ನಮ್ಮ ದೇಶದಲ್ಲಿ ಅರಿಶಿಣ ಮತ್ತು ಕುಂಕುಮಕ್ಕೆ ಒಂದು ಬಹಳ ಮಹತ್ತರವಾದ ಸ್ಥಾನವಿದೆ. ಇದು ಅಡಿಗೆಗಷ್ಟೇ ಸೀಮಿತವಾಗಿಲ್ಲ. ಅರಿಷಿಣಕ್ಕೆ ನಮ್ಮ ದೇಶದಲ್ಲಿ ಅದಕ್ಕಾಗಿಯೇ ಒಂದು ಪವಿತ್ರತೆಯನ್ನು ನೀಡಿದ್ದೇವೆ. ಅರಿಸಿನವನ್ನು ದೇವರಿಗೆ ಪೂಜಿಸಲು, ಬಾಗಿಲ ಹೊಸ್ತಿಲಿಗೆ ಇಡಲು, ಕುಂಕುಮಕ್ಕೆ ಕೊಡುವಾಗ ಮತ್ತು ಅಡಿಗೆಗೆ ಉಪಯೋಗಿಸುತ್ತೇವೆ. ಮುತ್ತೈದೆಯರು ಅದನ್ನು ಒಂದು ವರದಾನವೆಂದು ಉಪಯೋಗಿಸುವರು. ಅರಿಸಿಣ ಒಂದೇ ಈ ರೀತಿ ನಾನಾ ಬಗೆಯಲ್ಲಿ ಉಪಯೋಗಕ್ಕೆ ಬರುವುದು ಮತ್ತು ಅದನ್ನು ದಿನನಿತ್ಯ ಎಲ್ಲರೂ ಯಾವುದಕ್ಕಾದರೂ ಬಳಸಿಯೇ ಬಳಸುತ್ತಾರೆ.
ನಮ್ಮಗಳಿಗಂತೂ ಅರಿಶಿನ – ಕುಂಕುಮವಿಲ್ಲದೆ ಪೂಜೆ ಸಂಪೂರ್ಣವಾಗುವುದೇ ಇಲ್ಲ. ದೇವರ ಪೂಜೆಗಂತೂ ಹೂವಿಲ್ಲದಿದ್ದರೂ ಪರವಾಗಿಲ್ಲ. ಅರಿಷಿಣ- ಕುಂಕುಮವಂತೂ ಇರಲೇ ಬೇಕು. ಈಗಾಗಿ ಅರಿಶಿನವೂ ನಮ್ಮ ದಿನನಿತ್ಯದ ಅಡಿಗೆಯಲ್ಲಿ, ಪೂಜೆಯಲ್ಲಿ ಒಂದಾಗಿದೆ. ಮುತ್ತೈದೆಯರು ಪ್ರತಿದಿನ ಅದನ್ನು ಮಾಂಗಲ್ಯಕ್ಕೆ ಹಚ್ಚುವುದರಿಂದ ಶ್ರೇಯಸ್ಸು ಮತ್ತು ಒಳ್ಳೆಯದಾಗುವುದು. ಹೊಸಲಿಗೆ ಪ್ರತಿದಿನ ಇಡುವುದರಿಂದ ಕ್ರಿಮಿ-ಕೀಟಗಳ ಹತೋಟಿ ಇರುತ್ತದೆ ಮತ್ತು ಶುಭ ಸಂಕೇತವೂ ಆಗಿದೆ. ನಮ್ಮ ಬೆಳಗಿನ ಕೆಲಸಗಳು ಪ್ರಾರಂಭವಾಗುವುದೆ ಅರಿಸಿನದಿಂದ. ಒಳ್ಳೆಯ ಶುಭಕಾರ್ಯಗಳಿಗೂ ಸಹ ಅರಿಶಿನಕ್ಕೆ ಅದರದ್ದೇ ಆದ ಮಹತ್ವವಿದೆ.
