ಸಾಮಾನ್ಯವಾಗಿ ಕರ್ನಾಟಕದಲ್ಲಿ ತೊಗರಿ ಬೇಳೆಯನ್ನು ಅಡುಗೆಗೆ ಅತಿ ಹೆಚ್ಚು ಬಳಸುವುದು ಉಂಟು, ಆದರೆ ಈ ಬೇಳೆ ಆರೋಗ್ಯಕ್ಕೆ ಯಾವ ರೀತಿಯ ಪರಿಣಾಮವನ್ನ ಬೀರುತ್ತದೆ ಅಂತ ನಿಮಗೆ ತಿಳಿದರೆ ಆಶ್ಚರ್ಯ ಪಡುತ್ತೀರಿ, ಇಂದು ನಾವು ನಿಮಗೆ ತೊಗರಿಬೇಳೆಯು ಮನುಜನ ಆರೋಗ್ಯದ ಮೇಲೆ ಬೀರುವ ಕೆಲವು ವಿಚಾರಗಳನ್ನ ತಿಳಿಸುತ್ತೇವೆ.
ತೊಗರಿಬೇಳೆಯನ್ನು ಹೆಚ್ಚಾಗಿ ಸೇವಿಸುವುದರಿಂದ ಮಲಬದ್ಧತೆ ಉಂಟಾಗುವುದು ಮತ್ತು ಆಮ್ಲತೆ ಉಂಟಾಗುವುದು, ಈ ಬೇಳೆಯನ್ನು ಹೊಟ್ಟೆ ಹುಣ್ಣು, ಕರುಳಿನ ಹುಣ್ಣು ಮತ್ತು ಹೃದ್ರೋಗದಿಂದ ನರಳುವವರು ಉಪಯೋಗಿಸದೇ ಇರುವುದು ಲೇಸು.
ತೊಗರಿ ಬೆಳೆಯ ಕಟ್ಟನ್ನು ದುರ್ಬಲರಿಗೂ, ಮಕ್ಕಳಿಗೂ ದ್ರವರೂಪದ ಆಹಾರವಾಗಿ ಕೊಡುವುದರಿಂದ ಉಪಯೋಗಗಳು ಉಂಟು.
ಅತಿ ಹೆಚ್ಚು ತೊಗರಿ ಬೇಳೆಯನ್ನು ಪ್ರತಿನಿತ್ಯ ಸೇವಿಸುವುದರಿಂದ ಹಲವು ರೋಗ ಉಂಟಾಗುವುದೆಂದು ಹೈದರಾಬಾದಿನ ಆಹಾರ ಸಂಶೋಧನಾ ಸಂಸ್ಥೆಯ ಪ್ರಯೋಗಗಳಿಂದ ತಿಳಿದುಬಂದಿದೆ.
ತೊಗರಿಬೇಳೆಯನ್ನು ಬಿಸಿನೀರಿನಲ್ಲಿ ಒಂದು ಗಂಟೆ ಕಾಲ ನೆನೆಹಾಕಿ ನಂತರ ಆ ನೀರನ್ನು ಚೆಲ್ಲಿ ಬೇಳೆಯನ್ನು ತೊಳೆದು ಒಣಗಿಸಿ ಉಪಯೋಗಿಸಿದರೆ ಉಂಟಾಗುವುದಿಲ್ಲ ಅಥವಾ ಬೇಳೆಯನ್ನು ಬಿಸಿ ನೀರಿನಲ್ಲಿ ನೆನೆ ಹಾಕಿ ಸುಮಾರಾಗಿ ಬೇಯಿಸಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಉಪಯೋಗಿಸಿದರು ಯಾವುದೇ ಆರೋಗ್ಯಕರ ಹಾನಿ ಇರುವುದಿಲ್ಲ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.