ಹೊಟ್ಟೆಯ ಹೊಟ್ಟೆಯ ಜಂತುಹುಳು ಗಳಿಗೆ ಪ್ರತಿದಿನ ಬೆಳಿಗ್ಗೆ ಒಂದು ಲಿಂಬೆಯ ರಸದಲ್ಲಿ ಒಂದು ಚಿಟಿಕೆ ಹುರಿದ ಇಂಗನ್ನು ಮಿಶ್ರ ಮಾಡಿ ಆರು ದಿನ ಕುಡಿಯಬೇಕು ಏಳನೇ ದಿನ ಮಲದಲ್ಲಿ ಹುಳುಗಳೆಲ್ಲ ಬಿದ್ದು ಹೋಗುತ್ತದೆ.
ಪಪ್ಪಾಯಿ ಹಣ್ಣಿನ ಬೀಜ ಒಣಗಿಸಿ ಪುಡಿಮಾಡಿಕೊಂಡು ಕಾಲು ಚಮಚದಷ್ಟು ಆ ಪುಡಿಯನ್ನು ನಿತ್ಯ ಬೆಳಿಗ್ಗೆ ಬಿಸಿನೀರಿನಲ್ಲಿ ಬೆರೆಸಿಕೊಂಡು ಕುಡಿಯಬೇಕು. ಹತ್ತರಿಂದ 12 ದಿನಗಳ ನಂತರ ಹರಳೆಣ್ಣೆಯನ್ನು ಅರ್ಧ ಚಮಚ ತೆಗೆದುಕೊಂಡರೆ ಹುಳುಗಳೆಲ್ಲ ಬಿದ್ದು ಹೋಗುತ್ತವೆ.
ಮುತ್ತುಗದ ಬೀಜ ಮತ್ತು ವಾಯುವಿಳಂಗ ಗಳನ್ನು ಸಮತೂಕ ಚುರ್ಣಿಸಿ, ಆ ಚೂರ್ಣದ 2.3 ಚಿಟಿಕೆ ಯಷ್ಟನ್ನು ನಿಂಬೆರಸದಲ್ಲಿ ಮಿಶ್ರ ಮಾಡಿ ಒಂದು ಚಮಚ ಜೇನು ಸೇರಿಸಿ ನಿತ್ಯ ಬೆಳಿಗ್ಗೆ ಒಂದು ವಾರ ಸೇವಿಸಬೇಕು. ಎಂಟು ದಿನ ಹರಳೆಣ್ಣೆ ಸೇವಿಸಬೇಕು.
ಬೇವಿನ ಚಿಗುರು ಮತ್ತು ಓಮ ಅರ್ಧ ಚಮಚ ಅರೆದು ಜೇನು ಸೇರಿಸಿ ಪ್ರತಿನಿತ್ಯ ಬೆಳಗ್ಗೆ ಆರೇಳು ದಿನಗಳಂತೆ ಸೇವಿಸಬೇಕು.
ನುಗ್ಗೆ ಚಕ್ಕೆ ಮತ್ತು ವಾಯುವಿಡಂಗ ಗಳನ್ನು ಒಂದೊಂದು ಹನ್ನೆರಡು ಗ್ರಾಮ್ಗಳಂತೆ ಸೇರಿಸಿ, ಕುಟ್ಟಿ, ಅಷ್ಟಾವಶೇಷ ಕಷಾಯ ಮಾಡಿ ತಣಿಸಿ, 15 ಮಿಲಿ ಜೇನು ಸೇರಿಸಿ ನಿತ್ಯ ಕುಡಿಯುವುದು. ಏಳು ದಿನಗಳ ನಂತರ ವಿರೇಚನಕ್ಕೆ ತೆಗೆದುಕೊಂಡರೆ ಜಂತುಹುಳುಗಳು ಬಿದ್ದುಹೋಗುತ್ತದೆ.
ವಾಯುವಿಳಂಗದ ಚೂರ್ಣ 6 ಗ್ರಾಮ್ಗೆ ಅಷ್ಟೇ ಸಕ್ಕರೆ ಸೇರಿಸಿ. ರಾತ್ರಿ ಊಟವಾದ ನಂತರ ಸೇವಿಸಿ ಬೆಳಿಗ್ಗೆ 45ರಿಂದ 60 ಮಿಲಿಲೀಟರ್ ಹರಳೆಣ್ಣೆಯನ್ನು ಕುಡಿದರೆ ಹುಳುಗಳು ಬಿದ್ದುಹೋಗುತ್ತದೆ.
ಪಪ್ಪಾಯಿ ಹಾಲು ಹಾಗೂ ವಾಯುವಿಳಂಗ ಸಮಭಾಗ ಕೂಡಿಸಿ ಒಂದು ಪಾಯಿಂಟ್ 25 ಗ್ರಾಮಿನಷ್ಟು ನಿತ್ಯ ಸೇವಿಸುವುದು. (ಇದನ್ನು ಮಕ್ಕಳಿಗಾದರೆ ಕಡಿಮೆ ಪ್ರಮಾಣದಲ್ಲಿ ಕೊಡಬೇಕು) ಮತ್ತು ಮೇಲೆ ಬಿಸಿ ನೀರು ಕುಡಿದರೆ ಹುಳುಗಳ ವಿಸರ್ಜನೆಯಾಗುತ್ತದೆ.
ಮುತ್ತುಗದ ಬೇರಿನ ಸುಟ್ಟು ಬೂದಿ 3 ಗ್ರಾಂ ತೂಕವನ್ನು ತಣ್ಣೀರಿನಲ್ಲಿ ಬೆಳಿಗ್ಗೆ 3ದಿನ ಕೊಟ್ಟು ನಾಲ್ಕನೇ ದಿನ ಹರಳೆಣ್ಣೆಯನ್ನು ಕೊಡುವುದರಿಂದ ಕ್ರಿಮಿಗಳು ಬಿದ್ದು ಹೋಗುತ್ತವೆ.
ನಿತ್ಯ ಬೆಳಗ್ಗೆ ಹತ್ತರಿಂದ ಹನ್ನೆರಡು ಹನಿಯಷ್ಟು ಬೇವಿನ ಎಣ್ಣೆಯನ್ನು ಸಕ್ಕರೆಯಲ್ಲಿ ಬೆರೆಸಿ ತಿಂದು ಬಿಸಿ ನೀರು ಕುಡಿಯಬೇಕು ಈ ಕ್ರಮವನ್ನು ಕೇವಲ ನಾಲ್ಕುದಿನ ಅನುಸರಿಸಿ, ಐದನೇ ದಿನ ಹರಳೆಣ್ಣೆಯನ್ನು ಬೇದಿಗೆ ತೆಗೆದುಕೊಂಡರೆ ಹೊಟ್ಟೆಯಲ್ಲಿನ ಕ್ರಿಮಿ ಗಳೆಲ್ಲ ಬಿದ್ದು ಹೋಗುತ್ತವೆ.