ಭಗವಂತನ ಪೂಜೆ ಎಂಬುದು ಅತಿ ಶ್ರೇಷ್ಠವಾದ ಕೆಲಸ, ನಮ್ಮ ಸಕಲ ಸಮಸ್ಯೆಗಳನ್ನು ನಾವು ಯಾರೊಂದಿಗೂ ಅಷ್ಟಾಗಿ ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ ಹಾಗೂ ನಮಗೆ ಸಹಾಯ ಮಾಡಿ ಎಂದು ಅಂಗಲಾಚಿ ಬೇಡುವುದು ಇಲ್ಲ, ಆದರೆ ಆ ದೇವನ ಮುಂದೆ ನಾವು ಮನಸಾರೆ ನಮ್ಮ ಕಷ್ಟಗಳನ್ನು ಹೇಳಿಕೊಂಡು ಪರಿಹಾರವನ್ನು ಕೇಳಿಕೊಳ್ಳುತ್ತೇವೆ, ಮನುಷ್ಯನಿಗೂ ದೇವರಿಗೂ ಮಧ್ಯೆ ಇದೊಂದು ಅಪರೂಪದ ನಂಟು ಇರುವುದು ಸತ್ಯ, ಇನ್ನು ಭಗವಂತನನ್ನು ಖುಷಿಪಡಿಸಲು ಮನುಷ್ಯ ಚಿನ್ನ ವೈಡೂರ್ಯಗಳಿಂದ ಪೂಜೆ ಮಾಡುತ್ತಾನೆ, ನಾನಾ ಬಗೆಯ ಹೂವುಗಳು ಹಲವು ಬಗೆಯ ಹಣ್ಣುಗಳನ್ನು ನೈವೇದ್ಯಕ್ಕೆ ಇಡುತ್ತಾರೆ, ಶ್ರೀಮಂತ ಇದನ್ನೆಲ್ಲ ಮಾಡುತ್ತಾನೆ ಆದರೆ ಬಡವನು ಮಾಡಬೇಕು, ದೇವರಿಗೆ ಶ್ರೀಮಂತ-ಬಡವ ಎನ್ನುವ ತಾರತಮ್ಯ ಇಲ್ಲ, ವಜ್ರ ವೈಡೂರ್ಯ ಕಿಂತ ಶ್ರೇಷ್ಠವಾದ ಎರಡು ಹಣ್ಣುಗಳನ್ನು ನಾವಿಂದು ನಿಮಗೆ ತಿಳಿಸುತ್ತೇವೆ, ಇದನ್ನು ಭಗವಂತನಿಗೆ ಅರ್ಪಿಸಿ ಪೂಜೆ ಮಾಡಿದರೆ ಸಾಕು, ಭಗವಂತ ನಿಮ್ಮ ಭಕ್ತಿಗೆ ಬೇಗ ಒಲಿಯುತ್ತಾನೆ.
ಭಗವಂತನ ಪೂಜೆ ಮಾಡುವ ಮೊದಲು ಮನಸ್ಸು ಸ್ವಚ್ಛವಾಗಿರಬೇಕು, ಮನೆ ಶುದ್ಧವಾಗಿರಬೇಕು, ಮನಸ್ಸಿನಲ್ಲಿ ಯಾವುದೇ ರೀತಿಯ ಗೊಂದಲಗಳು ಅಥವಾ ಕಿರಿಕಿರಿ ಇರಬಾರದು, ಭಗವಂತನಿಗೆ ಪೂಜೆ ಮಾಡಬೇಕಾದರೆ ಮನೆ ಮತ್ತು ಮನಸ್ಸು ಶಾಂತಿಯಾಗಿ ಇರಬೇಕು, ಪೂಜೆ ಮಾಡುವಾಗ ಏಕಾಗ್ರತೆ ಕಾಯ್ದುಕೊಳ್ಳಬೇಕು, ನಿಜವಾದ ಮಡಿ-ಮೈಲಿಗೆ ಏನು ಎಂದು ಅರಿತುಕೊಳ್ಳಬೇಕು ನಂತರ ಪೂಜೆಗೆ ಮುಂದಾಗಿ.
