ವಾರದಲ್ಲಿ ಒಟ್ಟು ಏಳು ದಿನ ಪ್ರತಿ ದಿನಕ್ಕೂ ಅದರದೇ ಆದ ಆಯಾಮ ಅಥವಾ ಮಹತ್ವಗಳು ಇರುತ್ತದೆ, ಅವುಗಳನ್ನು ಸರಿಯಾಗಿ ತಿಳಿದುಕೊಂಡು ಅದರಂತೆ ನಡೆದುಕೊಂಡರೆ ಖಂಡಿತವಾಗಿಯೂ ನಾವು ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುವುದು ನಿಶ್ಚಿತ, ಅದರಂತೆ ಇಂದು ಮಂಗಳವಾರ ಮಂಗಳವಾರ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ, ಮಂಗಳವಾರ ವನ್ನು ಬಹಳ ಶುಭ ದಿನವೆಂದು ಪರಿಗಣಿಸಲಾಗಿದೆ, ಹಾಗಾಗಿ ಮಂಗಳವಾರದಂದು ಹೀಗೆ ಮಾಡಿದರೆ ನಿಮ್ಮ ಎಲ್ಲಾ ಕೆಲಸಗಳು ಶುಭವಾಗುತ್ತದೆ.
ಮಂಗಳವಾರದಂದು ಉಪವಾಸ ಮಾಡುವವರ ಸಂಖ್ಯೆ ಹೆಚ್ಚಿರುತ್ತದೆ, ಕಾರಣ ಆ ದಿನದಂದು ಹಿಂದೂ ದೇವತೆಗಳಾದ ಗಣೇಶ ದುರ್ಗಾಪರಮೇಶ್ವರಿ ಕಾಳಿಕಾಂಬ ಹಾಗೂ ಹನುಮಂತನನ್ನು ಭಕ್ತಿಯಿಂದ ಪೂಜಿಸುವ ದಿನ, ಮಂಗಳವಾರವೂ ಮಂಗಳ ಗ್ರಹದ ದಿನವೆಂದು ಪರಿಗಣಿಸಲಾಗಿದ್ದು, ಮಂಗಳನು ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡುವ ಗ್ರಹ ಎಂದು ಶಾಸ್ತ್ರಗಳು ಹೇಳುತ್ತವೆ, ಹಾಗಾಗಿ ಆ ದಿನ ಉಪವಾಸ ಬಿದ್ದರೆ ಅವುಗಳಿಂದ ತಪ್ಪಿಸಿಕೊಳ್ಳಬಹುದು ಹಾಗೂ ಯಾವುದೇ ಕಾರಣಕ್ಕೂ ಕೂದಲು ಕತ್ತರಿಸಬಾರದು ತೆಗೆಯ ಬಾರದು.
ಮಂಗಳವಾರದಂದು ಕೆಂಪು ಬಣ್ಣದ ಬಟ್ಟೆಯನ್ನು ತೊಟ್ಟರೆ ಅಂದು ಆ ವ್ಯಕ್ತಿಗಳು ಒಳ್ಳೆಯ ಅದೃಷ್ಟವನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ, ಇನ್ನು ಗಂಡು ಮಗು ಪಡೆಯಲು ಇಚ್ಚಿಸುವ ದಂಪತಿಗಳು ಈ ದಿನದಂದು ಮೋಸ ಮಾಡಲೇಬೇಕು ಎಂಬ ನಂಬಿಕೆಗಳಿವೆ, ಉಪವಾಸ ಮಾಡಲು ಬಯಸುವವರು ಕೇವಲ ಒಂದು ಹೊತ್ತಿನ ಊಟ ಮಾತ್ರ ಮಾಡಬೇಕು, ಸಂಪೂರ್ಣ ದಿನ ಉಪವಾಸವಿರಬೇಕು ಗೋಧಿ ಮತ್ತು ಬೆಲ್ಲದಿಂದ ಮಾಡಿದಂತಹ ಆಹಾರಗಳನ್ನು ದಿನದಲ್ಲಿ ಒಂದು ಹೊತ್ತು ಮಾತ್ರ ತಿನ್ನಬೇಕು.
ಮಂಗಳವಾರದಂದು ಆಂಜನೇಯನಿಗೆ ಕೆಂಪು ಬಣ್ಣದ ಹೂವನ್ನು ಅರ್ಪಿಸಿ ಮಂಗಳಗ್ರಹದಿಂದ ಉಂಟಾಗುವ ಹಲವು ರೀತಿಯ ಕಷ್ಟಗಳನ್ನು ಎದುರಿಸಲು ನಮಗೆ ಶಕ್ತಿ ಕೊಡು ಎಂದು ಪ್ರಾರ್ಥಿಸಿ ಕೊಳ್ಳುವುದು ತುಂಬಾ ಶ್ರೇಷ್ಠ ಕರ ಹಾಗೂ ಸಸ್ಯಹಾರ ಭೋಜನ ಮಾಡಬೇಕು, ಕೊನೆಯದಾಗಿ ಮಂಗಳ ಮಂಗಳ ವಾರ ಮದುವೆ ಕಾರ್ಯಕ್ರಮಗಳಿಗೆ ಅಷ್ಟು ಒಳ್ಳೆಯ ವಾರವಲ್ಲ ಎಂದು ಪರಿಗಣಿಸಲಾಗಿದೆ.