ದಿನ 4 ಗೋಡಂಬಿ ತಿಂದರೆ ಇರೋ ಲಾಭಗಳ ಬಗ್ಗೆ ಗೊತ್ತಾದ್ರೆ ಖಂಡಿತ ತಿನ್ನುತ್ತಿರಾ!

0
1321

ಗೋಡಂಬಿ ಕಾಯಿಚಿಪ್ಪಿನ ದ್ರವವು ( ಕ್ಯಾಶ್ಯೂ ನಟ್‌ಶೆಲ್‌ ಲಿಕ್ವಿಡ್‌-CNSL ) ಗೋಡಂಬಿಯ ಸಂಸ್ಕರಣದ ಒಂದು ಉಪ ಉತ್ಪನ್ನವಾಗಿದ್ದು, ಅದರ ಬಹುತೇಕ ಭಾಗವು ಅನಾಕಾರ್ಡಿಕ್‌ ಆಮ್ಲಗಳಿಂದ ತುಂಬಿಕೊಂಡಿದೆ, ಈ ಆಮ್ಲಗಳು ಗ್ರಾಂ ಪಾಸಿಟಿವ್‌ ಬ್ಯಾಕ್ಟೀರಿಯಾಕ್ಕೆ ಮಾರಕವಾಗಿ ಪರಿಣಮಿಸುವುದರಿಂದ, ಹಲ್ಲು ಬಾವುಗಳ ವಿರುದ್ಧ ಅವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬರಲಾಗಿದೆ.

ಇತರ ಗ್ರಾಂ ಪಾಸಿಟಿವ್‌ ಬ್ಯಾಕ್ಟೀರಿಯಾದ ಒಂದು ವ್ಯಾಪಕ ಶ್ರೇಣಿಯ ವಿರುದ್ಧವೂ ಅವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತವೆ, ಸಸ್ಯದ ಅನೇಕ ಭಾಗಗಳನ್ನು ಗಯಾನಾದ ಪಟಮೋನಾ ಜನರು ಔಷಧೀಯವಾಗಿ ಬಳಸುತ್ತಾರೆ.

ತೊಗಟೆಯನ್ನು ಹೆರೆಯಲಾಗುತ್ತದೆ ಮತ್ತು ಒಂದು ರಾತ್ರಿಯ ಅವಧಿಗೆ ನೆನೆಹಾಕಲಾಗುತ್ತದೆ ಅಥವಾ ಕುದಿಸಲಾಗುತ್ತದೆ, ಇದರ ಫಲವಾಗಿ ರೂಪುಗೊಳ್ಳುವ ಕಷಾಯವು ಒಂದು ಅತಿಸಾರ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ.

ವಾರ್ನಿಷ್‌ನಲ್ಲಿ ಬಳಸಲ್ಪಡುವ ಒಂದು ಅಂಟನ್ನೂ ಸಹ ಇದು ನೀಡುತ್ತದೆ, ಬೀಜಗಳನ್ನು ಬೀಸಿ ಪುಡಿಮಾಡಿ ಹಾವಿನ ಕಡಿತಗಳಿಗೆ ಸಂಬಂಧಿಸಿದಂತೆ ನಂಜು ನಿರೋಧಕವಾಗಿ ಬಳಸಲಾಗುತ್ತದೆ, ಕರಟಕಾಯಿಯ ತೈಲವನ್ನು ಶರೀರದ ಒಂದು ಭಾಗಕ್ಕೆ ಸಂಬಂಧಿಸಿದಂತೆ ಒಂದು ಶಿಲೀಂಧ್ರ ನಿರೋಧಕವಾಗಿ ಬಳಸಲಾಗುತ್ತದೆ ಅಷ್ಟೇ ಅಲ್ಲ, ಬಿರುಕುಬಿಟ್ಟ ಹಿಮ್ಮಡಿಗಳನ್ನು ವಾಸಿಮಾಡಲೂ ಸಹ ಇದು ಬಳಸಲ್ಪಡುತ್ತದೆ.

ಹೌದು ಗೋಡಂಬಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಪ್ರತಿದಿನ 4 ಗೋಡಂಬಿ ಸವಿಯುವುದರಿಂದ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು.

ಕಣ್ಣುಗಳ ಆರೋಗ್ಯಕ್ಕೆ : ಕಣ್ಣುಗಳನ್ನು UV ಕಿರಣಗಳಿಂದ ರಕ್ಷಿಸುವ ಗುಣ ಗುಣ ಗೋಡಂಬಿಯಲ್ಲಿದೆ.

ಚಯಪಚಯ ಕ್ರಿಯೆ : ಗೋಡಂಬಿಯಲ್ಲಿ ವಿಟಮಿನ್‌ ಬಿ6 ಇದ್ದು ಚಯಪಚಯ ಕ್ರಿಯೆಗೆ ಸಹಾಯ ಮಾಡುತ್ತೆ.

ಹೃದಯದ ಆರೋಗ್ಯ : ಗೋಡಂಬಿಯಲ್ಲಿರುವ palmitoleic ಹಾಗೂ oleic ಆಮ್ಲ ಹೃದಯವನ್ನು ಜೋಪಾನ ಮಾಡುತ್ತೆ.

ಆರೋಗ್ಯಕರ ಕ್ಯಾಲೋರಿ ಅಂಶವಿದೆ : ಸಂಪೂರ್ಣ ಕ್ಯಾಲೋರಿ ಮುಕ್ತ ಆಹಾರಶೈಲಿ ಅನಾರೋಗ್ಯಕರ. ಆರೋಗ್ಯವಾಗಿರಲು ಆರೋಗ್ಯಕರ ಕ್ಯಾಲೋರಿ ಅವಶ್ಯಕ. ಗೋಡಂಬಿಯಲ್ಲಿ ಆರೋಗ್ಯಕರ.

ಖಿನ್ನತೆ ನಿವಾರಿಸುವ ಮನೆಮದ್ದು : ಖಿನ್ನತೆ ಸಮಸ್ಯೆ ತುಂಬಾ ಅಪಾಯಕಾರಿಯಾದದ್ದು, ಗೋಡಂಬಿಯಲ್ಲಿ ಅಮೈನೋ ಆಮ್ಲ, tryptophan ಅಂಶವಿದ್ದು ಇದು ನಮ್ಮ ವರ್ತನೆಯನ್ನು ನಿಯಂತ್ರಿಸುತ್ತದೆ ಹಾಗೂ ಒಳ್ಳೆಯ ನಿದ್ದೆ ಬರುವುದು. ಇದರಿಂದ ಒತ್ತಡ, ಖಿನ್ನತೆ ದೂರವಾಗುವುದು.

ಹೀಗೆ ದಿನದಲ್ಲಿ 4 ಗೋಡಂಬಿ ತಿನ್ನುವುದರಿಂದ ಇಷ್ಟೆಲ್ಲ ಲಾಭಗಳಿವೆ, ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here