ದೇವರ ಪೂಜೆಗೆ ನಾವು ಅರ್ಪಿಸುವುದು ಅಲ್ಪ ವಾಗಿದ್ದರೂ ಅದು ಶ್ರೇಷ್ಠವಾಗಿ ಇರಬೇಕು, ಪೂಜೆಗೆ ಸಾಮಾನ್ಯವಾಗಿ ಬಳಸುವುದು ಐದು ತರಹದ ಹಣ್ಣುಗಳನ್ನು ಬಳಸುತ್ತಾರೆ ಆದರೆ ಇಂದು ನಾವು ನಿಮಗೆ ಎರಡು ರೀತಿಯ ಫಲಗಳನ್ನು ತಿಳಿಸುತ್ತೇವೆ, ಹನುಮಂತನ ಪೂಜೆಗೆ ಅರ್ಪಣೆ ಮಾಡಿದರೆ ಸಾಕು, ಅದು ತೆಂಗಿನಕಾಯಿ ಮತ್ತು ಬಾಳೆಹಣ್ಣು.
ಬಾಳೆಹಣ್ಣು ಮತ್ತು ಸಿಪ್ಪೆ ಸುಲಿದ ತೆಂಗಿನಕಾಯಿಯನ್ನು ಪೂರ್ಣ ಫಲವೆಂದು ದೇವರಿಗೆ ಕಾಲದಿಂದಲೂ ಮಾಡುತ್ತಾ ಬಂದಿದ್ದೇವೆ, ಯಾಕೆ ನಾವು ಎರಡು ಹಣ್ಣುಗಳನ್ನು ಮಾತ್ರ ದೇವರಿಗೆ ಪವಿತ್ರವೆಂದು ಅರ್ಪಣೆ ಮಾಡುತ್ತೇವೆ, ಎರಡು ಹಣ್ಣುಗಳು ಯಾಕೆ ಅಷ್ಟೊಂದು ಶ್ರೇಷ್ಠ ಎಂಬುದು ಗೊತ್ತೇ.
ಸಾಮಾನ್ಯವಾಗಿ ಹಣ್ಣುಗಳ ನೆಲಕ್ಕೆ ತಾಗಿದರೆ ನೆಲದ ಮೇಲೆ ಬಿದ್ದು ಆ ಬೀಜಗಳು ಮತ್ತೊಂದು ಗಿಡವಾಗಿ ಮರು ಜನ್ಮವನ್ನು ಪಡೆಯುತ್ತವೆ, ಆದರೆ ನಿಮಗೆ ನೆನಪಿರಲಿ ಬಾಳೆಹಣ್ಣನ್ನು ನೀವು ನೆಲದ ಮೇಲೆ ಬಿಸಾಡಿದರೆ ಅದಕ್ಕೆ ಮರುಜನ್ಮ ವಿಲ್ಲ, ಬಾಳೆಹಣ್ಣು ಬೆಳೆಯಬೇಕಾದರೆ ಅದು ಕಂದಕದಿಂದ ಹುಟ್ಟುತ್ತದೆ, ಮರುಜನ್ಮ ವಿಲ್ಲದ ಇದೇ ಕಡೆ ಜನ್ಮ ವಾದ ಹಣ್ಣು ಎಂದರೆ ಅದು ಬಾಳೆಹಣ್ಣು, ಹಾಗೂ ಸಿಪ್ಪೆ ಸುಲಿದ ತೆಂಗಿನಕಾಯಿಯನ್ನು ಸಹ ನೀವು ನೆಲದ ಮೇಲೆ ಬಿಸಾಡಿದ್ದಾರೆ ಅದಕ್ಕೂ ಮರುಜನ್ಮ ವಿಲ್ಲ, ಆದ್ದರಿಂದ ಈ ಎರಡು ಹಣ್ಣುಗಳನ್ನು ಬಹಳ ಶ್ರೇಷ್ಠ ಎಂದು ನಂಬಲಾಗುತ್ತದೆ, ಉಳಿದ ಎಲ್ಲಾ ಹಣ್ಣುಗಳು ಇತರ ಜೀವಿಗಳು ಪಕ್ಷಗಳು ಅಥವಾ ಪ್ರಾಣಿಗಳು ತಿಂದು ಬಿಸಾಕಿ ರುವ ಹಣ್ಣಿನ ಬೀಜದಿಂದ ಹುಟ್ಟಿರುತ್ತವೆ, ಆದರೆ ತೆಂಗು ಮತ್ತು ಬಾಳೆಹಣ್ಣು ಪವಿತ್ರತೆಯನ್ನು ಕಾಯ್ದು ಕೊಂಡಿರುತ್ತವೆ, ಹಾಗಾಗಿ ದೇವರ ಪೂಜೆಗೆ ಎರಡು ಪಾದಗಳನ್ನು ತಪ್ಪದೆ ಬಳಸಿ, ಭಗವಂತನ ಸಂತೋಷಕ್ಕೆ ಪಾತ್ರರಾಗಿ.