ನಿಮಗೆ ನೆನಪಿರಬಹುದು ನಾವು ಶಾಲೆಗೆ ಹೋಗುವ ಸಂದರ್ಭದಲ್ಲಿ ಮಧ್ಯಾಹ್ನದ ಊಟವನ್ನು ಯಾರೊಂದಿಗೂ ಹಂಚಿಕೊಂಡು ತಿನ್ನ ಬೇಡ ಎಂದು ಹೇಳಿ ಕಳಿಸುತ್ತಿದ್ದರು, ಆದರೆ ನಾವು ಅದನ್ನು ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ ಎಲ್ಲರೊಂದಿಗೂ ನಾವು ತಗೊಂಡು ಹೋದ ಆಹಾರವನ್ನು ಹಂಚಿಕೊಂಡು ಅವರು ತಂದ ಆಹಾರವನ್ನು ನಾವು ತಿನ್ನುತ್ತಿದ್ದೆವು, ಅದು ಬಾಲ್ಯದ ದಿನಗಳು ಆಗ ನಿಮಗೆ ಅಷ್ಟೊಂದು ತಿಳುವಳಿಕೆ ಇರುವುದಿಲ್ಲ, ಆದರೆ ಈಗ ಬುದ್ಧಿ ಬಂದಾಗಲೂ ಅದೇ ತಪ್ಪುಗಳನ್ನು ಮಾಡುತ್ತಿರುತ್ತೇವೆ ಆದರೆ ಇದು ಎಷ್ಟು ಸರಿ, ಎಂಜಲನ್ನು ಸೇವಿಸುವುದರಿಂದ ಯಾವ ರೀತಿಯ ಹಾನಿಗಳು ಸಂಭವಿಸುತ್ತದೆ ಎಂಬುದರ ಬಗ್ಗೆ ಎಂದು ತಿಳಿಯೋಣ.
ನಿಮಗೆ ತಿಳಿದಿರಲಿ ಒಬ್ಬ ವ್ಯಕ್ತಿ ಎಂಜಲು ಮಾಡಿದ ಅನ್ನದಲ್ಲಿ ಆ ವ್ಯಕ್ತಿಯ ವಾಸನೆ ಮತ್ತು ಬೆರಳುಗಳ ಸ್ಪರ್ಶ ವಾಗಿರುತ್ತದೆ, ಇದರಿಂದ ಆಹಾರದಲ್ಲಿ ರಜ-ತಮ ಕಣಗಳ ಪ್ರಕ್ಷೇಪಣೆ ಯಾಗಿರುತ್ತದೆ, ಈ ರೀತಿಯ ಅನ್ನವನ್ನು ಸೇವಿಸುವಾಗ ಅನ್ನವನ್ನು ಸೇರಿಸುವ ವ್ಯಕ್ತಿಯ ವಾಸನೆಯೂ ಅನ್ನದ ಮೇಲೆ ಮೂಡಿರುವುದರಿಂದ ಎಂಜಲು ಅನ್ನದ ಮೇಲೆ ಕೆಟ್ಟ ಶಕ್ತಿಗಳು ಹಲ್ಲೆ ಮಾಡುವ ಪ್ರಮಾಣ ಹೆಚ್ಚಾಗಿರುತ್ತದೆ, ಅಷ್ಟೇ ಅಲ್ಲದೆ ಕೆಟ್ಟಶಕ್ತಿಗಳು ಏಂಜಲ ಅನ್ನವನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಗ್ರಹಿಸುತ್ತವೆ.
ಇನ್ನು ಈ ಬಗ್ಗೆ ನಮ್ಮ ಶಾಸ್ತ್ರಗಳು ಏನು ಹೇಳುತ್ತವೆ : ಯಾರ ಎಂಜಲನ್ನವನ್ನು ತಿನ್ನುತ್ತಾರೆಯೋ, ಆ ವ್ಯಕ್ತಿಯ ಆಧ್ಯಾತ್ಮಿಕ ತೊಂದರೆಗಳು ಎಂಜಲನ್ನವನ್ನು ತಿಂದವರ ದೇಹದಲ್ಲಿ ಸಂಕ್ರಮಿತವಾಗುವ ಸಾಧ್ಯತೆಯಿರುವುದು : ಇತರ ವ್ಯಕ್ತಿಗಳ ಎಂಜಲನ್ನವನ್ನು ತಿಂದರೆ ಅವರ ದೇಹದಲ್ಲಿನ ರಜ-ತಮಾತ್ಮಕ ಸ್ಪಂದನಗಳು, ಎಂಜಲನ್ನವನ್ನು ತಿನ್ನುವವರ ಬಾಯಿಯಲ್ಲಿನ ಜೊಲ್ಲಿನ ಮಾಧ್ಯಮದಿಂದ ಅನ್ನದಲ್ಲಿ ಪ್ರವಹಿಸಿ ಕಾರ್ಯನಿರತ ವಾಗುತ್ತವೆ. ಇಂತಹ ಅನ್ನವನ್ನು ತಿಂದರೆ ದೇಹದಲ್ಲಿ ಈ ರಜ-ತಮಾತ್ಮಕ ಲಹರಿಗಳು ಪ್ರವಾಹಿ ಪದ್ಧತಿಯಿಂದ ವೇಗವಾಗಿ ಕಾರ್ಯವನ್ನು ಮಾಡಲು ಆರಂಭಿಸುತ್ತವೆ. ಇದರಿಂದ ಯಾರ ಎಂಜಲನ್ನವನ್ನು ತಿನ್ನುತ್ತಾರೆಯೋ ಆ ವ್ಯಕ್ತಿಯ ಆಧ್ಯಾತ್ಮಿಕ ತೊಂದರೆಗಳೂ, ಇತರರ ದೇಹದಲ್ಲಿ ಸಂಕ್ರಮಿತವಾಗಿ ಅನ್ನದ ಮೂಲಕ ಶರೀರದ ಟೊಳ್ಳುಗಳಲ್ಲಿ ನೇರವಾಗಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. ಕಲಿಯುಗದಲ್ಲಿ ಸಾತ್ತ್ವಿಕ ಜೀವಗಳು ಸಿಗುವುದು ಅತ್ಯಂತ ಕಠಿಣವಾಗಿರುವುದರಿಂದ, ಸಾಧ್ಯವಿದ್ದಷ್ಟು ಒಬ್ಬರ ಎಂಜಲನ್ನವನ್ನು ಇನ್ನೊಬ್ಬರು ತಿನ್ನಬಾರದು. ಆದರೆ ಸಂತರ ಚೈತನ್ಯಮಯ ಉಚ್ಛಿಷ್ಟವನ್ನು ಪ್ರಸಾದವೆಂದು ಅವಶ್ಯ ಸ್ವೀಕರಿಸಬೇಕು. ಏಕೆಂದರೆ ಈ ಚೈತನ್ಯಮಯ ಉಚ್ಛಿಷ್ಟದಿಂದ ದೇಹದಲ್ಲಿನ ಟೊಳ್ಳುಗಳ ಆಂತರಿಕ ಶುದ್ಧಿಯಾಗುತ್ತದೆ.
