ಸಾಮಾನ್ಯವಾಗಿ ಚಳಿಗಾಲದಲ್ಲಿ ತಲೆಯಲ್ಲಿನ ಹೊಟ್ಟು ಹೆಚ್ಚಾಗುತ್ತದೆ, ನಿಮ್ಮ ಕೈ ಅಥವಾ ಕಾಲುಗಳ ಚರ್ಮ ಒಣಗಿದ ಹಾಗೆಯೇ ತಲೆಯ ಕೂದಲಿನ ಕೆಳಭಾಗದ ಚರ್ಮ ಒಣಗುತ್ತದೆ, ಈ ರೀತಿ ಒಣಗಿದ ಚರ್ಮ ಉದುರುವುದನ್ನು ತಲೆಯ ಹೊಟ್ಟು ಎಂದು ಕರೆಯುತ್ತೇವೆ, ಈ ಹೊಟ್ಟಿನ ಸಮಸ್ಯೆಗೆ ನಾವು ಅನೇಕ ಶ್ಯಾಂಪೂಗಳನ್ನು ಬಳಸುವುದು ಉಂಟು, ಈ ರೀತಿಯ ಶಾಂಪು ಗಳನ್ನು ಬಳಸುವುದರಿಂದ ಒಂದು ದಿನಕ್ಕೆ ಮಾತ್ರ ನಿಮ್ಮ ತಲೆ ಹೊಟ್ಟು ನಿಯಂತ್ರಣ ಗೊಳ್ಳುತ್ತದೆ ಮತ್ತೆ ಅದೇ ಸಮಸ್ಯೆ ಶುರುವಾಗುತ್ತದೆ.
ಈ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಚಿಂತೆ ಬೇಡ ಈಗ ನಾವು ತಿಳಿಸುವ ಸುಲಭ ಮನೆ ಮದ್ದಿನ ಪರಿಹಾರ ಗಳನ್ನು ಮಾಡಿಕೊಳ್ಳಿ ಹಾಗೂ ತಲೆಹೊಟ್ಟಿನ ಸಮಸ್ಯೆಯಿಂದ ದೂರವಾಗಿ.
ತಲೆಯ ಚರ್ಮವನ್ನು ಸ್ವಚ್ಛಗೊಳಿಸಲು ನಿಂಬೆಹಣ್ಣು ಹಾಗೂ ಕೂದಲಿಗೆ ಪೋಷಣೆಯನ್ನು ನೀಡಲು ಕೊಬ್ಬರಿ ಎಣ್ಣೆ ಉತ್ತಮ ಸಹಕಾರಿ, ಆದ್ದರಿಂದ ಉಗುರು ಬೆಚ್ಚಿನ ಕೊಬ್ಬರಿ ಎಣ್ಣೆಯಲ್ಲಿ ಸಮಪ್ರಮಾಣದ ನಿಂಬೆ ಹಣ್ಣಿನ ರಸವನ್ನು ಬೆರೆಸಬೇಕು, ನಂತರ ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಬೇಕು ನಂತರ 10 ನಿಮಿಷದವರೆಗೆ ಮಸಾಜ್ ಮಾಡಬೇಕು, ಸರಿ ಸುಮಾರು ಅರ್ಧಗಂಟೆಗಳ ಬಿಟ್ಟು ನೀವು ದೈನಂದಿನ ವಾಗಿ ಬಳಸುವ ಶಾಂಪೂವನ್ನು ಬಳಸಿ ತಲೆಯನ್ನು ತೊಳೆಯಿರಿ, ಹೀಗೆ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ಶಮನವಾಗುತ್ತದೆ.
ಕೂದಲಿಗೆ ಬಣ್ಣವನ್ನು ಹಚ್ಚಿ ಬೇಕಾದರೆ ಮೊದಲು ಮದರಂಗಿಯನ್ನು ಒಂದು ಬಟ್ಟಲಲ್ಲಿ ಹಾಕಿ ಅದಕ್ಕೆ ಮೊಟ್ಟೆಯ ಬಿಳಿಭಾಗ ನಿಂಬೆರಸ, ತಲೆ ಕೂದಲಿಗೆ ಬಣ್ಣ ಬರಲು ಬೀಟ್ರೂಟ್ ರಸ ಟೀ ಅಥವಾ ಕಾಫಿ ಡಿಕಾಕ್ಷನ್ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ, ಇದನ್ನು ನಿಮ್ಮ ತಲೆ ಕೂದಲಿನ ಬುಡದವರೆಗೂ ತಲುಪುವ ಹಾಗೆ ಹಚ್ಚಿಕೊಂಡು ಒಂದುವರೆ ತಾಸು ಬಿಟ್ಟು ನಂತರ ಸ್ನಾನ ಮಾಡಿ ಈ ರೀತಿ ಮಾಡುವುದರಿಂದ ಕೂದಲಿಗೆ ಪೋಷಣೆ ದೊರೆಯುತ್ತದೆ.
ರಾತ್ರಿ ಮಲಗುವ ಮೊದಲು ಸ್ವಲ್ಪ ಮೆಂತ್ಯವನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಎದ್ದ ಮೇಲೆ ನೆನೆಸಿದ ಮೆಂತ್ಯಕಾಳು ಅನ್ನು ರುಬ್ಬಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಬೇಕು, ನಂತರ ಮೆಂತ್ಯ ಪೇಸ್ಟ್ ಅನ್ನು ತಲೆಗೆ ಹಚ್ಚಬೇಕು, ಅತಿ ಮುಖ್ಯವಾಗಿ ಕೂದಲಿನ ಬುಡಕ್ಕೆ ಇದು ತಲುಪಬೇಕು ಹೀಗೆ ಮಾಡಿ ಅರ್ಧ ಗಂಟೆ ಬಿಟ್ಟು ನಂತರ ಶಾಂಪು ಬಳಸಿ ಉಗುರು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿದರೆ ನಿಮ್ಮ ಕೂದಲು ಹೊಳಪು ಬರುವುದರ ಜೊತೆಗೆ ಕೂದಲಿನ ಬೇರು ಸಹ ಗಟ್ಟಿಯಾಗುತ್ತದೆ.