಯ ಮೇಲೆ ನಿಂತಂತೆ ಆಗುವುದು ಹಾಗೂ ಕೆಮ್ಮು ಶುರುವಾಗಿ ಕೆಮ್ಮಿನ ಮುಖಾಂತರ ನಿಮ್ಮ ಗಂಟಲಲ್ಲಿ ಸಿಲುಕಿ, ನಂತರ ನಿಮ್ಮ ಮುಂದೆ ಇರುವ ಮೇಲೆ ಹಾರುತ್ತದೆ ಯಾವುದೇ ಸಂಶಯವಿಲ್ಲ, ಹಾಗೂ ನಿಮ್ಮ ಜಠರದ ಆರೋಗ್ಯಕ್ಕೆ ಇದು ಒಳ್ಳೆಯ ಅಭ್ಯಾಸವಲ್ಲ.
ಈ ಕಾರಣದಿಂದಾಗಿ ಊಟ ಮಾಡುವಾಗ ಮಾತನಾಡ ಬೇಡಿ, ಅದರಲ್ಲೂ ಆಹಾರವನ್ನು ಬಾಯಿಯಲ್ಲಿ ಇಟ್ಟುಕೊಂಡಿದ್ದಾರೆ ಮಾತು ಬೇಡವೇ ಬೇಡ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ಬರೆದು ತಿಳಿಸಿ.