ವಾರದಲ್ಲಿ ಎರಡು ಬಾರಿ ಈ ರೀತಿ ಮಾಡಿದರೆ ಸಾಕು ನಿಮ್ಮ ಮುಖದಲ್ಲಿರುವ ಎಲ್ಲಾ ಸಣ್ಣ ರಂದ್ರಗಳು ಮಾಯವಾಗಿಬಿಡುತ್ತದೆ..!

0
2373

ಹೊರಪ್ರಪಂಚಕ್ಕೆ ಕೆಟ್ಟದಾಗಿ ಕಾಣಲು ಯಾರು ಇಷ್ಟಪಡುತ್ತಾರೆ ಹೇಳಿ, ಮುಖದ ಸೌಂದರ್ಯ ಮನುಷ್ಯನ ಆತ್ಮವಿಶ್ವಾಸವನ್ನು ಹೆಚ್ಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ, ಎಲ್ಲರೊಂದಿಗೆ ಬೆರೆಯಬೇಕು ಎಲ್ಲರೂ ನಮ್ಮನ್ನು ಒಪ್ಪಿಕೊಳ್ಳಬೇಕು ನಮಗೆ ನಮ್ಮದೇ ಆದ ಗೌರವ ಅಥವಾ ಮಾನ್ಯತೆ ದೊರೆಯಲೇ ಬೇಕು ಎಂದಾದರೆ ನಾವು ನೋಡಲು ಆಕರ್ಷಕವಾಗಿ ಕಾಣಬೇಕು ಅಲ್ಲವೇ, ಆದರೆ ಮುಖದ ಚರ್ಮದ ರಂಧ್ರಗಳು ನಿಮಗೆ ಸಮಸ್ಯೆ ನೀಡುತ್ತಿದ್ದರೆ ಅದಕ್ಕೆ ಇಂದು ನಾವು ಸೂಕ್ತ ಪರಿಹಾರವನ್ನು ತಿಳಿಸುತ್ತೇವೆ.

ಮುಖದ ಚರ್ಮದ ರಂಗಗಳಲ್ಲಿ ಸತ್ತ ಚರ್ಮದ ಕೋಶಗಳು, ಧೂಳು ಮತ್ತು ಪರಿಸರದ ಕಲ್ಮಶಗಳು ತುಂಬಿಕೊಂಡಾಗ, ಮೊಡವೆಗಳು, ಕೆರೆತ ಇತರ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ, ಆದ್ದರಿಂದ ಚರ್ಮದ ರಂಧ್ರಗಳನ್ನು ಶುದ್ಧೀಕರಿಸಲು ಮನೆಯಲ್ಲಿಯೇ ಮಾಡಬಹುದಾದ ಸುಲಭ ವಿಧಾನಗಳನ್ನು ತಿಳಿಸಿ ಕೊಡುತ್ತೇವೆ.

ಈ ಕೆಳಗೆ ನೀಡಿರುವ ವಿಧಾನಗಳಲ್ಲಿ ಯಾವುದಾದರೂ ಒಂದು ವಿಧಾನವನ್ನು ವಾರದಲ್ಲಿ ಎರಡು ಬಾರಿ ಬಳಸುವುದರಿಂದ, ತ್ವಚೆಯ ಚರ್ಮದ ರಂದ್ರವ ಶುದ್ಧವಾಗಿ ಮುಖ ಕಾಂತಿಯುತವಾಗಿ ಕಾಣುತ್ತದೆ.

ಬಿಸಿನೀರಿನ ಹಬೆ : ಪ್ರಪಂಚದಾದ್ಯಂತ ಚರ್ಮದ ರಂಧ್ರ ಗಳಲ್ಲಿನ ಕಲ್ಮಶವನ್ನು ತೆಗೆಯಲು ಬಳಸುವ ಬಹಳ ಪ್ರಚಲಿತ ವಿಧಾನಗಳಲ್ಲಿ ಒಂದು ಬಿಸಿ ನೀರಿನ ಹಬೆ, ತ್ವಚೆಗೆ ವಾರದಲ್ಲಿ ಎರಡು ಬಾರಿ ಬಿಸಿನೀರಿನ ಹಬೆ ಕೊಡುವುದರಿಂದ ಕೇಂದ್ರಗಳಲ್ಲಿನ ಕಲ್ಮಶಗಳು ಕಿತ್ತು ಹೊರಗೆ ಬರುತ್ತವೆ, ಜೊತೆಯಲ್ಲಿ ಮೊಡವೆಗಳ ಸಮಸ್ಯೆ ನಿವಾರಣೆಯಾಗುತ್ತದೆ.