ಎಂಜಲು ಅನ್ನವನ್ನು ತಿನ್ನುವವನಿಗೆ, ಯಾರ ಎಂಜಲನ್ನವನ್ನು ತಿನ್ನುತ್ತಾನೆಯೋ, ಆ ಜೀವದ ಪ್ರಕೃತಿ ವೈಶಿಷ್ಟ್ಯ ಮತ್ತು ತ್ರಿಗುಣಗಳ ಪ್ರಮಾಣದಿಂದ ತೊಂದರೆಯಾಗುವ ಸಾಧ್ಯತೆಯಿರುತ್ತದೆ : ಪರಸ್ಪರರ ಎಂಜಲನ್ನವನ್ನು ತಿಂದರೆ ಎಂಜಲನ್ನವನ್ನು ತಿಂದವನು ಆ ಅನ್ನದ ಮೂಲಕ ಇನ್ನೊಂದು ಜೀವದ ಪ್ರಕೃತಿ ವೈಶಿಷ್ಟ್ಯಗಳಿಂದ ತುಂಬಿದ ಗುಣಗಳ ನೇರ ಸಂಪರ್ಕಕ್ಕೆ ಬರುತ್ತಾನೆ. ಇದರಿಂದ ಆ ಪ್ರಕೃತಿಗೆ ಸಂಬಂಧಿಸಿದ ತತ್ತ್ವ ಮತ್ತು ವೈಶಿಷ್ಟ್ಯಗಳು ಅನ್ನವನ್ನು ತಿಂದ ಜೀವದ ಕಡೆಗೆ ಬರುತ್ತವೆ.
ಪ್ರತಿಯೊಂದು ಜೀವದ ಪ್ರಕೃತಿಯು ವಿಭಿನ್ನವಾಗಿರುವುದರಿಂದ, ಇನ್ನೊಂದು ಜೀವದ ಅನ್ನವನ್ನು ತಿನ್ನುವ ಜೀವಕ್ಕೆ ಆ ಜೀವದ ಪ್ರಕೃತಿ-ವೈಶಿಷ್ಟ್ಯಗಳು ಮತ್ತು ತ್ರಿಗುಣಗಳ ಪ್ರಮಾಣದಿಂದಾಗಿ ತೊಂದರೆಯಾಗಬಹುದು. ಹಾಗೆಯೇ ಆಹಾರಪದಾರ್ಥಗಳು ಆ ಜೀವದ ದೇಹದಲ್ಲಿನ ಘಟಕಗಳಿಂದ ಕೂಡಿರುವುದರಿಂದ, ಇನ್ನೊಂದು ಜೀವವು ಅವುಗಳನ್ನು ತಿಂದಾಗ ಅದರ ದೇಹದಲ್ಲಿನ ಸೂಕ್ಷ್ಮ-ವಾಯುವಿನ ಸಂಚಾರಕ್ಕೆ ಅಡಚಣೆಯುಂಟಾಗಿ ಜೀವಕ್ಕೆ ವಿವಿಧ ರೀತಿಯ ರೋಗಗಳಾಗುವ ಸಾಧ್ಯತೆಯಿರುತ್ತದೆ. ಹಾಗೆಯೇ ಓರ್ವ ಉಚ್ಚ ಮಟ್ಟದ ವ್ಯಕ್ತಿಯ ಅಥವಾ ಕೆಟ್ಟ ಶಕ್ತಿಗಳ ತೊಂದರೆಯಿರುವ ಜೀವದ ಎಂಜಲನ್ನವನ್ನು ತಿಂದಾಗ, ಸಾಮಾನ್ಯ ಜೀವಕ್ಕೆ ಅದರಲ್ಲಿನ ಚೈತನ್ಯ ಅಥವಾ ಕಪ್ಪು ಶಕ್ತಿಯಿಂದ ತೊಂದರೆಯಾಗಬಹುದು. ಆದುದರಿಂದ ಹಿಂದೂ ಸಂಸ್ಕೃತಿಯಲ್ಲಿ ‘ಒಬ್ಬರ ಎಂಜಲನ್ನವನ್ನು ಇನ್ನೊಬ್ಬರು ತಿನ್ನಬಾರದು’ ಎಂದು ಹೇಳಲಾಗಿದೆ.