ಎಲ್ಲಾ ಶುಭ ಸಂದರ್ಭದಲ್ಲೂ ಇದನ್ನು ಬಳಸುತ್ತೇವೆ, ಅರಿಶಿಣದ ಕೊಂಬು ಚಿನ್ನದ ಮಾಂಗಲ್ಯಕ್ಕೆ ಸಮಾನವಾಗಿದೆ, ಕೆಲವರು ಅರಿಷಿಣದ ಕೊಂಬನ್ನೆ ಮದುವೆಯಲ್ಲಿ ಮಾಂಗಲ್ಯವಾಗಿ ಉಪಯೋಗಿಸುವರು. ಆಗಾಗಿ ಇದಕ್ಕೆ ಅದರದ್ದೇ ಆದ ಪಾವಿತ್ರ್ಯತೆ ಮತ್ತು ಕಟ್ಟಲಾರದ ಬೆಲೆ ಇದೆ. ಅರಿಶಿನದ ದಾರ ಹೀಗೆ ಇದು ಹಲವಾರು ಬಗೆಯಲ್ಲಿ ಬಳಸಲು ಅನುಕೂಲವಾಗಿದೆ.
ಅರಿಸಿನವನ್ನು ಹಾಲಿನ ಕೆನೆಯೊಂದಿಗೆ ಸೇರಿಸಿ ಮುಖಕ್ಕೆ ಹಚ್ಚುವುದರಿಂದ, ಮುಖದಲ್ಲಿನ ಗುಳ್ಳೆಗಳು ಕಮ್ಮಿಯಾಗುತ್ತವೆ ಮತ್ತು ಹೊಳಪು ಬರುತ್ತದೆ.
ಅರಿಸಿನದ ಪುಡಿಯನ್ನು ಕಡಲೆಹಿಟ್ಟಿಗೆ ಬೆರೆಸಿ, ಹಾಲಿನೊಂದಿಗೆ ಕಲೆಸಿ ಸಹ ಮುಖಕ್ಕೆ ಹಚ್ಚಬಹುದು.
ಅರಿಶಿನದ ಪುಡಿಯನ್ನು ಸ್ವಲ್ಪ ಬಿಸಿ ಮಾಡಿದ ಹಾಲಿಗೆ ಬೆರೆಸಿ ಕುಡಿಯುವುದರಿಂದ ಕೆಮ್ಮು ಸ್ವಲ್ಪ ಮಟ್ಟಿಗೆ ಕಮ್ಮಿಯಾಗುತ್ತದೆ.
ಇದು ಆಂಟಿಸೆಪ್ಟಿಕ್ ಆಗಿರುವುದರಿಂದ ದಿನನಿತ್ಯ ಅಡಿಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕೆ ಉತ್ತಮ.
ಸಣ್ಣ ಪುಟ್ಟ ಗಾಯಗಳಾಗಿ ರಕ್ತ ಬರುತ್ತಿರುವಾಗ ಈ ಅರಿಶಿಣದ ಪುಡಿಯನ್ನು ಗಾಯದ ಮೇಲೆ ಹಾಕಿ ಅದುವುದರಿಂದ ರಕ್ತ ಬರುವುದು ನಿಲ್ಲುತ್ತದೆ. (ಚಿಕ್ಕ ಗಾಯಗಳಿಗೆ)ಆಂಟಿಸೆಪ್ಟಿಕ್ ಆಗಿರುವುದರಿಂದ ಬೇಗನೆ ಗಾಯವೂ ಒಣಗುತ್ತದೆ/ಮಾಯುತ್ತದೆ.
ಅರಿಶಿಣದ ಕೊಂಬನ್ನು ಹಾಲಿನಲ್ಲಿ ತೇದು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಗುಳ್ಳೆಗಳು ಇಲ್ಲವಾಗುತ್ತವೆ ಮತ್ತು ಮುಖವು ಹೊಳಪು ಬರುತ್ತದೆ. ಇದು ಅರಿಷಿಣದ ಪುಡಿಯಲ್ಲಿ ಕಲೆಸಿ ಹಚ್ಚುವುದಕ್ಕಿಂತ ತುಂಬಾ ಉತ್ತಮವಾದದ್ದು. ಅಂಗಡಿಯಲ್ಲಿ ತಂದ ರೆಡಿಮೇಡ್ ಪುಡಿ ಉಪಯೋಗಿಸುವುದರಿಂದ ಹೆಚ್ಚು ಅನುಕೂಲ ದೊರೆಯದು, ಅದರಲ್ಲಿ ಕೆಲವು ಬಣ್ಣ ಮಿಶ್ರಿತವಾಗಿರುತ್ತವೆ. ಆದ್ದರಿಂದ ತೇದು ಹಚ್ಚುವುದರಿಂದ ಸ್ವಚ್ಛವಾದ ಅರಿಸಿನ ಸಿಗುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.