ಉಗುರಿನ ಸುತ್ತಲ ಮೆತ್ತನೆಯ ಭಾಗದಲ್ಲಿ ಸೊಂಕಿನಿಂದ ಏಳುವ ಕೀವು ಕುರು (ಪ್ಯಾರೋನೈಕಿಯ) (ವಿಟ್ಲೊ, ರನರೌಂಡ್), ಕಾಲುಬೆರಳುಗಳಲ್ಲಿ ಏಳಬಹುದಾ ದರೂ ಕೈ ಬೆರಳುಗಳ ಸುತ್ತ ಏಳುವುದೇ ಹೆಚ್ಚು. ಉಗುರಿನ ಸುತ್ತಲಿನ ಚರ್ಮವು ಕೆಂಪಾಗಿ, ಊದಿಕೊಂಡು, ಕೀವಿನಿಂದ ತುಂಬಿಕೊಳ್ಳುತ್ತದೆ ಹಾಗೂ ನೋವಿನಿಂದ ಕೂಡಿರುತ್ತದೆ. ಉಗುರುಸುತ್ತು ತೀವ್ರ ಅಥವಾ ದೀರ್ಘಾವಧಿಯದ್ದಾಗಿರಬಹುದು. ಮುಳ್ಳು ತಾಗಿ, ಅಥವಾ ಗಾಯವಾಗುವುದರಿಂದ ಬ್ಯಾಕ್ಟೀರಿಯ ರೋಗಾಣುಗಳ ಸೋಂಕಾಗಿ ತೀವ್ರ ಉಗುರುಸುತ್ತು ಕಾಣಿಸಿಕೊಳ್ಳುತ್ತದೆ. ದೀರ್ಘಾವಧಿಯ ಉಗುರುಸುತ್ತು, ಸಾಮಾನ್ಯವಾಗಿ ಅಣಬೆರೋಗದಿಂದ ಉಂಟಾಗುತ್ತದೆ. ಹೆಚ್ಚು ಕಾಲ ನೀರಲ್ಲಿ ಕೆಲಸ ಮಾಡುವುದು ಈ ತೊಂದರೆಯಾಗಲು ಕಾರಣವಾಗುತ್ತದೆ.
ಮೊಟ್ಟ ಮೊದಲಿಗೆ ಉಗುರುಸುತ್ತು ಆದ ಬೆರಳನ್ನು ನೀರು, ಸೋಪ್, ಡಿಟರ್ಜೆಂಟ್ ಮತ್ತು ಇತರ ರಾಸಾಯನಿಕಗಳು ಮುಂತಾದ ಕಿರಿಕಿರಿಗೊಳಿಸುವ ವಸ್ತುಗಳಿಂದ ದೂರವಿಡಿ.
ನಿಮ್ಮ ಉಗುರುಗಳನ್ನು ಕತ್ತರಿಸ ಬೇಕು, ಮತ್ತು ಶುದ್ದವಾಗಿ ನೋಡಿಕೊಳ್ಳಬೇಕು, ಮತ್ತು ಯಾವುದೇ ಕಾರಣಕ್ಕೂ ನಿಮ್ಮ ಉಗುರುಗಳನ್ನು ಹಲ್ಲಿನಿಂದ ಕಚ್ಚಿ ಕೀಳಬೇಡಿ.
ನೋವಿರುವ ಬೆರಳನ್ನು ಬಿಸಿ ನೀರಿನಲ್ಲಿ ದಿನಕ್ಕೆ ಮೂರ್ನಾಲ್ಕು ಬಾರಿ 15 ನಿಮಿಷದವರೆಗೆ ಇಡುವುದರಿಂದ ಸಹ ನೋವು ಬೇಗನೆ ಶಮನಗೊಳ್ಳುತ್ತದೆ. ಇಷ್ಟಲ್ಲದೆ ನೋವಿರುವ ಜಾಗದಲ್ಲಿ ಬಿಸಿ ಶಾಖವನ್ನು ಇಡುವುದರಿಂದ ನೋವು ಮತ್ತು ಊತ ಕಡಿಮೆಯಾಗುತ್ತದೆ.
ಆಲಮಟ್ಟಿ ಕಾಯಿ ಅಥವ ನಿಂಬೆ ಹಣ್ಣನ್ನು ಅದರ ಮೇಲ್ಬಾಗದಲ್ಲಿ ಕತ್ತರಿಸಿ ನಿಮ್ಮ ಉಗುರು ಸುತ್ತಾಗಿರುವ ಬೆರಳನ್ನು ಅದರಲ್ಲಿ ತೂರಿಸ ಬೇಕು, ಇದರಿಂದ ನೋವು ಮತ್ತು ಉರಿ ಇದ್ದರೆ ಉಪಶಮನ ವಾಗುತ್ತದೆ.
ಬಿಳಿ ಹೂಲಿ ಸೊಪ್ಪು, ಕಾಳು ಮೆಣಸು ಮತ್ತು ಬೆಳ್ಳುಳ್ಳಿಯನ್ನು ಚೆನ್ನಾಗಿ ಅರೆಯಬೇಕು, ನಂತರ ಅದನ್ನು ಬೆಣ್ಣೆಯಲ್ಲಿ ಕಲಸಿ ಸುತ್ತಾದ ಉಗುರಿಗೆ ಹಚ್ಚಬೇಕು, ನಂತರ ಅಮೃತ ಬಳ್ಳಿ ಎಲೆಯನ್ನು ಸುತ್ತಿ ಕಟ್ಟಬೇಕು, ನೀರನ್ನು ಯಾವುದೇ ಕಾರಣಕ್ಕೂ ಸೋಕಿಸ ಬಾರದು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.