ಅಡುಗೆ ಸೋಡಾ ಬಳಕೆ : ಒಂದು ಚಮಚ ಅಡುಗೆ ಸೋಡಾವನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ನಂತರ ಆ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು, ಐದು ಅಥವಾ ಹತ್ತು ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು, ಹೀಗೆ ಮಾಡುವುದರಿಂದ ರಂದ್ರಗಳ ಒಳಗೆ ಹೋಗಿ ಅಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ.

ಮಾರುಕಟ್ಟೆಯಲ್ಲಿ ಸಿಗುವ ಸ್ಕ್ರಬ್ : ಚರ್ಮದ ಮೇಲೆ ಇರುವ ಸತ್ತ ಜೀವಕೋಶಗಳನ್ನು ಸುಚಿ ಮಾಡಲೇಬೇಕು ಆದ್ದರಿಂದ ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ರೀತಿಯ ಸ್ಕ್ರಬ್ ಬಳಸಬಹುದು, ಇವುಗಳು ಕೇವಲ ಒಂದು ನಿಮಿಷದಲ್ಲಿ ನಿಮ್ಮ ಮುಖ ಚರ್ಮದ ರಂಧ್ರಗಳನ್ನು ಶುದ್ದಿ ಪಡಿಸುತ್ತವೆ ಆದರೆ ನಿಮ್ಮ ಚರ್ಮಕ್ಕೆ ಒಂದು ಕೊಳ್ಳುವ ಸ್ಕ್ರಬ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಕಲ್ಲಿದ್ದಲಿನ ಮಾಸ್ಕ್ : ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವ ಮಾತಿನಂತೆ ಮುಖದ ಚರ್ಮದ ರಂಗದಲ್ಲಿನ ಕಪ್ಪು ಕಲ್ಮಶವನ್ನು ತೆಗೆಯಲು ಇದ್ದಿಲಿನ ಕಪ್ಪನ್ನು ಬಳಸಬೇಕು, ಕಲ್ಲಿದ್ದಲನ್ನು ಬಳಸಿ ನೀವು ಮನೆಯಲ್ಲಿಯೇ ಕಲ್ಲಿದ್ದಲಿನ ಪೇಸ್ಟ್ ತಯಾರು ಮಾಡಬಹುದು ಅಥವಾ ಇದು ಮಾರುಕಟ್ಟೆಯಲ್ಲಿ ದೊರೆಯುತ್ತದೆ, ರಂದ್ರಗಳನ್ನು ಶುದ್ಧೀಕರಿಸುವಲ್ಲಿ ಇದು ಬಹಳ ಪ್ರಮುಖ ಪಾತ್ರ ವಹಿಸುತ್ತದೆ.

ನಿಂಬೆಯ ಚಿಕಿತ್ಸೆ : ಮಾರುಕಟ್ಟೆಯಿಂದ ತಂದು ಬಳಸುವ ನಿಮ್ಮ ಯಾವುದೇ ಸ್ಕ್ರಬ್ ಪೇಸ್ಟ್ ಗಳಲ್ಲಿ ಎರಡು ಹನಿ ನಿಂಬೆರಸ ಅಥವಾ ಜೇನನ್ನು ಬೆರೆಸಿ ಬಳಸಿದರೆ ಬಹುಬೇಗ ಫಲಿತಾಂಶ ದೊರೆಯುವುದು, ನಿಂಬೆಹಣ್ಣಿನಲ್ಲಿ ಆಮ್ಲಿಯ ಗುಣಗಳು ಹೆಚ್ಚಾಗಿ ಇರುವುದರಿಂದ ರಂದ್ರ ಗಳಲ್ಲಿರುವ ಕಲ್ಮಶಗಳನ್ನು ಮತ್ತು ವಿಷವನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತದೆ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.

LEAVE A REPLY

Please enter your comment!
Please enter your name here